ಪರಿಶಿಷ್ಟ ನಿರ್ದೇಶಕರು ನಿರ್ಮಿಸಿದ ಚಲನ ಚಿತ್ರಗಳ ಉಚಿತ ಪ್ರದರ್ಶನ

ಕೊಪ್ಪಳ ಅ. ೦೩   ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನಿರ್ದೇಶಕರು/ ನಿರ್ಮಾಪಕರು ನಿರ್ದೇಶಿಸಿ ನಿರ್ಮಿಸಿದ ಚಲನ ಚಿತ್ರಗಳನ್ನು ಜಿಲ್ಲಾ ಕೇಂದ್ರದ ಚಲನಚಿತ್ರ ಮಂದಿರಗಳಲ್ಲಿ ಉಚಿತವಾಗಿ ಪ್ರದರ್ಶಿಸಲು ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನಿರ್ದೇಶಕರು/ ನಿರ್ಮಾಪಕರು ನಿರ್ದೇಶಿಸಿ ನಿರ್ಮಿಸಿದ ಐತಿಹಾಸಿಕ, ಪರಂಪರೆ ಬಿಂಬಿಸುವ ಅತ್ಯುತ್ತಮ ಮಕ್ಕಳ ಚಲನಚಿತ್ರ, ಉತ್ತಮ ಸಾಹಿತ್ಯ ಕೃತಿಗಳನ್ನು ಸಂಪೂರ್ಣವಾಗಿ ಆಧರಿಸಿದ ರಾಜ್ಯ/ ರಾಷ್ಟ್ರ ಪ್ರಶಸ್ತಿ ಪಡೆದ ಮತ್ತು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡುವ ಸಹಾಯಧನಕ್ಕಾಗಿ ಅರ್ಹತೆ ಇರುವ ಚಲನಚಿತ್ರಗಳನ್ನು ಜಿಲ್ಲಾ ಕೇಂದ್ರಗಳ ಚಲನಚಿತ್ರ ಮಂದಿರಗಳಲ್ಲಿ ಉಚಿತವಾಗಿ ಪ್ರದರ್ಶಿಸಲು ಆಯ್ಕೆ ಮಾಡುವ ಸಲುವಾಗಿ ಆಯುಕ್ತರು ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ರವರು, ಅರ್ಜಿ ಆಹ್ವಾನಿಸಿದ್ದು, ಅರ್ಹ ನಿರ್ದೇಶಕರು/ ನಿರ್ಮಾಪಕರು ಅಕ್ಟೋಬರ್. ೩೧ ರೊಳಗಾಗಿ ಆಯುಕ್ತರು ಸಮಾಜ ಕಲ್ಯಾಣ ಇಲಾಖೆ, ೫ನೇ ಮಹಡಿ, ಬಹುಮಹಡಿಗಳ ಕಟ್ಟಡ, ಅಂಬೇಡ್ಕರ್ ವೀಧಿ, ಬೆಂಗಳೂರು-೫೬೦೦೦೧ ಇಲ್ಲಿಗೆ ಅರ್ಜಿ ಸಲ್ಲಿಸಬೇಕು.
ಅದರನ್ವಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನಿರ್ದೇಶಕರು/ ನಿರ್ಮಾಪಕರು ಅರ್ಜಿ ನಮೂನೆಯನ್ನು ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ ಇವರ ಕಾರ್ಯಾಲಯದಲ್ಲಿ ಪಡೆಯಬಹುದಾಗಿದೆ .

Please follow and like us:
error