ನೆನಹು ನಿನಾದ ಸಂಗೀತೊತ್ಸವ

ಭಾಗ್ಯನಗರ : ಶ್ರೀ ಗುರುಗೃಪಾ ಸಂಗೀತ ಹಾಗೂ ಸಾಂಸ್ಕೃತಿಕ ಕಲಾ ಸಂಘ (ರಿ), ಭಾಗ್ಯನಗರ ಹಾಗೂ ಕನ್ನಡ & ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಪಂ|| ಪುಟ್ಟರಾಜ ಕವಿ ಗವಾಯಿಗಳವರ ನೆನಹು ನಿನಾದ ಸಂಗೀತೋತ್ಸವ ಕಾರ್ಯಕ್ರಮ ನಡೆಯಿತು.
ಡಿ.ಎಮ್ ಬಡಿಗೇರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಗೀತ ವಿದ್ಯೆ ಎಲ್ಲರೂ ಕಲಿಯಬಹುದಾದ ಸುಲಭವಾದ ವಿದ್ಯೆ ಅಲ್ಲ. ಕಲಾವಿದರು ಕಠಿಣ ಸಾಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಾಗ ಸಾಧಿಸುವುದು ಅಂತವರನ್ನು ಮಾತ್ರ ಉಳಿಸಿಕೊಳ್ಳುತ್ತದೆ ಈ ಕಲೆ ಎಂದರು.
ಇದೆ ಸಂದರ್ಬದಲ್ಲಿ ಡಾ|| ಆರ್. ಎಮ್ ಪಾಟಿಲ್ ಮತ್ತು ಶ್ರೀಮತಿ ಮಾಲಾ ಪತ್ತಾರ,   ರಾಜೇಂದ್ರಬಾಬು ಡೊಂಗ್ರೆ,   ಎನ್.ಎಸ್ ಬಡಿಗೇರ್ ರವರನ್ನ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಹಿರಿಯ ಸಾಹಿತಿಗಳು ಆದ ಎ. ಎಮ್ ಮದರಿಯವರು ತಮ್ಮ ಚಿಕ್ಕಂದಿನ ಕಲಾ ಸಾಧನೆ ಸಂಗೀತ ಕಲಾವಿದನಿರಬೇಕಾದ ಗುಣಧರ್ಮಗಳ ಜೋತೆಗೆ ಪಂ. ಪುಟ್ಟರಾಜ ಕವಿ ಗವಾಯಿಗಳವರ ಜೀವನದ ಕೇಲ ಸಂದರ್ಭಗಳನ್ನ ಸ್ಮರಿಸಿದರು.
ಸಂಗೀತ ಸಂಸ್ಥೆಯಿಂದ ಆರಂಭದಲ್ಲಿ ಕೆಲ ವಿದ್ಯಾರ್ಥಿಗಳಿಂದ ಸಂಗೀತ ನಡೆಯಿತು. ನಂತರ ನೆನಹು ನಿನಾದ ಸಂಗೀತ ಕಾರ್ಯಕ್ರಮದಲ್ಲಿ ಪಂ. ಅಂಬಣ್ಣ ಕೊಪ್ಪರದ, ಗೌಡೇಶ ಪವಾರ, ದಾನಪ್ಪ ಕವಲೂರು, ಶ್ರೀಮತಿ ರಕ್ಷಿತಾ ನಾರಾಯಣ ದೇವರಕೇರೆ, ಶ್ರೀಮತಿ ಜಯಶ್ರೀ ಚೌಕಿಮಠ, ಕು. ವರ್ಷಣಿ ಸಂಕ್ಲಾಪೂರ, ಬಸವರಾಜ ಅಂಗಡಿ, ಲಕ್ಷ್ಮೀ ಗೌಡರ್ ಇವರಿಗೆ ಹಾರ್ಮೋನಿಯಂ ಸಾಥ ಶ್ರೀ ಮಹಾದೇವಪ್ಪ ವಂದಾಲ, ಶರಣಯ್ಯ ಹಿರೇಮಠ, ಕು. ವಿಣಾ ಅರಕೇರಿ, ಕೀಬೊರ್ಡ   ರಾಮು ಕಂಪ್ಲಿ ಯವರು ಸಾಥ ನಿಡಿದರು.
ಇವರಿಗೆ ತಬಲಾ ಸಹಕಾರ  ರಾಘವೆಂದ್ರ ಗಂಗಾವತಿ,   ಶ್ರೀನಿವಾಸ ಜೋಶಿ,   ಮಹಮ್ಮದ ರಿಜ್ವಾನ, ತಾಳ ಕ್ರೀಷ್ಣ ಸೊರಟೂರು ಸಾಥ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಕು. ಶಕುಂತಲಾ ಬೆನ್ನಾಳ ಸ್ವಾಗತಿಸಿದರು ಸಂಸ್ಥೆಯ ಅಧ್ಯಕ್ಷರಾದಿಯಾಗಿ ಎಲ್ಲಾ ಸದಸ್ಯರು ಸಂಗೀತ ಕಲಾ ಪ್ರೇಮಿಗಳು ಕಲಾವಿದರು ಗ್ರಾಮದ ಗುರು ಹಿರಿಯರು ಎಲ್ಲಾ ಶೊತ್ರುಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳೊಸೊದರು.
ಕಾರ್ಯಕ್ರಮದ ನಿರೂಪಣೆಯನ್ನು ರೇಖಾ ಸವಡಿಯವರು ನೀರೂಪಿಸಿದರು ಎಂದು ಸಂಸ್ಥೆಯ ಶಿಕ್ಷಕಿ & ಕಾರ್ಯದರ್ಶಿ ಕು. ಶಕುಂತಲಾ ಬೆನ್ನಾಳರವರು ವರದಿ ನಿಡಿದ್ದಾರೆ.

Please follow and like us:
error