ನಾವು ಎಷ್ಟೇ ವಿದ್ಯಾವಂತಾದರೂ ನಮ್ಮ ಸಂಸ್ಕೃತಿಯನ್ನು ಮರೆಯಬಾರದು- ಡಾ. ಗಣಪತಿ ಲಮಾಣಿ

Kannadanet ನಾವು ಮಾತೃ ಭಾಷೆಯನ್ನು ಮರೆಯಬಾರದು. ಮಗು ತಾಯಿಯ ಹತ್ತಿರ ಹೆಚ್ಚು ಸಮಯ ಕಳೆಯುವುದರಿಂದ ಭಾಷೆಯನ್ನು ಮಗು ಮೊದಲು ತಾಯಿಯಿಂದ ಕಲಿಯುತ್ತದೆ. ತಾಯಿ ಎನ್ನುವ ಪದ ಬಹಳ ದೊಡ್ಡದು. ಪ್ರತಿಯೊಬ್ಬರು ಜೀವನದಲ್ಲಿ ತಾಯಿ  ಹೆಚ್ಚು ಪ್ರಭಾವ ಬೀರುತ್ತಿದ್ದಾಳೆ. ಭಾರತದಲ್ಲಿ ಹಲವಾರ ಭಾಷೆಗಳು ಇವೆ. ನಾವು ಸಂಪರ್ಕಕ್ಕಾಗಿ ಇಂಗ್ಲಿಷ್ ಸೇರಿದಂತೆ ಇನ್ನಿತರ ಭಾಷೆಗಳನ್ನು ಕಲಿಯಬೇಕು ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಲಮಾಣಿ ಅವರು ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರದಂದು ಕಾಲೇಜಿನ ಕನ್ನಡ ವಿಭಾಗ ಮತ್ತು ಸಂಸ್ಕೃತಿ ಘಟಕದ ವತಿಯಿಂದ ಹಮ್ಮಿಕೊಂಡ ವಿಶ್ವ ತಾಯ್ನುಡಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸಂಸ್ಕೃತಿ ಬಹಳ ಶ್ರೇಷ್ಟವಾದದು. ನಮ್ಮ  ನಗರ ಕೇಂದ್ರೀತ ಪ್ರೆದೇಶದಲ್ಲಿ ನಮ್ಮ ಸಂಸ್ಕೃತಿಯನ್ನು ಮತ್ತು ಭಾಷೆಯನ್ನು ಮರೆಯುತ್ತಿದ್ದಾರೆ. ಹಿರಿಯರಿಂದ ಬಂದ ಸಂಸ್ಕೃತಿಯನ್ನು ನಾವು ಪಾಲನೆ ಮಾಡಬೇಕು. ನಾವು ಎಷ್ಟೇ ವಿದ್ಯಾವಂತಾದರೂ ನಾವು ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ಇಂದು ಭಾಷೆಯ ಶಬ್ದಗಳು ನಶಿಸುತ್ತಿವೆ. ನಮ್ಮ ನಾಡು ಕಲೆ ಮತ್ತು ಸಂಸ್ಕೃತಿಯಿಂದ ಕೂಡಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಸಂಯೋಜಕಿ ಮತ್ತು ಕಾಲೇಜಿನ ಕನ್ನಡ ವೀಭಾಗದ ಮುಖ್ಯಸ್ಥೆ ಡಾ. ಹುಲಿಗೆಮ್ಮ ಬಿ ಯವರು ಇತಿಹಾಸ ಮತ್ತು ಸಾಹಿತ್ಯದಲ್ಲಿ ಕನ್ನಡ ಬಾಷೆಯ ಮಹತ್ವದ ಕುರಿತು ಮಾತನಾಡುತ್ತ ಕನ್ನಡ ಕಟ್ಟುವಲ್ಲಿ ವಿದ್ಯಾರ್ಥಿಗಳು ಪಾತ್ರ ಬಹಳ ದೊಡ್ಡದು. ನಾವು ಕನ್ನಡ ಸಂಸ್ಕೃತಿಯನ್ನು ಬೆಳೆಸಬೇಕು. ನಮ್ಮ ಬಾಷೆಯ ಪುಸ್ತಕಗಳು ಮಾತ್ರವಲ್ಲ ಬೇರೆ ಬಾಷೆಯ ಪುಸ್ತಕಗಳನ್ನು ಓದಬೇಕು. ಕನ್ನಡ ಸಾಹಿತ್ಯ ಮತ್ತು ಜಾನಪದ ಸಾಹಿತ್ಯದ ಪುಸ್ತಕಗಳನ್ನು  ಓದುವ ಮೂಲಕ ವಿದ್ಯಾರ್ಥಿಗಳು  ತಾತ್ವಿಕತೆಯನ್ನು ಅರ್ಥಮಾಡಿಕೊಳ್ಳಬೇಕು. ನಮ್ಮ ಭಾಷೆಯಲ್ಲಿ ಸಾಗರದಷ್ಟು ತಾತ್ವಿಕತೆಯಿದೆ.   ಕುವೆಂಪು ಮತ್ತು  ಬೇಂದ್ರೆ ನಂತವರ ಸಾಹಿತ್ಯವು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗುತ್ತದೆ. ಕನ್ನಡ ನುಡಿಯನ್ನು ಬೆಳೆಸಬೇಕು. ನಾಡು ನುಡಿಯ ಬಗ್ಗೆ ಚಿಂತನೆ ಮಾಡಬೇಕು.  ನಮ್ಮ ಭಾಷೆಯನ್ನು ಮಾತ್ರವಲ್ಲ ಜ್ಞಾನಕ್ಕಾಗಿ ಬೇರೆ ಭಾಷೆಗಳನ್ನು ಕಲಿಯಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಕೆ. ಮಂಜಪ್ಪ, ಡಾ. ನರಸಿಂಹ ಗುಂಜಹಳ್ಳಿ. ಶಿವಪ್ರಸಾದ್ ಹಾದಿಮನಿಯವರು ಮಾತನಾಡಿದರು. ವೇದಿಕೆಯಲ್ಲಿ ಸಹಾಯಕ ಪ್ರಾಧ್ಯಾಪಕಿ ನಾಗರತ್ನ ಬಿ ತಮ್ಮಿನಾಳ, ಡಾ. ಪ್ರದೀಪ್ ಕುಮಾರು, ಯು, ಮಹಾಂತೇಶ್ ಮಧೊಳ್ ಮತ್ತು ಅರತಿಯವರು ಇದ್ದರು. ಕಾರ್ಯಕ್ರಮದಲ್ಲಿ ಸವಿತ ಹಿರೆಮಠ ಎಂಬ ವಿದ್ಯಾರ್ಥಿನಿ ತಮ್ಮ ಸ್ವರಚಿತ ಕವನಗಳನ್ನು ವಾಚನ ಮಾಡಿದರು. ಪ್ರಾರ್ಥನೆ ಗೀತೆಯನ್ನು ಶಿಲ್ಪ ಹಾಡಿದರು. ಸುಮಿತ್ರ ಎಸ್. ವಿ ಯವರು ಸ್ವಾಗತಸಿದರು. ವಂದನಾರ್ಪಣೆಯನ್ನು ಪವಿತ್ರ ಎ ಮಾಡಿದರು. ಮಮ್ತಾಜ್ ಯವರು ಕಾರ್ಯಕ್ರಮವನ್ನು ನಿರೂಪಿಸಿದರು.

Please follow and like us:
error