ನೈಸರ್ಗಿಕ ಕೃಷಿಕ ಜಯಂತ್ ಬಿಕನಳ್ಳಿ

ಕೊಪ್ಪಳ, : ಸಮೀಪದ ಬಿಕನಳ್ಳಿಯ ನೈಸರ್ಗಿಕ ಕೃಷಿಕ ಜಯಂತ (53) ಭಾನುವಾರ ನಿಧನರಾದರು.

ಕೆಲವು ಕಾಲ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಅವರ ಅಂತ್ಯಕ್ರಿಯೆ ಮಧ್ಯಾಹ್ನ ನೆರವೇರಿತು.

ಮೂಲತಃ ಸಿವಿಲ್ ಎಂಜಿನಿಯರ್ ಆಗಿದ್ದ ಜಯಂತ್, ಥಾಯ್ಲೆಂಡ್ ಮತ್ತು ಮಲೇಷ್ಯಾದಲ್ಲಿ ಕೆಲಸ ಮಾಡಿದ್ದರು. 2007ರಲ್ಲಿ ಲಕ್ಷಾಂತರ ಮೊತ್ತದ ಸಂಬಳ ತ್ಯಜಿಸಿ, ಹುಟ್ಟೂರು ಬಿಕನಳ್ಳಿಗೆ ಬಂದರು. ಅಲ್ಲಿಂದ ಅವರ ಕೃಷಿ ಕಾಯಕ ಶುರುವಾಯಿತು. ಗಾಂಧಿ ತತ್ತ್ವದ ಅನುಯಾಯಿ ಹಾಗೂ ಸರಳ ಜೀವನದ ಪ್ರತಿಪಾದಕರೂ ಆಗಿದ್ದ ಜಯಂತ್, ವಾರ್ಧಾದ ಗಾಂಧಿ ಸೇವಾಗ್ರಾಮದಲ್ಲಿ ಕೆಲ ಕಾಲ ಯೋಗಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

ಮಳೆಯಾಶ್ರಿತ ಬೇಸಾಯದ ಗುಟ್ಟುಗಳನ್ನು ಆಸಕ್ತ ರೈತರ ಜತೆ ಉದಾರವಾಗಿ ಹಂಚಿಕೊಳ್ಳುತ್ತಿದ್ದರು. ನೈಸರ್ಗಿಕ ಅಥವಾ ಸುಸ್ಥಿರ ವಿಧಾನ ಅಳವಡಿಸಿಕೊಂಡಿದ್ದ ಜಯಂತ್, ತಮ್ಮ ಹೊಲದ ಪೈಕಿ ಎರಡು ಎಕರೆಗಳಷ್ಟು ಜಮೀನನ್ನು ನೈಸರ್ಗಿಕ ವಿಧಾನದಲ್ಲಿ ಕಾಡುತೋಟವನ್ನಾಗಿ ರೂಪಿಸಿದ್ದರು.

ಸಿರಿಧಾನ್ಯಗಳ ಪೈಕಿ ಕೊರಲೆ (ಬ್ರೌನ್ ಟಾಪ್ ಮಿಲೆಟ್) ಧಾನ್ಯವನ್ನು ಹೆಚ್ಚು ಬೆಳೆದು, ಅದು ಉತ್ತರ ಕರ್ನಾಟಕದಲ್ಲಿ ಜನಪ್ರಿಯವಾಗಲು ಜಯಂತ್ ಅವರ ಕೊಡುಗೆ ಹೆಚ್ಚು.

Please follow and like us:
error