ನೇರ ನುಡಿಯ ಶರಣರು ಅಂಬಿಗರ ಚೌಡಯ್ಯ : ಸಂಸದ ಕರಡಿ ಸಂಗಣ್ಣ

ಕೊಪ್ಪಳ ಜ. : ನಿಜಶರಣ ಅಂಬಿಗರ ಚೌಡಯ್ಯನವರು ನೇರವಾಗಿ ನುಡಿಯುವಂತಹ ಶರಣರಾಗಿದ್ದರು ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಮಂಗಳವಾರದAದು ಏರ್ಪಡಿಸಲಾಗಿದ್ದ, ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ, ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿನ ಕಲ್ಯಾಣ ಚಳುವಳಿಯು ಜಾತಿ, ಧರ್ಮ, ಮತ ಯಾವುದೇ ಭೇದವಿಲ್ಲದೇ ಎಲ್ಲಾ ಜನಾಂಗಗಳ ಶ್ರೇಯೋಭಿವೃದ್ಧಿಗಾಗಿ ಹೋರಾಡಿದ ಹೋರಾಟವಾಗಿತ್ತು. ಅಲ್ಲದೇ ಮೌಢ್ಯತೆಗಳನ್ನು ಕಿತ್ತೊಗೆಯಲು ನಡೆದ ಚಳುವಳಿಯಾಗಿದೆ.  ಸಮಾಜದ ಶ್ರೇಯೋಭಿವೃದ್ಧಿಗಾಗಿ ಹೋರಾಡಿದ ಅನೇಕ ಶಿವಶರಣ ಮಹನೀಯರಲ್ಲಿ ಅಂಬಿಗರ ಚೌಡಯ್ಯನವರು ಸಹ ಒಬ್ಬರಾಗಿದ್ದಾರೆ.  ಸಮಾಜದ ಅಂಕು ಡೊಂಕು ಪದ್ಧತಿಗಳನ್ನು ತಿದ್ದಲು ವಚನಗಳಿಂದ ಜಾಗೃತಿ ಮೂಡಿಸಿದ್ದಾರೆ.  ಅಂಬಿಗರ ಚೌಡಯ್ಯನವರು ನೇರ-ದಿಟ್ಟವಾಗಿ ನುಡಿಯ ವ್ಯಕ್ತಿಯಾಗಿದ್ದರು.  ಇವರ ಬಗ್ಗೆ ಸ್ವತಃ ಬಸವಣ್ಣನವರೆ ಯೋಚಿಸಿ ಮಾತನಾಡುತ್ತಿದ್ದರು ಎಂಬುದು ನಮಗೆ ತಿಳಿಯುತ್ತದೆ.  ಸಮಾಜದಲ್ಲಿ ಮನೆಮಾಡಿದ್ದ ಕೆಟ್ಟ ಸಂಪ್ರದಾಯಗಳನ್ನು ನಿಷ್ಠುರವಾಗಿ ಟೀಕಿಸಿ, ಅವುಗಳ ವಿರುದ್ಧ ವಚನಗಳ ಮೂಲಕ ಹೋರಾಡಿ ಸಮಾಜದಲ್ಲಿ ಬದಲಾವಣೆಗಳನ್ನು ತಂದAತಹ ಮಹನೀಯರಾಗಿದ್ದರು.  ಸಮಾಜವು ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದುವರಿಯಬೇಕಾದರೆ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು.  ಶಿಕ್ಷಣವಿಲ್ಲದೆ ಯಾವುದೇ ಸಮಾಜ ಮುಂದುವರಿಯಲು ಸಾಧ್ಯವಿಲ್ಲ.  ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಅವರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲರನ್ನಾಗಿಸಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣ ಚಳುವಳಿಯನ್ನು ಪ್ರಾರಂಭಿಸಿದ ಮಹನೀಯರಲ್ಲಿ ಅಂಬಿಗರ ಚೌಡಯ್ಯನವರು ಮೊದಲಿಗರು.  ಜಾತಿ, ಧರ್ಮ ಯಾವುದೇ ಬೇಧವಿಲ್ಲದೇ ಎಲ್ಲಾ ಜನಾಂಗಗಳ ಶ್ರೇಯೋಭಿವೃದ್ಧಿಗಾಗಿ ಹೋರಾಡಿದ ಮಹನೀಯರು.  ಭಕ್ತರಲ್ಲಿ ಬೇಧ-ಭಾವ ಹುಟ್ಟಿಸಬಾರದು ಎಲ್ಲರೂ ಒಂದೇ ಎಂದು ಅಂಬಿಗರ ಚೌಡಯ್ಯನವರು ಹೇಳಿದ್ದಾರೆ.  