ಪುಸ್ತಕ ಪ್ರಕಾಶನ ಒಂದು ಸಾಹಸ ಗಾಥೆ.- ಡಾ. ಚಲುವರಾಜ

KOppal: ಐತಿಹಾಸಿಕ ಸಿರಿ ಕೊಪಣಾಚಲ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಹಂಪಿ ವಿ.ವಿ.ಯ ಪ್ರಾಧ್ಯಾಪಕರಾದ ಡಾ. ಚಲುವರಾಜ ರವರು ಜಿ.ಎಸ್. ಗೋನಾಳರು ಸಾಮಾಜಿಕ ಕಾಳಜಿ ಹಾಗೂ ಕಳಕಳಿಯನ್ನು ಹೊಂದಿದವರು. ಪ್ರಸ್ತುತ ಸಂದರ್ಭಕ್ಕೆ ಪುಸ್ತಕ ಪ್ರಕಾಶನವು ಒಂದು ಸಾಹಸಗಾಥೆಯೇ ಆಗಿದೆ. ೪೭೪ಪುಟಗಳ ಕೃತಿ ೭೫ಲೇಖನಗಳನ್ನು ಹೊಂದಿದೆ, ಇಲ್ಲಿರುವ ಎಲ್ಲ ಲೇಖನಗಳೂ ಯಾವುದೇ ಒಂದು ಧರ್ಮ, ಸಮುದಾಯ, ಜಾತಿ, ಕೋಮಿಗೆ ಸಂಬಂಧಿಸಿದ್ದಲ್ಲ, ಬದಲಿಗೆ ಸದ್ಧರ್ಮ, ಸೌಹಾರ್ದತೆ, ಭಾವೈಕ್ಯತೆ, ಸಾರುವ ಅಂಶಗಳನ್ನು ಹೊಂದಿವೆ. ವಿಜಯನಗರ ಸಾಮ್ರಾಜ್ಯ ಕೇವಲ ಆಳುವ ವರ್ಗದ ಇತಿಹಾಸ ಹೊಂದಿದ್ದರೆ ಕೊಪ್ಪಳ ದುಡಿಯುವ ವರ್ಗದ ವಿಶೇಷ ಚರಿತ್ರೆಯಾಗಿದ್ದು, ಪ್ರಾಚೀನವಾಗಿದೆ. ಅಧ್ಯಯನ ಶೀಲರಿಗೆ ಇದೊಂದು ಚಾರಿತ್ರಿಕ ಅನನ್ಯತೆ ಹೊಂದಿರುವ ಉತ್ತಮ ಕೃತಿ ಎಲ್ಲರೂ ಓದಲೇಬೇಕಾದ ಕೃತಿ ಎಂದರು. ಮುಖ್ಯಅತಿಥಿಗಳಾದ ಮಂಜುನಾಥ ಗೊಂಡಬಾಳ ರವರು ಮಾತನಾಡಿ ಜಿ.ಎಸ್.ಗೋನಾಳರು ಸಾಂಸ್ಕೃತಿಕ ಸಂಘಟಕರಾಗಿ, ಪತ್ರಕರ್ತರಾಗಿ, ಪ್ರಕಾಶಕರಾಗಿ, ಹಾಗೂ ಬರಹಗಾರರಾಗಿ ಅಪೂರ್ವ ಸೇವೆ ಸಲ್ಲಿಸಿದ್ದಾರೆ ಎಂದು ಅಭಿನಂದಿಸಿದರು.

