ಪೋಲಿಸರಿಗೆ, ಕಾರ್ಮಿಕರಿಗೆ, ಜನಸಾಮಾನ್ಯರಿಗೆ ಆಹಾರ,ಹಣ್ಣು, ಹಂಪಲು ವಿತರಿಸಿದ ಯುವಪಡೆ

Kannadanet

,

ಕೊಪ್ಪಳ : ಮಹಾಮಾರಿ ಕರೋನಾ ನಿಯಂತ್ರಣಕ್ಕೆ ಕರ್ಪ್ಯೂ ಹಾಕಲಾಗಿದೆ. ಸುಡು ಬಿಸಿಲಿನಲ್ಲಿ ಅನಾವಶ್ಯಕವಾಗಿ ತಿರುಗಾಡುವವರನ್ನು ನಿಯಂತ್ರಿಸಲು ಪೋಲಿಸರು ಕರ್ತವ್ಯಕ್ಕಿಳಿದಿದ್ದಾರೆ. ಕೆಲಸಕ್ಕೆಂದು, ಆಸ್ಪತ್ರೆಗೆಂದು ಬಂದ ಜನಸಾಮಾನ್ಯರು ಆಹಾರ ನೀರಿಲ್ಲದೇ ಕಂಗಾಲಾಗುವಂತಾಗಿದೆ.

ಈ ಸಂದರ್ಭದಲ್ಲಿ ಕೊಪ್ಪಳದ ಕೆಲ ಯುವಕರು ಅವರ ನೆರವಿಗೆ ಮುಂದಾಗಿದ್ದಾರೆ. ಯುವ ಮುಖಂಡ ಕೌಶಲ್ ಚೋಪ್ರಾ ನೇತೃತ್ವದಲ್ಲಿ ಪ್ರತಿದಿನ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು, ಜನಸಾಮಾನ್ಯರು, ಪೋಲಿಸರು, ಕರೋನಾ ವಾರಿಯರ್ಸ, ಕಾರ್ಯಕರ್ತರ ಹಸಿವು ನೀಗಿಸಲು ಮುಂದಾಗಿದ್ದಾರೆ. ಪ್ರತಿದಿನ ಆಹಾರ, ಮಜ್ಜಿಗೆ, ನೀರು ಹಣ್ಣು ಹಂಪಲಗಳನ್ನು ವಿತರಿಸುತ್ತಿದ್ದಾರೆ.  ಪ್ಯಾಕ್ ಮಾಡಿದ ಪೊಟ್ಟಣಗಳನ್ನು ಕೊಪ್ಪಳ ನಗರದಾದ್ಯಂತ ಹಂಚುವ ಕೆಲಸ ಮಾಡುತ್ತಿದ್ದಾರೆ.  ಇಂದು ನಗರದ ಗಂಜ್ ಸರ್ಕಲ್, ಅಶೋಕ್ ಸರ್ಕಲ್, ಬಸ್ ಸ್ಟಾಂಡ್,ನ ಗಡಿಯಾರ ಕಂಬದ ಬಳಿ ಸೇರಿದಂತೆ ಇತರೆಡೆ ಪೊಟ್ಟಣಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ  ಮಂಜುನಾಥ, ವಿನಯ, ಚನ್ನು,ನವೀನ, ಸೋಹನ್ ಸೇರಿದಂತೆ ಇತರರು ಭಾಗೀಯಾಗಿದ್ದರು.

ನಮ್ಮಿಂದಾದ ಕೆಲಸವನ್ನು, ಸಹಾಯವನ್ನು ನಾವು ಮಾಡುತ್ತಿದ್ದೇವೆ. ನಮ್ಮನ್ನು ನೋಡಿ ಇತರರು ಬೇರೆಯವರ ಸಹಾಯಕ್ಕೆ ಮುಂದಾದರೆ ಅದೇ ಸಾರ್ಥಕ ಎನ್ನುತ್ತಾರೆ ಕೌಶಲ್ ಚೋಪ್ರಾ. 

Please follow and like us:
error