ಪರಸ್ಪರ ಸಹಕಾರ ದಿಂದ ಅಭಿವೃದ್ಧಿ ಸಾಧ್ಯ ತೋಟಪ್ಪ ಕಾಮನೂರು.

Kannadanet ಮಂಗಳವಾರ ೬೭ ನೇ ಅಖಿಲ ಭಾರತ ಸಹಕಾರ ಸಪ್ತಾಹದ ಧ್ಯೇಯ: ಕೊರೋನಾ ಆತ್ಮನಿರ್ಭರ ಭಾರತ – ಸಹಕಾರ ಸಂಸ್ಥೆಗಳು ಇದ್ದು, ಈ ದಿನ ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದು ದಿನವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ, ಸಹಕಾರ ಇಲಾಖೆ ಕೊಪ್ಪಳ ಹಾಗೂ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಹಿಂದುಳಿದ ವರ್ಗಗಳ ಸಹಕಾರ ಸಂಘ ನಿ., ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಸಹಕಾರ ಯೂನಿಯನ್ನಿನ ಉಪಾಧ್ಯಕ್ಷರು, ಸಹಕಾರ ರತ್ನ ಪುರಷ್ಕೃತರಾದ ತೋಟಪ್ಪ ಕಾಮನೂರು ರವರು ಜ್ಯೋತಿ ಬೆಳಗಿಸಿ ಮಾತನಾಡುತ್ತಾ ಸಹಕಾರ ತತ್ವದಡಿಯಲ್ಲಿ ಸಹಕಾರ ಸಂಘಗಳು ಸ್ಥಾಪನೆಯಾಗಿ ಸಹಕಾರ ತತ್ವಗಳನ್ನು ಪಾಲನೆ ಮಾಡುವುದರ ಜೊತೆಗೆ ಪರಸ್ಪರ ಸಹಕಾರ ದಿಂದ ಸಹಕಾರ ಸಂಘಗಳನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದು ಸಹಕಾರ ಸಂಘಗಳನ್ನು ಅಭಿವೃದ್ಧಿ ಪಡಿಸಲು ಕರೆನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಹಕಾರಿಗಳಾದ ಹೆಚ್.ಎಂ. ಬಿರಾದಾರ ರವರು ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾದ ಬಿ.ಜಿ. ಶಶಿಮಠ ಅಧ್ಯಕ್ಷರು, ಶ್ರೀ ವೀರಮಹೇಶ್ವರ ಪತ್ತಿನ ಸಹಕಾರ ಸಂಘ ನಿ., ಕೊಪ್ಪಳ ಇವರು ಮಾತನಾಡಿ ಸಹಕಾರ ರತ್ನ ಪುರಷ್ಕೃತರಾದ ತೋಟಪ್ಪ ಕಾಮನೂರು ಇವರನ್ನು ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರುಗಳಾದ ಶ್ರೀಮತಿ ಶಕುಂತಲಾ ಹುಡೇಜಾಲಿ, ಮಾರುತಿ ಅಂಗಡಿ, ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಹಿಂದುಳಿದ ವರ್ಗಗಳ ಸಹಕಾರ ಸಂಘದ ನಿರ್ದೇಶಕರುಗಳಾದ ಕೆ.ಎಲ್.ಎನ್. ಚೌದ್ರಿ, ಪ್ರಶಾಂತ ಹಿರೇಮಠ. ಅಕ್ಬರ್‌ಸಾಬ ಇಟಗಿ, ತಿಮ್ಮಣ್ಣ ಬಂಜಂತ್ರಿ, ಬಸಣ್ಣ ಗಬ್ಬೂರು, ರವಿ ಕಡೆಮನಿ, ತಿಪ್ಪಯ್ಯ, ಸಹಕಾರ ಇಲಾಖೆ ಮತ್ತು ಸಂಸ್ಥೆಗಳ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾದ ಹಾಲಯ್ಯ ಹುಡೇಜಾಲಿ, ಸಹಕಾರ ಸಂಘಗಳ ನಿರೀಕ್ಷಕರಾ ವೆಂಕಾರಡ್ಡಿ ಅಳವಂಡಿ, ಸಹಕಾರಿಗಳಾದ ಎನ್.ಸಿ. ಪಾಟೀಲ, ಯೂನಿಯನ್ನಿನ ಜಿಲ್ಲಾ ಸಹಕಾರ ಶಿಕ್ಷಕರಾದ ಶ್ರೀಮತಿ ರಾಜ್ಮಾ, ವ್ಯವಸ್ಥಾಪಕರಾದ ರಾಜಶೇಖರ ಹೊಸಮನಿ, ಮತ್ತು ಗವಿಸಿದ್ದಯ್ಯ ಹಿರೇಮಠ ಇವರುಗಳು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ರಾಜ್ಮಾ ರವರು ಪ್ರಾರ್ಥಿಸಿದರು. ಯೂನಿಯನ್ನಿನ ಮಾಜಿ ನಿರ್ದೇಶಕರಾದ ಗವಿಸಿದ್ದೇಶ ಹುಡೇಜಾಲಿಯವರು ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಶ್ರೀಮತಿ ರಾಜ್ಮಾ ಇವರು ನಿರೂಪಿಸಿದರು ಕೊನೆಯಲ್ಲಿ ರಾಜಶೇಖರ ಹೊಸಮನಿ ವಂದಿಸಿದರು.

Please follow and like us:
error