ಅಂಬಿಗರ ಚೌಡಯ್ಯನವರ ಸಮಾಜವು ಕಾಯಕಯೋಗಿ ಸಮಾಜವಾಗಿದೆ.  ಸಹೋದರತ್ವ ಮನೋಭಾವನೆಯನ್ನು ಹೊಂದಿದೆ.  ಸಮಾಜವು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು.  ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಶೇಷ ಉಪನ್ಯಾಸ ನೀಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿ ಅವರು ಮಾತನಾಡಿ, ಅಂಬಿಗರ ಚೌಡಯ್ಯನವರು 12ನೇ ಶತಮಾನದ ವಚನ ಕ್ರಾಂತಿಯ ನಿಜವಾದ ಕ್ರಾಂತಿಕಾರರಾಗಿದ್ದರು.  ಮೌಢ್ಯತೆಯಿಂದ ಕೂಡಿದ್ದ ಸಮಾಜದಲ್ಲಿ ಹೊಸ ಸಂಚಲನ ಮೂಡಿಸಿದ ಅನೇಕ ಮಹನೀಯರಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರಾಗಿದ್ದಾರೆ.  ಎಲ್ಲ ಸಮುದಾಯದ ಕಾಯಕ ಪವಿತ್ರವಾದುದು ಎಂದು ಸಾರಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ವಚನಗಳಿಂದ ಜಾಗೃತಿ ಮೂಡಿಸಿದವರು.  ಸಮಾಜ ಸುಧಾರಣೆ, ಶಾಂತಿ ಸ್ಥಾಪನೆಗೆ ಬಸವಣ್ಣ, ಅಂಬಿಗರ ಚೌಡಯ್ಯರಂತಹ ಅನೇಕ ಮಹನೀಯರು ಹೋರಾಡಿದ್ದಾರೆ.  ಮನುಕುಲದ ಕಲ್ಯಾಣಕ್ಕಾಗಿ ದುಡಿಯುವವರೇ ಮಹಾತ್ಮರು.  ತನ್ನನ್ನು ತಾನು ತಿಳಿದುಕೊಂಡಾಗ ಮಾತ್ರ ಪರಮಾತ್ಮನನ್ನು ಕಾಣಲು ಸಾಧ್ಯ ಎಂದು ಅಂಬಿಗರ ಚೌಡಯ್ಯನವರು ತಮ್ಮ ವಚನಗಳಲ್ಲಿ ಸಂದೇಶವನ್ನು ನೀಡಿದ್ದಾರೆ ಎಂದು ಅಂಬಿಗರ ಚೌಡಯ್ಯನವರ ಜೀವನ ಕುರಿತು ಸವಿಸ್ತಾರವಾಗಿ ವಿವರಣೆ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಎಸ್. ಪಾಟೀಲ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಕೊಪ್ಪಳ ತಹಶೀಲ್ದಾರ ಜೆ.ಬಿ. ಮಜ್ಗಿ, ಸಮಾಜದ ಮುಖಂಡರಾದ ಯಮನಪ್ಪ ಕಬ್ಬೇರ, ಬಾಳಪ್ಪ ಬಾರಕೇರ, ಸೋಮಣ್ಣ ಬಾರಕೇರ, ಗಂಗಾಧರ ಕಬ್ಬೇರ, ವಿರುಪಾಕ್ಷಪ್ಪ, ಶೇಖರಪ್ಪ ಸಿಂದೋಗಿ, ಯಂಕಪ್ಪ ಬಾರಕೇರ, ಸೇರಿದಂತೆ ಅನೇಕ ಗಣ್ಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ. ರಂಗಣ್ಣನವರ ಸರ್ವರನ್ನು ಸ್ವಾಗತಿಸಿದರು.  ಸದಾಶಿವ ಪಾಟೀಲ್ ಹಾಗೂ ತಂಡದವರಿAದ ನಾಡಗೀತೆ ಹಾಗೂ ರೈತಗೀತೆ ನಡೆಯಿತು.  ಸಿ.ವಿ. ಜಡಿಯವರ ಕರ್ಯಕ್ರಮ ನಿರೂಪಿಸಿ, ವಂದಿಸಿದರು.

Please follow and like us:
error