ಕೊಪ್ಪಳ – ಕೊಪ್ಪಳ ಕಲಾವಿದರ ನಾಡು ಇಲ್ಲಿ ಶಾಸ್ತ್ರೀಯ ಸಂಗೀತದಿಂದ ಎಲ್ಲ ಪ್ರಕಾರಗಳಲ್ಲಿ ನುರಿತ ಕಲಾವಿದರಿದ್ದು, ಸಂಗೀತಕ್ಕೆ ಪ್ರೋತ್ಸಾಹಿಸುವ ನೂರಾರು ಕೈಗಳಿವೆ. ನಿರಂತರ ಅಭ್ಯಾಸದಿಂದ ಮಾತ್ರ ಸಾಧನೆ ಸಾಧ್ಯ ಎಂದು ಹಿರಿಯ ಸಂಗೀತ ಕಲಾವಿದ ಪ್ರಭಾಕರ ಪಟವಾರಿ ಹೇಳಿದರು. ಶ್ರೀ ವಿಟ್ಠಲ ಕೃಷ್ಣ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಶಸ್ವಿ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸೇವಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಯುವ ಕಲಾವಿದರು ಕೇವಲ ಹವ್ಯಾಸಿ ಕಲಾವಿದರಾಗದೇ ನಿರಂತರ ಅಭ್ಯಾಸ ಮಾಡಬೇಕು ಅಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಕಲಾವಿದರು ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಮನೆಯಿಂದಲೇ ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಶ್ರೀಮತಿ ಶಾಂತಾ ಸಂತೋಷ ಕುಲಕರ್ಣಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಕೇಳಗರ ಮನಸೂರೆಗೊಳಿಸಿತು.ಕಾರ್ಯಕ್ರಮವನ್ನು ಅನಂತಾಚಾರ್ ಕಾಶಿ ಉದ್ಘಾಟಿಸಿದರು, ವೇದಿಕೆ ಮೇಲೆ ಬಾಲಚಂದ್ರ ಪಟವಾರಿ, ರಾಮಮೂರ್ತಿ ಆಚಾರ್ ಗುಡದೂರ, ವೆಂಕಟೇಶ ಕುಲಕರ್ಣಿ ಇತರರು ವೇದಿಕೆ ಮೇಲಿದ್ದರು. ಗುರುರಾಜ ಕುಲಕರ್ಣಿ ನಿರೂಪಿಸಿದರು.
ನಿರಂತರ ಅಭ್ಯಾಸದಿಂದ ಮಾತ್ರ ಸಾಧನೆ ಸಾಧ್ಯ- ಪ್ರಭಾಕರ ಪಟವಾರಿ
Please follow and like us: