ನಿಲ್ಲಿಸದ ಬಸ್ : ಆಕ್ರೋಶಗೊಂಡ ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ

ಯಲಬುರ್ಗಾ :   ಕಾಲೇಜ್ ವಿದ್ಯಾರ್ಥಿ ಗಳಿಗೆ ಕೊಪ್ಪಳ ನಗರಕ್ಕೆ ಕಾಲೇಜಿಗೆ ಹೋಗಲು ಸಮಯಕ್ಕೆ ಸರಿಯಾಗಿ ಬರದ ಕಾರಣ ಮತ್ತು  ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಮೋತಿ ಗ್ರಾಮದಲ್ಲಿ ಬಸ್ಸುಗಳನ್ನು ನಿಲ್ಲಿಸದೆ ಹಾಗೆ ಬರುವುದರಿಂದ ರೊಚ್ಚಿಗೆದ್ದ ಕಾಲೇಜ್ ವಿದ್ಯಾರ್ಥಿಗಳು ಇಂದು ಬಸ್ಸ್ ನಿಲ್ಲಿಸಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿದರು.

ಜಿಲ್ಲೆಯಾದ್ಯಂತ ಕಾಲೇಜು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಗ್ರಾಮಗಳಿಂದ ನಗರಕ್ಕೆ ಬಸ್ಸ್ ಗಳನ್ನು ಬಿಡಬೇಕು ಇಲ್ಲದಿದ್ದಲ್ಲಿ ನಿಮ್ಮ ಕಚೇರಿಯ ಮುಂದೆ ದಿನಾನಿತ್ಯ ಹೋರಾಟ ಮಾಡಲು ಮುಂದಾಗಬೇಕಾಗುತ್ತದೆ ಎಂದು ಜಿಲ್ಲೆಯ KSRTC ವಿಭಾಗದ ಡಿಪೋ ಮ್ಯಾನೇಜರ್ ಗಳಲ್ಲಿ ಎಸ್ಎಫ್ಐ ಸಂಘಟನೆಯು ಮನವಿ ಮಾಡಿಕೊಂಡಿದೆ.

Please follow and like us:
error