ಪೆಟ್ರೋಲ್ , ಡೀಸೆಲ್ ಗ್ಯಾಸ್ ಬೆಲೆಯೇರಿಕೆ ವಿರೋಧಿಸಿ ಸಿಪಿಎಂ ಪ್ರತಿಭಟನೆ

.Kannadanet : ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆಯು ಜನಸಾಮಾನ್ಯರ, ಮಧ್ಯಮವರ್ಗದವರ, ಬದುಕುನ್ನು ದುಸ್ತರವಾಗಿದೆ ಕೇಂದ್ರ ಸರ್ಕಾರದ ಡೀಸೆಲ್, ಪೆಟ್ರೋಲ್, ಬೆಲೆ ಏರಿಸುವ ಮೂಲಕ ಅಗತ್ಯ ವಸ್ತುಗಳ ಬೆಲೆಯೇರಿಕೆ   ಖಂಡಿಸಿ ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳು ಅಗತ್ಯವಸ್ತುಗಳ ಬೆಲೆಗಳನ್ನು ನಿಯಂತ್ರಣಕ್ಕೆ ತರಬೇಕೆಂದು ಇಂದು ಸಿಪಿಎಂ ನೇತೃತ್ವದಲ್ಲಿ ಅಶೋಕ್ ವೃತ್ತದ ಹತ್ತಿರ ಪ್ರತಿಭಟನೆ ಮಾಡಲಾಯಿತು

ಮೋದಿ ಸರ್ಕಾರ ೨೦೧೪ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಬೆಲೆ ೭೨ರ ಆಸುಪಾಸಿನಲ್ಲಿತ್ತು ಆಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಕಚ್ಚಾತೈಲದ ಬೆಲೆ ೧ ಬ್ಯಾರೆಲ್ ಗೆ ೧೧೦ ಡಾಲರ್ ಆಸುಪಾಸಿನಲ್ಲಿತ್ತು ಈಗ ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ೫೬ ಡಾಲರ್ಗೆ ಇಳಿದಿದೆ ೨೦೧೪ರ ಹೋಲಿಸಿದರೆ ಈಗ ಕಚ್ಚಾತೈಲದ ಬೆಲೆ ಅರ್ಧಕರ್ಧ ಇಳಿದಿದೆ. ಅಂದರೆ ಈಗ ೩೬ ಪೆಟ್ರೋಲ್ ಇರಬೇಕಾಗಿತ್ತು ಈಗ ೯೦ರ ಗಡಿದಾಟಿ೧೦೦ರ ರತ್ತ ಸಾಗುತ್ತಿದೆ ಹೆಚ್ಚುವರಿ ರೂ೫೪ ಎಲ್ಲಿ ಹೋಯಿತು.

