ಪರಿಸರ ರಕ್ಷಣೆ ಹಾಗೂ ಪೋಷಣೆ ಪ್ರತಿ ನಾಗರಿಕರ ಜವಾಬ್ದಾರಿ


ಕೊಪ್ಪಳ, ೨೫-ಪರಿಸರ ರಕ್ಷಣೆ ಹಾಗೂ ಪೋಷಣೆ ಪ್ರತಿ ನಾಗರಿಕರ ಜವಾಬ್ದಾರಿ ಎಂದು ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಉಪಾಧ್ಯಕ್ಷ ರಾಘವೇಂದ್ರ ಕುಲಕರ್ಣಿ ಹೇಳಿದರು.
ಅವರು ನಗರದ ಪದಕಿ ಕಾಲೋನಿಯಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಹೈಕ ಭಾಗದಲ್ಲಿ ಅದರಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೂ ಸಹ ಅರಣ್ಯ ಪ್ರದೇಶ ಅತ್ಯಂತ ಕಡಿಮೆ ಇದೆ. ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಕೈಜೋಡಿಸಿ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ವಿಜಯಕುಮಾರ ಪದಕಿ, ಅರ್ಚಕ ಗೋವಿಂದಾಚಾರ್ಯ ಬಾದರ್ಲಿ, ಖಜಾಂಚಿ ರವೀಂದ್ರ ಹುಲ್ಲೂರು, ಸದಸ್ಯರಾದ ಸುರೇಶ ಹಕ್ಕಂಡಿ, ನಾರಾಯಣ ಶೆಟ್ಟಿ, ವೆಂಕಪ್ಪ ದದೇಗಲ್ಲ, ಅಶೋಕ ಪದಕಿ, ದತ್ತಾತ್ರೇಯ ಪದಕಿ, ಅನಂತ ಜೋಷಿ ಅನೀಲ ದೇಸಾಯಿ, ಶ್ರೀಪಾದ ಕುಲಕರ್ಣಿ ಹಾಗೂ ಇತರರು ಇದ್ದರು.

Please follow and like us:
error