ವರಸಿದ್ಧಿ ವಿನಾಯಕ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ, ಮಾದಿನೂರು. ಕೊಪ್ಪಳ ಜಿಲ್ಲಾ ವಾರ್ತಾ ಪತ್ರಿಕಾ ಬಳಗ ಹಾಗೂ ಸುಮಸಿರಿ ಕನ್ನಡ ಪ್ರಕಾಶನ ಕೊಪ್ಪಳ . ಇವುಗಳ ಸಂಯುಕ್ತಾಶ್ರಯದಲ್ಲಿ ವಿಶಾಲ ಪ್ರಕಾಶನದ ರಜತ ಮಹೋತ್ಸವ ಹಾಗೂ ಸಂಪಾದಕ ಜಿ. ಎಸ್. ಗೋನಾಳರ ಐತಿಹಾಸಿಕ ಸಿರಿ ಕೊಪಣಾಚಲ ಕೃತಿ ಲೋಕಾರ್ಪಣೆ, ಮಕ್ಕಳ ಕವಿಗೋಷ್ಠಿ ಹಾಗೂ ಕರುನಾಡ ಚೇತನ ಪ್ರಶಸ್ತಿ ಪುರಸ್ಕಾರ ಸಮಾರಂಭವು ಕೊಪ್ಪಳ ನಗರದ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ   ಮಹಾಂತೇಶ.ಎಸ್. ಪಾಟೀಲ್. ಕಲೆ ಮತ್ತು ಸಾಹಿತ್ಯ ಪ್ರತಿ ಮನುಷ್ಯನ ಎದೆಯಲ್ಲಿ ಅಡಗಿರುತ್ತವೆ. ಅದನ್ನು ಕೆಲವರು ಅಭಿವ್ಯಕ್ತಿಗೊಳಿಸುತ್ತಾರೆ ಎಂದರು. ಬಹುತೇಕ ಪ್ರಕಾಶನ ಸಂಸ್ಥೆಗಳು ಕೇವಲ ತಮ್ಮ ಕೃತಿಗಳ ಪ್ರಕಾಶನಕ್ಕೆ ಮೀಸಲಾಗಿವೆ. ಆದರೆ ವಿಶಾಲ ಪ್ರಕಾಶನ ಆರಂಭವಾದಾಗಿನಿಂದ ಇಲ್ಲಿಯವರೆಗೆ ಉದಯೋನ್ಮುಖ ಸಾಹಿತಿಗಳ ಹಾಗೂ ನಾಡಿನ ಹಿರಿ ಕಿರಿಯ ಸಾಹಿತಿಗಳ ರಸವತ್ತಾದ ಕೃತಿಗಳಿಗೆ ಬೆಳಕು ನೀಡುವ ಮೂಲಕ ಸಾಹಿತ್ಯ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಡಾ. ಮಹಾಂತೇಶ ಮಲ್ಲನಗೌಡರ ಅವರು ಆಶಯ ವ್ಯಕ್ತಪಡಿಸಿದರು. ೧೯೯೩ರ ಕೆ.ಸಿ.ಡಿ. ಗೆಳೆಯರ ಬಳಗದ ಸ್ನೇಹಿತರಿಗೆ ಸನ್ಮಾನಿಸುತ್ತಿರುವ ಕುರಿತು ಮಾತನಾಡಿದ ಅವರು ಗೋನಾಳರು ಗೆಳೆಯರ ವಂದನ ಕಾರ್ಯಕ್ರಮದ ಹೊಸ ಪರಿಕಲ್ಪನೆಯನ್ನು ನಾಡಿಗೆ ನೀಡಿದ್ದಾರೆಂದು ಅಭಿನಂದಿಸಿದರು.

ಕೊಪ್ಪಳ ಜಿಲ್ಲಾ ಉತ್ಸವ, ಇಟಗಿ ಉತ್ಸವ, ಮಾದಿನೂರು ಉತ್ಸವ, ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ನಡೆದಂತಹ ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನಗಳ ಯಶಸ್ಸಿಗೆ ಶ್ರಮಿಸಿದವರಲ್ಲಿ ಗೋನಾಳರು ಪ್ರಮುಖರು ಎಂದು ಕಾರ್ಯಕ್ರಮದ ಅಧ್ಯಕ್ಷರಾದ ಮಹೇಶಬಾಬು ಸುರ್ವೆ ನುಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು  ಸೈಯ್ಯದ್ ಗೌಸ್ ಅಲಿ ಷಾಹ ಸುಹರ್ ವರ್ದಿ. ಪೆನಕೊಂಡ ಪೀಠ ಇವರು ವಹಿಸಿದ್ದರು. ಹಿರಿಯ ಪತ್ರಕರ್ತ ಹೆಚ್.ಎಸ್. ಹರೀಶ್, ಎಮ್.ಸಾದಿಕ್ ಅಲಿ, ಚಿತ್ರಸಾಹಿತಿ ಮಹೇಶ ಮನ್ನಾಪುರ, ಕದಳಿ ವೇದಿಕೆಯ ಜಿಲ್ಲಾಧ್ಯಕ್ಷೆ ಶ್ರೀಮತಿ ನಿರ್ಮಲಾ ಬಳ್ಳೊಳ್ಳಿ, ಕೆ.