fbpx

ನಾಳೆ ಕೊಪ್ಪಳದಲ್ಲಿ ನಾಟಕ ರಾವಿ ನದಿಯ ದಂಡೆಯಲ್ಲಿ

ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಶನಿವಾರ ಸೆಪ್ಟೆಂಬರ್ ೭ ರಾವಿ ನದಿಯ ದಂಡೆಯಲ್ಲಿ ನಾಟಕ ಪ್ರದರ್ಶನವಿದೆ. ನಾಟಕವನ್ನು ಶಿಕ್ಷಕರ ಕಲಾಸಂಘ (ರಿ) ಕೊಪ್ಪಳ ಇವರು ಪ್ರದರ್ಶಿಸಲಿದ್ದಾರೆ.
ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಾದ ಘಟನೆಯನ್ನಾಧರಿಸಿ ಈ ನಾಟಕ ರಚಿಸಲಾಗಿದೆ. ವಿಭಜನೆಯ ಸಂದರ್ಭದಲ್ಲಿ ಭಾರತದ ಗಡಿಭಾಗದ ಮುಸ್ಲಿಂ ಸಹೋದರರು ಪಾಕಿಸ್ತಾನಕ್ಕೆ, ಪಾಕಿಸ್ತಾನದಲ್ಲಿನ ಹಿಂದೂಗಳು ಭಾರತಕ್ಕೆ ವಲಸೆಹೋಗುತ್ತಾರೆ. ಪಾಕಿಸ್ತಾನದಲ್ಲಿ ಭಾರತದ ಹಿಂದೂ ಮುದುಕಿಯೊಬ್ಬಳು ಅಲ್ಲಿಯೇ ಉಳಿದುಕೊಂಡು, ತನ್ನ ಮಾನವೀಯ ಸ್ಪರ್ಶದಿಂದ ಅಲ್ಲಿನ ಇಸ್ಲಾಂ ಜನರ ಹೃದಯವನ್ನು ಗೆಲ್ಲುತ್ತಾಳೆ. ಇದರಲ್ಲಿ ಬರುವ ಪ್ರತಿಯೊಂದು ಪಾತ್ರವು ಪ್ರೀತಿ, ಅನುಕಂಪವನ್ನು ತುಂಬಿಕೊಂಡೆ ಬರುತ್ತವೆ. ಮನುಷ್ಯ ಜಾತಿ ತಾನೊಂದೆ ಒಲಂ ಎಂದು ಪಂಪ ಹೇಳುತ್ತಾನೆ. ಹಾಗೆಯೇ ಎಲ್ಲಾ ಧರ್ಮಗಳ ಸಾರ ಒಂದೇ ಎಂದು ಈ ನಾಟಕ ಬಿಂಬಿಸುತ್ತದೆ. ಹೀಗೆ ಶಾಂತವಾಗಿ ನಿಮ್ಮೊಳಗೊಂದು ಚಿಂತನೆಯನ್ನು ಬಿತ್ತುವ ಕೆಲಸ ಈ ನಾಟಕ ಮಾಡುತ್ತದೆ.
ನಾಟಕವನ್ನು ಅಸಗರ್ ವಹಾಜಿತ್ ಅವರು ಹಿಂದಿಯಲ್ಲಿ ರಚಿಸಿದ್ದಾರೆ. ಕನ್ನಡಕ್ಕೆ ತಿಪ್ಪೆಸ್ವಾಮಿಯವರು ಅನುವಾದ ಮಾಡಿದ್ದಾರೆ. ಹಾಗೂ ನಾಟಕದ ನಿರ್ದೇಶನವನ್ನು ವಿಸ್ತಾರ ರಂಗ ಶಾಲೆಯ ಪ್ರಾಚಾರ್ಯರು ಆದ ಲಕ್ಷ್ಮಣ ಪೀರಗಾರ ಮಾಡಿದ್ದಾರೆ. ಎಂದು ಶಿಕ್ಷಕರ ಕಲಾಸಂಘದ ರಾಮಣ್ಣ ಶ್ಯಾವಿ, ಪ್ರಾಣೇಶ ಪೂಜಾರ ತಿಳಿಸಿದ್ದಾರೆ.

Please follow and like us:
error
error: Content is protected !!