ಪಾಪು ನಿಧನಕ್ಕೆ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಕೆ


ಕೊಪ್ಪಳ,ಮಾ.೧೮: ಧೀಮಂತ ಪತ್ರಕರ್ತ, ಸಾಹಿತಿ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತರಾದ ಡಾ.ಪಾಟೀಲ ಪುಟ್ಟಪ್ಪನವರು (೧೦೨) ನಿಧನ ಹೊಂದಿರುದಕ್ಕೆ ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದೆ.
ಡಾ.ಪಾಟೀಲ ಪುಟ್ಟಪ್ಪನವರ ಅಗಲಿಕೆಯಿಂದ ರಾಷ್ಟ್ರ ಮತ್ತು ರಾಜ್ಯ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ, ದಿವಂಗತರು ಕೇವಲ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಾತ್ರವಲ್ಲದೆ ಕನ್ನಡ ನಾಡು ನುಡಿ,ಕನ್ನಡ ಪರ ಹೋರಾಟವಾಗಿದ್ದ ಗೋಕಾಕ್ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದು ಹೋರಾಟವನ್ನು ಯಶಸ್ವಿಗೊಳಿಸಿದ್ದರು. ಇವರ ನಿಧನದಿಂದ ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ತೀವ್ರ ಶೋಕ ವ್ಯಕ್ತ ಪಡಿಸಿ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.
ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಎಂ.ಸಾದಿಕ ಅಲಿ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರು ಜಿ.ಎಸ್.ಗೋನಾಳ್, ರಾಜ್ಯ ಕಾರ್ಯಕಾರಣಿ ನಾಮನಿರ್ದೇಶನ ಸದಸ್ಯ ಹರೀಶ್ ಎಚ್.ಎಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ ದೊಡ್ಡಮನಿ, ಜಿಲ್ಲಾ ಖಜಾಂಚಿ ಸಿರಾಜ್ ಬಿಸರಳ್ಳಿ, ಪತ್ರಿಕಾ ಭವನ ನಿರ್ಮಾಣದ ಸಮಿತಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಉಪಾಧ್ಯಕ್ಷ ಬಸವರಾಜ್ ಗುಡ್ಲಾನೂರು, ಶಿವರಾಜ್ ನುಗಡೋಣಿ, ವೀರಣ್ಣ ಕಳ್ಳಿಮನಿ, ರುದ್ರಗೌಡ ಪಾಟೀಲ್, ರವಿಕುಮಾರನಾಯಕ್, ವೈ.ನಾಗರಾಜ್, ಪವನ್ ದೇಶಪಾಂಡೆ, ರಾಜು ಬಿ.ಆರ್, ಎಚ್.ವಿ.ರಾಜಾಭಕ್ಷಿ, ರವಿಚಂದ್ರಬಡಿಗೇರ, ಶಿವಕುಮಾರ್ ಹಿರೇಮಠ, ಬದ್ರಿನಾರಾಯಣ ಪುರೋಹಿತ್, ಎಂ.ಡಿ.ಖಲೀಲ್‌ಉಡೇವು, ಭರತ್‌ಕಂದಕೂರು, ಮುಸ್ತಾಫ್ ಹಾಗೂ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Please follow and like us:
error