ಸಿ.ಡಿ. ಸ್ನೇಹ ಬಳಗದ ನಿಜೇಂದ್ರ. ಬಿ. ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚಿಂತನಶೀಲ ಜಿ.ಎಸ್. ಗೋನಾಳ ೯೦ರ ದಶಕದ ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳನ್ನು ನೆನೆದು, ತಮಗೆ ಮಾರ್ಗದರ್ಶನ ಮಾಡಿದ ಎಲ್ಲ ಹಿರಿಯರನ್ನು ಸ್ಮರಿಸಿ, ಧನ್ಯವಾದಗಳನ್ನು ಅರ್ಪಿಸಿದರು. ಜೊತೆಗೆ ಸ್ನೇಹದ ಕರೆಗೆ ಓಗೊಟ್ಟು ಬಂದ ಧಾರವಾಡದ ಕೆ.ಸಿ.ಡಿ.ಯ ಎಲ್ಲ ಸ್ನೇಹಿತರಿಗೆ ಅಭಿನಂದಿಸಿದರು. ಈ ಮಧ್ಯೆ ವೃತ್ತಿ ಬದುಕಿನಲ್ಲಿ ೨೫ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿದ ಜಿ.ಎಸ್.ಜಿ. ಯವರಿಗೆ ಮಾನಸ ಪ್ರಕಾಶನದ ಮಹಾಂತೇಶ ಮಲ್ಲನಗೌಡರು, ಕೆ.ಸಿ.ಡಿ. ಗೆಳೆಯರ ಬಳಗ ಹಾಗೂ ಕೊಪ್ಪಳದ ಸ್ಪೂರ್ತಿ ಗೆಳೆಯರ ಬಳಗದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.ರಜತ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡಿದ್ದ ಮಕ್ಕಳ ಕವಿಗೋಷ್ಠಿಯಲ್ಲಿ ಕು. ಅನ್ವಿಕಾ ಕೊಪ್ಲು, ಕು.ವೇದಿಕಾರಮ್ಯ, ಕು.ಮನೋಜಕುಮಾರ್. ಪವನಕುಮಾರ್. ಬಸವರಾಜ ಗೋನಾಳ. ಮೇಘರಾಜ ಗೋನಾಳ. ಹನುಮಂತಗೌಡ ಪಾಟೀಲ್ ಮುಂತಾದವರು ವೈಶಿಷ್ಟ್ಯಪೂರ್ಣ ಕವನ ವಾಚನ ಮಾಡಿದರು.
ಪ್ರಶಸ್ತಿಗೆ ಆಯ್ಕೆಯಾದ ಕೃತಿಕರ್ತೃಗಳಾದ ಶಶಿಧರ ಉಬ್ಬಳಗುಂಡಿ, ವಿನುತಾ ಹಂಚಿನಮನಿ ಹಾಗೂ ವೀರಶೆಟ್ಟಿ .ಎಂ. ಪಾಟೀಲ್. ರಿಗೆ ನಗದು ಬಹುಮಾನದ ಜೊತೆಗೆ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಲಾಯಿತು. ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಮುಖ್ಯಶಿಕ್ಷಕ ಮಂಜುನಾಥ ಚಿತ್ರಗಾರರು ಹಾಗೂ ಯುವ ಬರಹಗಾರ ರಂಗನಾಥ ಅಕ್ಕಸಾಲಿಗರ ನಿರೂಪಿಸಿದರು. ಶಿಕ್ಷಕರಾದ ಕಲ್ಲಪ್ಪ ಕವಳಕೇರಿ ಸ್ವಾಗತಿಸಿದರು. ಅನ್ನಪೂರ್ಣಮ್ಮ ಮನ್ನಾಪುರ ಪ್ರಾರ್ಥಿಸಿದರೆ, ಮೈಲಾರಪ್ಪ ಉಂಕಿರವರು ವಂದಿಸಿದರು. ಮಹಮ್ಮದ್ ಪೀರಸಾಬ್, ಗವಿಸಿದ್ದಪ್ಪ ಬಾರಕೇರ, ಶ್ರೀನಿವಾಸ ಚಿತ್ರಗಾರ, ಶಿವಕುಮಾರ ಹಿರೇಮಠ, ಉಮೇಶ ಪೂಜಾರ, ಮುನೀರ್ ಸಿದ್ದೀಕಿ. ಸಿದ್ದು ಹಿರೇಮಠ, ಸೋಮರಾಜ ಗೋನಾಳ ಮುಂತಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Please follow and like us:
error