ಪಡಿತರ ಚೀಟಿ ಕುಟುಂಬ ಸದಸ್ಯರುಗಳ ಇ-ಕೆವೈಸಿ ಸಂಗ್ರಹಣೆ ಕಾರ್ಯ ಪ್ರಾರಂಭಿಸಲು ಸೂಚನೆ

ಕೊಪ್ಪಳ ಡಿ.  : ಬಯೋ ಮೆಟ್ರಿಕ್ ನೀಡಿ ಗುರುತು ಮರು ನೋಂದಣೆ ಮಾಡಿಸದೇ ಇರುವ ಪಡಿತರ ಚೀಟಿ ಕುಟುಂಬ ಸದಸ್ಯರುಗಳ ಇ-ಕೆವೈಸಿ ಸಂಗ್ರಹಣೆ ಕಾರ್ಯವನ್ನು ಡಿಸೆಂಬರ್. 01 ರಿಂದ ಪ್ರಾರಂಭಿಸಲು ಜಿಲ್ಲೆಯ ವಿವಿಧ ತಾಲ್ಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ವಿತರಿಸಲಾಗಿರುವ ಅಂತ್ಯೋದಯ, ಆದ್ಯತಾ (ಬಿ.ಪಿ.ಎಲ್) ಹಾಗೂ ಎ.ಪಿ.ಎಲ್ ಪಡಿತರ ಚೀಟಿಗಳಲ್ಲಿ ಸೇರ್ಪಡೆಗೊಂಡಿರುವ ಪಡಿತರ ಕುಟುಂಬಗಳ ಪ್ರತಿಯೊಬ್ಬ ಸದಸ್ಯರುಗಳ ಬಯೋಮೆಟ್ರಿಕ್ ಗುರುತಿನ ಮರು ನೋಂದಾವಣೆ ಕಾರ್ಯವನ್ನು (ಇ-ಕೆವೈಸಿ) ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಾರಂಭಿಸಲಾಗಿತ್ತು.  ಪಡಿತರದಾರರು ಈಗಾಗಲೇ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಅಡಿ ನೋಂದಾಯಿಸಿಕೊAಡಿರುತ್ತಾರೆ. ಈ ಮರು ನೋಂದಾವಣೆ ಕಾರ್ಯವನ್ನು ಕಾರಣಾಂತರಗಳಿAದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಆದರೆ ಬೆರಳಚ್ಚು (ಬಯೋ ಮೆಟ್ರಿಕ್) ನೀಡಿ ತಮ್ಮ ಗುರುತು ಮರು ನೋಂದಣೆ ಮಾಡಿಸದೇ ಇರುವ ಪಡಿತರ ಚೀಟಿ ಕುಟುಂಬ ಸದಸ್ಯರುಗಳ ಇ-ಕೆವೈಸಿ ಸಂಗ್ರಹಣೆ ಕಾರ್ಯವನ್ನು ಡಿ. 01 ರಿಂದ ಪ್ರಾರಂಭಿಸಲು ಜಿಲ್ಲೆಯ ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಕನಕಗಿರಿ, ಕುಕನೂರು, ಕಾರಟಗಿ ತಾಲ್ಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ತಿಳಿಯಪಡಿಸಲಾಗಿದೆ.
ನ್ಯಾಯಬೆಲೆ ಅಂಗಡಿ ಹಂಚಿಕೆದಾರರು ಇ-ಕೆವೈಸಿ ಸಂಗ್ರಹಣೆಯನ್ನು ಡಿ. 01 ರಿಂದ 10 ರವರೆಗೆ ಮತ್ತು 2020ರ ಜನವರಿ. 01 ರಿಂದ 10 ರವರೆಗೆ ಮಾಡಬೇಕು.  ನೋಂದಾವಣೆ ಅವಧಿಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣಾ ಕಾರ್ಯ ಇರುವುದಿಲ್ಲ.  ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಈಗಾಗಲೇ ಮರು ನೋಂದಾವಣೆ ಮಾಡಿಸಿರುವ ಪಡಿತರ ಕುಟುಂಬದ ಮುಖ್ಯಸ್ಥರು ಹಾಗೂ ಸದಸ್ಯರುಗಳನ್ನು ಹೊರತುಪಡಿಸಿ ಮರು ನೋಂದಾವಣೆ ಆಗದೇ ಬಾಕಿ ಉಳಿದಿರುವ ಸದಸ್ಯರುಗಳು ಮಾತ್ರ ತಮ್ಮ ಬೆರಳಚ್ಚು (ಬಯೋ ಮೆಟ್ರಿಕ್) ನೀಡಿ ಹೆಸರು ಮರು ನೋಂದಾಯಿಸಲು ಕೋರುತ್ತಾ ಈ ನೋಂದಣೆಗಾಗಿ ಪಡಿತರದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಯಾವುದೇ ಹಣ ನೀಡುವಂತಿಲ್ಲ.
ಬಯೋ ಮೆಟ್ರಿಕ್ ನೀಡಿ ಗುರುತು ಮರು ನೋಂದಣೆ ಮಾಡಿಸದೇ ಇರುವ ಪಡಿತರದಾರರು ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ತಮ್ಮ ಬೆರಳಚ್ಚು ಗುರುತು ನೀಡಿ ಹೆಸರು ಮರು ನೋಂದಾವಣೆ ಮಾಡಿಕೊಳ್ಳಬೇಕು.

Please follow and like us:
error