ಕಚ್ಚಾ ತೈಲ ಬೆಲೆ ಇಳಿಕೆಯಿಂದ ಸಿಗಬೇಕಾದ ಪ್ರಯೋಜನವನ್ನು ಗ್ರಾಹಕರಿಗೆ ಒದಗಿಸದೆ ಅದರ ಅ? ಪ್ರಯೋಜನವನ್ನು ಕೇಂದ್ರ ಸರ್ಕಾರದ ಪಡೆಯುತ್ತಿದೆ ಈಗಾಗಲೇ ೧೧ ಕಿಂತ ಹೆಚ್ಚು ಬಾರಿ ತೈಲ ಬೆಲೆಯ ಸುಂಕವನ್ನು ಹೆಚ್ಚಿಸುವುದರ ಮೂಲಕ ಲಕ್ಷಾಂತರ ಕೋಟಿ ರೂಪಾಯಿ ಬೊಕ್ಕಸಕ್ಕೆ ಹಾಕಿಕೊಂಡಿದೆ. ಏಪ್ರಿಲ್-ನಂಬರ್ ೨೦೨೦ ಕೋವಿಡ್ ೧೯ ಅವಧಿಯಲ್ಲಿ ಕೇಂದ್ರ ಸರ್ಕಾರವು ೬೨ ಸಾವಿರ ಕೋಟಿ ರುಪಾಯಿ ಅಬಕಾರಿ ಸುಂಕವನ್ನು ಸಂಗ್ರಹಿಸಿದೆ.
ಪೆಟ್ರೋಲ್ ಬೆಲೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಕೇವಲ ರೂ ೧೦.೩೯ ಇದ್ದ ಕೇಂದ್ರ ತೆರಿಗೆ ಈಗರೂ೩೨.೯೮ ಆಗಿದೆ ಅಂದರೆ ಮೂರು ಪಟ್ಟು ಹೆಚ್ಚಾಗಿದೆ. ಅದೇ ರೀತಿಯಲ್ಲಿ ಡೀಸೆಲ್ ಇದ್ದ ಕೇಂದ್ರ ತೆರಿಗೆಯು ೩.೫೬ ಇದ್ದದ್ದು ಈಗ ರೂಪಾಯಿ೩೧.೮೩ ಆಗಿದೆ ಅಂದರೆ ಹತ್ತು ಪಟ್ಟು ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಈ ದುರಾಸೆಯಿಂದ ಅಗತ್ಯ ವಸ್ತುಗಳ ಬೆಲೆಯ ಮೇಲೆ ದು?ರಿಣಾಮ ಬೀರಿದೆ ಈ ಕಾರಣದಿಂದಾಗಿ ಯೇ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿವೆ.
ಜಗತ್ತಿನಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಗೆ ಅತಿ ಹೆಚ್ಚು ತೆರಿಗೆಯನ್ನು ವಿಧಿಸುತ್ತಿರುವ ದೇಶ ನಮ್ಮ ಭಾರತ ದೇಶವಾಗಿದೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಅಬಕಾರಿ ಸುಂಕದ ಹೆಸರಿನಲ್ಲಿ ಜನರಿಂದ ಲೂಟಿ ಮಾಡುತ್ತಿರುವಾಗಲೇ ಮೋದಿ ಸರ್ಕಾರ ತಮ್ಮ ದೊಡ್ಡ ದೊಡ್ಡ ಬಂಡವಾಳದಾರರಿಗೆ ರೂ೯ ಲಕ್ಷ  ಕೋಟಿ ರೂಪಾಯಿ ಬ್ಯಾಂಕ್ ಸಾಲ ಮನ್ನಾ ಮಾಡಿದೆ ಸಾಮಾನ್ಯರ ಜೀವಮಾನದ ಹಾಯದ ಹಣವನ್ನು ಕಾರ್ಪೊರೇಟ್ ಕುಳಗಳಿಗೆ ಧಾರೆಯರಿದಿದೆ.
ಅಲ್ಲದೆ ಅಡುಗೆ ಅನಿಲ ಬೆಲೆಯೂ ದಿನದಿಂದ ದಿನಕ್ಕೆ ಬೆಲೆಯೇರಿಸಿ ಸುಮಾರು ಡಿs೮೫೦ ಗೆ ಹೆಚ್ಚಿಗೆ ಮಾಡಿ ಜನಸಾಮಾನ್ಯರು ದುಡಿಯುವ ಬಡ ಜನರ ಮೇಲೆ ಹೊರೆಯಾಗುವುದುನ್ನು ಖಂಡಿಸಿ ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳು ಅಗತ್ಯವಸ್ತುಗಳ ಬೆಲೆಗಳನ್ನು ನಿಯಂತ್ರಣಕ್ಕೆ ತರಬೇಕೆಂದು ಇಂದು ಸಿಪಿಎಂ ನೇತೃತ್ವದಲ್ಲಿ ಅಶೋಕ್ ವೃತ್ತದ ಹತ್ತಿರ ಪ್ರತಿಭಟನೆ ಮಾಡಲಾಯಿತು.
ಈ ಪ್ರತಿಭಟನೆಯಲ್ಲಿ ಸಿಪಿಎಂನ ತಾಲೂಕ ಕಾರ್ಯದರ್ಶಿಯಾದ ಕಾಸಿಂ ಸರ್ದಾರ್ ಮಾತನಾಡಿದರು ಪ್ರತಿಭಟನೆಯಲ್ಲಿ ಸುಂಕಪ್ಪ ಗದಗ್ ಶೇಕಪ್ಪ ಚೌಡಕಿ ಬಸವರಾಜ್ ಪಕ್ಕೀರಮ್ಮ ಮೀರ ಗನತಂಡಿ, ಅಂಬ್ರಮ್ಮ ಗದಗ್ ಬಸವ ರಾಜ್ ಗೋನಾಳ ಹುಸೇನ್ ಸಾಬ್ ನದಾಫ್ ಹುಲಗಪ್ಪ ಗೋಕಾವಿ ರಾಮಣ್ಣ ದೊಡ್ಡಮನಿ ಶಶಿಕಲಾ ಇಟಗಿ ನೇತ್ರಾವತಿ ಹಸನ್ ಸಾಬ್ ಕರಡಿ ರಾಜೇಶ್ ಸಾಬ್ ಮರಿಯಪ್ಪ ಹರಿಜನ, ಪಕ್ಕೀರಮ್ಮ ಗೌರಿಪುರ ಪರಮ ಗಡ್ಡಿ ರಾಮಕೃ? ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Please follow and like us:
error