ನೇತಾಜಿಯವರ ಧೈರ್ಯ, ಸಾಹಸ ಮತ್ತು ಆದರ್ಶ ಎಂದಿಗೂ ಅವಿಸ್ಮರಣೀಯ-ನಾಗರಾಜ ಮೇಕಾ

 

ಕೊಪ್ಪಳ: ನೇತಾಜಿಯವರ ಧೈರ್ಯ, ಸಾಹಸ, ಆದರ್ಶ ಎಂದಿಗೂ ಅವಿಸ್ಮರಣೀಯ ಎಂದು ಹೇಳಿದರು. ಅವರು ಕಟ್ಟಿದ ಐ.ಎನ್.ಎ. ಸೈನ್ಯ ಜರ್ಮನ್‌ನಲ್ಲಿ ಸ್ಥಾಪಿಸಿ ನಂತರದಲ್ಲಿ ಭಾರತದಲ್ಲಿ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆಯಲೇಬೇಕೆಂಬ ಉತ್ಸಾಹಕತೆ ಅವರಲ್ಲಿತ್ತು. ಅವರ ಧೈರ್ಯ, ಸಾಮರ್ಥ್ಯ, ಎದೆಗಾರಿಕೆ ನಮ್ಮ ವಿದ್ಯಾರ್ಥಿಗಳಿಗೆ, ಯುವಕರಿಗೆ ಆದರ್ಶ ಪ್ರಾಯ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ., ನಾಗರಾಜ ಮೇಕಾ ಹೇಳಿದರು

ನಗರದ ಬಹದ್ದೂರಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನೇತಾಜಿ ಸುಭಾಸಚಂದ್ರ ಭೋಸರವರ ೧೨೪ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಮಿಸಿದ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ., ನಾಗರಾಜ ಮೇಕಾ ಮಾತನಾಡಿರು

ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ ಹೇಮಣ್ಣ ಕವಲೂರ, ಪರಶುರಾಮ ಸಾಲ್ಮನಿ, ಸಂಸ್ಥೆಯ ಕಾರ್ಯದರ್ಶಿ ಆರ್.ಹೆಚ್.ಅತ್ತನೂರ ನೇತಾಜಿಯವರ ಜೀವನ ಮತ್ತು ವಿದ್ಯಾಭ್ಯಾಸ ಹಾಗೂ ಹೋರಾಟದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಸುದೀಪ, ಭಾಗ್ಯಲಕ್ಷ್ಮಿ, ಶೋಯೆಬ್ ಇತರರು ಮಾತನಾಡಿದರು. ಕಾರ್ಯಕ್ರಮದ ಮೊದಲಿಗೆ ನೇತಾಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು. ಮುಖ್ಯೋಪಾಧ್ಯಾಯರಾದ ರೇಣುಕಾ ಅತ್ತನೂರ ಸ್ವಾಗತಿಸಿದರು. ಗೌಸಿಯಾ ಬೇಗಂ ನಿರೂಪಿಸಿದರು, ಕೊನೆಯಲ್ಲಿ ಶಿಲ್ಪಾಶ್ರೀ ವಂದಿಸಿದರು. ನಂತರ ಎಲ್ಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.

Please follow and like us:
error