ಪುಸ್ತಕಕ್ಕೆ ಬಹುಮಾನ ಮತ್ತು ಪ್ರಶಸ್ತಿಗಾಗಿ ಕೃತಿಗಳ ಅಹ್ವಾನ

ಕೊಪ್ಪಳ  : ವಿಶಾಲ ಪ್ರಕಾಶನ ರಜತ ಮಹೋತ್ಸವದ ನಿಮಿತ್ಯ ಲೇಖಕರ ಅತ್ಯುತ್ತಮ ಪುಸ್ತಕಗಳಿಗಾಗಿ ಬಹುಮಾನ ಹಾಗೂ ಪ್ರಶಸ್ತಿಯನ್ನು ಕೊಡಲು ತೀರ್ಮಾನಿಸಿದ್ದು, ಕರ್ನಾಟಕ ರಾಜ್ಯದ ಲೇಖಕರು-ಲೇಖಕಿಯರು ಎಲ್ಲಾ ಪ್ರಕಾರದ ಪುಸ್ತಕಗಳನ್ನು, ತಮ್ಮ ೨೦೧೮ ರಿಂದ ೨೦೨೦ ಡಿಸೆಂಬರ್ ೩೧ ರವರೆಗೆ ಪ್ರಕಟಗೊಂಡಿರುವ ಪುಸ್ತಕಗಳನ್ನು ಮೂರು ಪ್ರತಿಗಳನ್ನು ಕಳುಹಿಸಿಕೊಡಲು ಕೋರಲಾಗಿದೆ. ಆಯ್ಕೆ ಸಮಿತಿಯಲ್ಲಿ ಆಯ್ಕೆಗೊಂಡ ಕೃತಿಗೆ ಪ್ರಥಮ ರೂ.೩೦೦೦=೦೦, ದ್ವಿತೀಯ ರೂ.೨೦೦೦=೦೦, ತೃತೀಯ ರೂ.೧೦೦೦=೦೦ ಬಹುಮಾನದ ಜೊತೆಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಅಲ್ಲದೇ ಆಯ್ಕೆಗಾಗಿ ಪುಸ್ತಕಗಳನ್ನು ಕಳಿಸಿಕೊಟ್ಟ ಎಲ್ಲಾ ಲೇಖಕರಿಗೆ ಅಭಿನಂದನಾ ಪತ್ರವನ್ನು ಕಳಿಸಿಕೊಡಲಾಗುವುದು. ತಮ್ಮ ಕೃತಿಗಳನ್ನು ಪೆಭ್ರುವರಿ ೨೦ ರೊಳಗೆ ಕಳಿಸಿಕೊಡಲು ಕೋರಿಕೆ. ಪುಸ್ತಕಗಳನ್ನು ಕಳಿಸುವವಿಳಾಸ:ಜಿ.ಎಸ್.ಗೋನಾಳ ಪ್ರಕಾಶಕರು, ವಿಶಾಲ ಪ್ರಕಾಶನ, ಶ್ರೀ ಬಸವ ಸದನ, ೨೧ ನೇ ವಾರ್ಡ್, ಪದಕಿ ಲೇಔಟ್, ಶಾರದಾ ಸ್ಕೂಲ್ ಹತ್ತಿರ, ಕೊಪ್ಪಳ-೫೮೩೨೩೧. ಹೆಚ್ಚಿನ ಮಾಹಿತಿಗಾಗಿ ಮೊ.೮೭೬೨೨೯೪೯೯೯ ಗೆ ಸಂಪರ್ಕಿಸಿರಿ.

Please follow and like us:
error