ನೆರೆ ಸಂತ್ರಸ್ತರಿಗೆ ಮಿಡಿದ ಯುವಕರು

ಕೊಪ್ಪಳ- 09- ಸುಧಾ ಕಲ್ಚರಲ್ ಅಕಾಡೆಮಿ ಹಾಗೂ ಕರುನಾಡ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ಯುವ ಮನಸ್ಸುಗಳಿಂದ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ದೇಣಿಗೆಯನ್ನು ಪಡೆದು ರೆಡ್ ಕ್ರಾಸ್ ನಿಧಿ ಸಂಗ್ರಹ ಕೇಂದ್ರಕ್ಕೆ ತಲುಪಿಸಲಾಯಿತು. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉತ್ತರ ಕರ್ನಾಟಕ ತತ್ತರಿಸಿದೆ. ಹಲವು ಜಿಲ್ಲೆಗಳ ಜನಜೀವನ ಅಕ್ಷರಶಃ ನರಕ ಸದೃಶವಾಗಿದೆ. ಪ್ರವಾಹ ಸಂತ್ರಸ್ತರಿಗೆ ಪೂರೈಸಲು ಸಾಕಷ್ಟು ಪರಿಹಾರ ಸಾಮಗ್ರಿಗಳು ಹರಿದು ಬರುತ್ತಿವೆ. ರಾಜ್ಯದ ವಿವಿದೆಡೆಗಳಿಂದ ದಾನಿಗಳು, ಸಂಘ ಸಂಸ್ಥೆಗಳು ಪರಿಹಾರ ಸಾಮಗ್ರಿಗಳನ್ನು ಪ್ರವಾಹ ಪೀಡಿತರಿಗೆ ನೆರವಾಗಲು ಕಳುಹಿಸಿ ಕೊಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಬಸವರಾಜ ಮರದೂರ, ಸಾಹಿತಿ ಬಿ.ಎನ್.ಹೊರಪೇಟಿ, ಮಹೇಶ ಹಳ್ಳಿಕೇರಿ, ಉಮೇಶ ಪೂಜಾರ, ಆನಂದ ಮೇಟಿ, ಸಂತೋಷ ರೆಡ್ಡಿ, ಅನ್ನಪೂರ್ಣ ಮನ್ನಾಪುರ, ಮತ್ತಿತರು ಉಪಸ್ಥಿತಿ ಇದ್ದರು.
Please follow and like us:
error