ಪತ್ನಿ ಸಮೇತ ವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡ  ಸಂಸದ ಸಂಗಣ್ಣ ಕರಡಿ

ಕೊಪ್ಪಳ : ಕೊಪ್ಪಳ ಸಂಸದ ಕರಡಿ ಸಂಗಣ್ಣ ತಮ್ಮ ಪತ್ನಿ ಸಮೇತ ಜಿಲ್ಲಾಸ್ಪತ್ರೆಗೆ ಆಗಮಿಸಿ ಕೋವಾಕ್ಷಿನ್ ವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡರು.

ಲಸಿಕೆ ಹಾಕಿಸಿಕೊಳ್ಳುವ ಮೊದಲು  ರಕ್ತದ ಒತ್ತಡ (ಬಿಪಿ) ಸಕ್ಕರೆ ಕಾಯಿಲೆ ಪರೀಕ್ಷೆ ಮಾಡಿಸಿಕೊಂಡ ಸಂಸದ ಸಂಗಣ್ಣ ಕರಡಿ ತಮ್ಮ ಪತ್ನಿ ನಿಂಗಮ್ಮ ಕರಡಿ ಜೊತೆ ಲಸಿಕೆ ಹಾಕಿಸಿಕೊಂಡರು. ನಂತರ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೋವಿಡ್ ಲಸಿಕೆಯಿಂದ ಯಾವುದೇ ತೊಂದರೆಯಾಗಿಲ್ಲ. ಜನರಲ್ಲಿ  ಲಸಿಕೆ ಕುರಿತು ಜಾಗೃತಿ ಮೂಡುತ್ತಿದೆ.  ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಈ ಲಸಿಕೆ ಕುರಿತು ಯಾರಿಗೂ ಭಯ ಬೇಡ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಲಕಾನಂದ ಮಳಗಿ, ಡಾ. ದಾನರಡ್ಡಿ, ಡಾ. ವಿರುಪಾಕ್ಷರಡ್ಡಿ ಮಾದಿನೂರ, ಕಿಮ್ಸ್ ಡಾ.ವೈಜನಾಥ, ಡಾ, ಪ್ರಶಾಂತ ಬಾಬು, ಸೇರಿದಂತೆ  ಇತರರು ಉಪಸ್ಥಿತರಿದ್ದರು.

Please follow and like us:
error