ಪೋಲಿಸ್ ಇಲಾಖೆಯವರಿಂದ ಜಾತ್ರಾ ಆವರಣ ಸ್ವಚ್ಛತಾ ಕಾರ್ಯ

ಕೊಪ್ಪಳ: ಪೋಲಿಸರೆಂದರೆ ಕೇವಲ ಕಾನೂನಿನ ಪರಿಪಾಲಕರಷ್ಟೇ ಅಲ್ಲ. ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವವರು ಹೌದು ಎಂಬುದನ್ನು ಕೊಪ್ಪಳ ಜಿಲ್ಲಾ ಪೋಲಿಸ್ ಇಲಾಖೆಯವರು ಇಂದು ತೋರ್ಪಡಿಸಿದರು.
ನಗರದ ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಆವರಣದಲ್ಲಿ ಇಂದು ಸ್ವತ: ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಜಿ.ಸಂಗೀತಾ ಕಸಗೂಡಿಸುವದರ ಮೂಲಕ ತಮ್ಮ ಸೇವೆಗೈದಿದ್ದಾರೆ. ಅವರು ಇಂದು ಬೆಳಿಗ್ಗೆ ೫.೩೦ ರಿಂದ ೮ ಗಂಟೆಯವರೆಗೆ ಶ್ರೀಗವಿಸಿದ್ಧೇಶ್ವರ ಮಠದ ಗುಡ್ಡ, ದಾಸೋಹ ಭವನ, ಜಾತ್ರಾ ಆವರಣ, ರಸ್ತೆ, ಮೊದಲಾದ ಕಡೆ ತಾವು, ಅಧಿಕಾರಿಗಳು ಹಾಗೂ ಸುಮಾರು ೨೦೦ ಕ್ಕೂ ಹೆಚ್ಚೂ ಪೋಲಿಸ್ ಸಿಬ್ಭಂಧಿಯೊಂದಿಗೆ ಗವಿಮಠದ ಆವರಣಕ್ಕೆ ಆಗಮಿಸಿ ಅಲ್ಲಿನ ಕಸ, ಕಡ್ಡಿ, ತ್ಯಾಜ್ಯವಸ್ತುಗಳನ್ನು ತೆಗೆದುಹಾಕಿ ಧೂಳು ಮಕ್ತಗೊಳಿಸಿ ಜಾತ್ರಾ ಆವರಣವನ್ನು ಸ್ವಚ್ಛಗೊಳಿಸುವಂತಹ ಕಾಯಕದಲ್ಲಿ ತೊಡಗಿರುವದು ಕಂಡು ಬಂದಿತು. ಈ ಸಂದರ್ಭದಲ್ಲಿ ಡಿ.ಸಿ.ಪಿ ಶಶಿಧರ, ಅಸಿಸ್ಟಂಟ್ ಕಮಾಂಡೆಟ್ ಸತೀಶ ಇ, ಆರ್.ಪಿ.ಐ ನಿಂಗಪ್ಪ, ಸಿ.ಪಿ.ಐ ಮೋನೇಶ್ವರ ಪಾಟೀಲ, ಸಿ.ಪಿ.ಐ ಮಹಾಂತೇಶ ಸಜ್ಜನ್, ಸಿ.ಪಿ.ಐ ನಾಗರೆಡ್ಡಿ. ಪಿ.ಎಸ್.ಐ ಗಳಾದ ಸುರೇಶ, ಬಸವರಾಜ, ಸುಪ್ರೀತ್ ಪಾಟೀಲ, ದುರ್ಗಪ್ಪ ಪಾಟೀಲ, ಮದಕರಿನಾಯಕ ಹಾಗೂ ಅನೇಕ ಸಿಬ್ಬಂಧಿವರ್ಗ ಇದ್ದರು. ಪೋಲಿಸ್ ಇಲಾಖೆಯವರ ಈ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು.

ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಸೇವೆ

ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಆವರಣದಲ್ಲಿ ಇಂದು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ ಮತ್ತು ಗೈಡ್ಸ ಹಾಗೂ ರೋವರ್‍ಸ ಮತ್ತು ರೇಂಜರ್‍ಸ ವಿಭಾಗದಿಂದ ೩೦ ಕ್ಕೂ ಹೆಚ್ಚೂ ವಿದ್ಯಾರ್ಥಿಗಳು, ಕುಷ್ಟಗಿಯ ೨೦ ವಿದ್ಯಾರ್ಥಿಗಳು ಜಾತ್ರಾ ಆವರಣದಲ್ಲಿ ಬಿದ್ದರುವ ಅನೇಕಾನೇಕ ತ್ಯಾಜ್ಯ ವಸ್ತುಗಳನ್ನು , ಪ್ಲಾಸ್ಟಿಕ್ ಚೀಲಗಳನ್ನು ತೆಗೆದು ಹಾಕಿದರು. ಅಲ್ಲದೇ ವಿದ್ಯಾರ್ಥಿಗಳು ಸಹ ಕಸಗೂಡಿಸುವದರ ಆವರಣದ ಸ್ವಚ್ಛತಾಕಾರ್ಯದಲ್ಲಿ ಅಳಿಲು ಸೇವೆಯನ್ನು ಸಲ್ಲಿಸಿದ್ದಾರೆ, ಶಿಕ್ಷಕ ಪ್ರಲ್ಹಾದ್ ಇತರರು ಇದ್ದರು.

Please follow and like us:
error