ಪಡಿತರ ಚೀಟಿ ಹೊಂದಿರದ ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ನೀಡಲು ದಾನಿಗಳಲ್ಲಿ ಮನವಿ


: ಪ್ರಸ್ತುತದ ಕೋವಿಡ್-19ರ ಸಂಕಷ್ಟದ ಸಮಯದಲ್ಲಿ ಪಡಿತರ ಚೀಟಿಯನ್ನು ಹೊಂದಿರದೇ ಇರುವಂತಹ ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ನೀಡಲು ಜಿಲ್ಲೆಯ ದಾನಿಗಳಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿದೇಶಕರು ಮನವಿ ಮಾಡಿದ್ದಾರೆ.
ಕೋವಿಡ್-19 ವೈರಸ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಕೊಪ್ಪಳ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಘೋಷಣೆಯಾಗಿದ್ದು, ಈಗಾಗಲೇ ಜಿಲ್ಲೆಯ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಹಾಗೂ ಪಿ.ಎಂ.ಜಿ.ಕೆ.ಏ.ವೈ ಯೋಜನೆಯಡಿ ಪಡಿತರ ಧಾನ್ಯಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಜೊತೆಗೆ ಪಡಿತರ ಚೀಟಿಯನ್ನು ಹೊಂದದೇ ಇರುವಂತಹ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳು, ನಿರ್ಗತಿಕ ಕಾರ್ಮಿಕರು, ಅಲೆಮಾರಿಗಳು ಹಾಗೂ ನಿರಾಶ್ರಿತರಿಗೆ ಪಡಿತರ ಧಾನ್ಯಗಳನ್ನು ಸ್ವ-ಇಚ್ಛೆಯಿಂದ ದಾನದ ರೂಪದಲ್ಲಿ ನೀಡಲು ಇಚ್ಛಿಸುವವರು ತಮ್ಮ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಅಥವಾ ಜಿಲ್ಲಾ ಕೇಂದ್ರದಲ್ಲಿ ಪಡಿತರ ಸ್ವೀಕರಿಸಲು ಕೌಂಟರ್‌ಗಳನ್ನು ತೆರೆಯಲಾಗಿದೆ.
ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಬೆಲ್ಲ, ಉಪ್ಪು, ಮಸಾಲೆ ಪದಾರ್ಥಗಳನ್ನು ಮಾತ್ರ ದಾನದ ರೂಪದಲ್ಲಿ ನೀಡಬಹುದು.  ದಾನಿಗಳು ಈ ಅಗತ್ಯ ವಸ್ತುಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ದೂ.ಸಂ. 08539-221515, ಕೊಪ್ಪಳ ತಹಶೀಲ್ದಾರ್ ಕಚೇರಿ 08539-220381, ಗಂಗಾವತಿ ತಹಶೀಲ್ದಾರ್ ಕಚೇರಿ 08533-230929, ಕಾರಟಗಿ ತಹಶೀಲ್ದಾರ್ ಕಚೇರಿ 08533-275106, ಕನಕಗಿರಿ ತಹಶೀಲ್ದಾರ್ ಕಚೇರಿ 9611770203, ಕುಷ್ಟಗಿ ತಹಶೀಲ್ದಾರ್ ಕಚೇರಿ 08536-267031, ಯಲಬುರ್ಗಾ ತಹಶೀಲ್ದಾರ್ ಕಚೇರಿ 08534-220130, ಕುಕನೂರು ತಹಶೀಲ್ದಾರ್ ಕಚೇರಿ 8050303495, ಈ ಸ್ಥಳಗಳಲ್ಲಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Please follow and like us:
error