ಪಾವಲಿಶೆಟ್ಟರ್, ಕವಲೂರು ಸೇರಿ ೦೭ ಜನ ಸದಸ್ಯರ ಭಾರೀ ಜಯ

ಕೊಪ್ಪಳ ೧೧: ನಗರದ ಪ್ರತಿಷ್ಠಿತ ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋಆಪರೇಟಿವ್ ಬ್ಯಾಂಕಿನ ೧೩ ಸ್ಥಾನದ ಆಡಳಿತ ಮಂಡಳಿಗೆ ಚುನಾವಣೆ ಘೋಷಣೆಯಾಗಿದ್ದು ಇದರಲ್ಲಿ ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆ ಮಾಡಿಕೊಳ್ಳಲಾಗಿದ್ದು, ಉಳಿದಿರುವ ಸ್ಥಾನಗಳಿಗೆ ರವಿವಾರ ಜರುಗಿದ ಚುನಾವಣೆಯಲ್ಲಿ ೧೦ ಜನ ಅಭ್ಯರ್ಥಿಗಳು ತಮ್ಮ ಆಯ್ಕೆ ಬಯಸಿ ಸ್ಪರ್ಧಾಕಣದಲ್ಲಿದ್ದು ಮತದಾನದಲ್ಲಿ ನಿರೀಕ್ಷೆಯಂತೆ ಶಿವಕುಮಾರ ಪಾವಲಿಶೆಟ್ಟರ್ ಸೇರಿದಂತೆ ನಗರಸಭೆಯ ಸದಸ್ಯರಾದ ಮಲ್ಲಪ್ಪ ಕವಲೂರು ಅವರ ಸುಪುತ್ರ ಯುವ ಅಭ್ಯರ್ಥಿ ರಮೇಶ ಕವಲೂರು ಸೇರಿ ೦೭ ಜನ ಸದಸ್ಯರು ಭಾರಿ ಜಯಗಳಿಸಿ ಆಯ್ಕೆಯಾಗಿದ್ದಾರೆ.

 ಉತ್ತಮ ಕೆಲಸಗಳೇ ಗೆಲುವಿಗೆ ಕಾರಣ : ಪಾವಲಿಶೆಟ್ಟರ್  ಶ್ರೀಗವಿಸಿದ್ದೇಶ್ವರ ಅರ್ಬನ್ ಕೋಆಪರೇಟಿವ್ ಬ್ಯಾಂಕ್  ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನನ್ನ ಗೆಲುವಿಗೆ ಹಿಂದೆ ಕೈಗೊಂಡಿರುವ ಉತ್ತಮ ಕೆಲಸಗಳು ಮತ್ತು ಗ್ರಾಹಕ ಸದಸ್ಯರೊಂದಿಗಿನ ಉತ್ತಮ ಬಾಂಧವ್ಯ ಗೆಲುವಿಗೆ ಶ್ರೀರಕ್ಷೆಯಾಗಿದೆ ಎಂದು ನೂತನ ಸದಸ್ಯ ಶಿವಕುಮಾರ ನಿಂಗಪ್ಪ ಪಾವಲಿಶೆಟ್ಟರ್ ಹೇಳಿದರು.

ಜಯಗಳಿಸಿದ ಸದಸ್ಯರೆಲ್ಲರೂ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಗೊಂಡಿದ್ದಾರೆ. ಇದರಲ್ಲಿ ಪ್ರಮುಖರಾಗಿ ಶಿವಕುಮಾರ ನಿಂಗಪ್ಪ ಪಾವಲಿಶೆಟ್ಟರ್ ಮತ್ತು ರಮೇಶ ಕವಲೂರು ಅಲ್ಲದೇ ಬಸಯ್ಯ ಹಿರೇಮಠ, ರಾಜೇಂದ್ರಕುಮಾರ ಶೆಟ್ಟರ್, ವಿಶ್ವನಾಥ ಅಗಡಿ, ಶಿವರೆಡ್ಡಿ ಭೂಮಕ್ಕನವರ ಅವರು ಜಯಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದರಿ ಚುನಾವಣೆಯಲ್ಲಿ ೦೭ ಸ್ಥಾನಗಳಿಗೆ ೧೦ ಜನ ಸ್ಪರ್ಧೆ ಮಾಡಿದ್ದು, ೦೩ ಜನ ಅಭ್ಯರ್ಥಿಗಳು ಸೋತಿದ್ದಾರೆ. ಸೋತವರ ಪೈಕಿ ಗವಿಸಿದ್ದಪ್ಪ ಮುದಗಲ್, ಪ್ರಶಾಂತ ಮತ್ತು ಉಮೇಶ ಅಕ್ಕಿ ಅವರು ಪರಾಭವಗೊಂಡಿದ್ದಾರೆ. ಸದರಿ ಚುನಾವಣೆಯಲ್ಲಿ ನಿರೀಕ್ಷಿತ ೦೭ ಜನ ಸದಸ್ಯರ ತಂಡ ಜಯಸಾಧಿಸಿದ್ದು, ಇದರಲ್ಲಿ ಶಿವಕುಮಾರ  ಪಾವಲಿಶೆಟ್ಟರ್ ಅವರು ಅಧಿಕ ಮತಗಳನ್ನು ಪಡೆದು ಗಮನ ಸೆಳೆದಿದ್ದಾರೆ.  

 

 

Please follow and like us:
error