ನಾರಿ ಸುವರ್ಣ ಟಗರುಗಳ ವಿತರಣೆ: ಅರ್ಜಿ ಅಹ್ವಾನ

ಕೊಪ್ಪಳ ಜ. ೨  ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಕೊಪ್ಪಳ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಂಜೂರಾದ ನಾರಿ ಸುವರ್ಣ ಟಗರುಗಳ ವಿತರಣಾ ಕಾರ್ಯಕ್ರಮದಡಿ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತಯು ಪ್ರಸಕ್ತ ಸಾಲಿನಲ್ಲಿ “ನಾರಿ ಸುವರ್ಣ ಟಗರುಗಳ ವಿತರಣಾ ಕಾರ್ಯಕ್ರಮ” ಹಮ್ಮಿಕೊಂಡಿದ್ದು, ಅರ್ಜಿ ಸಲ್ಲಿಸುವರು ೧೮ ರಿಂದ ೬೦ ವರ್ಷಗಳ ವಯೋತಿಯನ್ನು ಹೊಂದಿರಬೇಕು. ಕೊಪ್ಪಳ ಜಿಲ್ಲೆಗೆ ನಿಗದಿಪಡಿಸಿದ ಗುರಿಗಳಲ್ಲಿ ಪರಿಶಿಷ್ಟ ಜಾತಿಗೆ ೧೧, ಪರಿಶಿಷ್ಟ ಪಂಗಡ ೦೨, ಸಾಮಾನ್ಯ ೬೨ ಸೇರಿದಂತೆ ಒಟ್ಟು ೭೫ ಜನರಿಗೆ ಈ ಸೌಲಭ್ಯವನ್ನು ಕಲ್ಪಿಸಬೇಕಾಗಿದ್ದು, ಜಿಲ್ಲಾ ಕುರಿ ಮತ್ತು ಉಣ್ಣೆ ಉತ್ಪಾಕರ ಸಹಕಾರ ಸಂಘದ ಸದಸ್ಯರು ಮಾತ್ರ ಈ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹಾಗೇ ಕಾರ್ಯಕ್ರಮ ಸೂಚನೆಯಂತೆ ೧.೫ ವರ್ಷದಿಂದ ೨.೫ ವರ್ಷದ ಟಗರು ಖರೀದಿಯ/ ಪೂರೈಸಿದ ಟಗರಿನ ಬೆಲೆ ಶೇಕಡಾ ೭೫% ರಷ್ಟು ಅಥವಾ ಗರಿಷ್ಟ ರೂ. ೧೫೦೦೦/-ಗಳನ್ನು ನಿಗಮದಿಂದ ಸಹಾಧನದ ರೂಪದಲ್ಲಿ ಪಾವತಿಸಲಾಗುವುದು. ನಿಗದಿತ ನಮೂನೆಯ ಅರ್ಜಿಯನ್ನು ಸಂಬಂಧಿಸಿದ ಆಯಾ ತಾಲೂಕಿನ ಸಹಾಯಕ ನಿರ್ದೇಶಕರು, ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಲ್ಲಿ ಪಡೆದುಕೊಂಡು ಫೆಬ್ರುವರಿ. ೧೧ ರೊಳಗಾಗಿ ಕಛೇರಿ ವೇಳೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಕೊಪ್ಪಳ ಸಹಾಯಕ ನಿರ್ದೇಶಕರು  ತಿಳಿಸಿದ್ದಾರೆ.

Please follow and like us:
error