ನಾನು ಸೂಲಿಬೆಲೆ ಅವರಿಗೆ ದೇಶದ್ರೋಹಿ ಅಂತಾ ಹೇಳಿಲ್ಲ-ಡಿ.ವಿ.ಸದಾನಂದಗೌಡ

ಗಂಗಾವತಿ : ಬಸನಗೌಡ ಪಾಟೀಲ್ ಯತ್ನಾಳ್ ಗೆ  ಪಕ್ಷದಿಂದ ನೋಟಿಸ್ ನೀಡಿದ ವಿಚಾರ  ನೋಟಿಸ್ ಕೊಟ್ಟಿದ್ದು  ಪಕ್ಷದ ಕೆಲಸ,ನಾನು ಪಕ್ಷದ ಬಗ್ಗೆ ನಾನು ಮಾತನಾಡಲ್ಲ. ಯಾವುದೇ ಮುಜುಗರ ತರೋ ಕೆಲಸ ಆದ್ರೆ ಪಕ್ಷದಲ್ಲಿ ಶಿಸ್ತು ಸಮಿತಿ ಇದೆ. ಇಗಾಗಲೇ ನೋಟಿಸ್ ನೀಡಿದೆ,ಕಾನೂನು ಕ್ರಮ ಕೈಗೊಳ್ಳತ್ತೆ  ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು . ಕೊಪ್ಪಳದ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು  ಚಕ್ರವರ್ತಿ ಸೂಲಿಬೆಲೆ ವಿಚಾರ ನಾನು ಮಾತನಾಡೋದಿಲ್ಲ. ನಾನು ಈಗಾಗಲೇ ಅದನ್ನ ಮುಗಿಸಿದ್ದೀ‌ನಿ. ಸಂಸದರು ಏನು ಮಾಡ್ತಿಲ್ಲ ಅನ್ನೋದು ನನ್ನ ಮನಸ್ಸಿಗೆ ನೋವಾಗಿತ್ತು. ಯಾರಿಗಾದ್ರೂ ನನ್ನ ಹೇಳಿಕೆ ನೋವಾಗಿದ್ರೆ ಬಿಟ್ಟ ಬಿಡಿ ಎಂದು ವಿನಂತಿ ಮಾಡಿಕೊಂಡಿದ್ದೇನೆ. ನಾನು ಸೂಲಿಬೆಲೆ ಅವರಿಗೆ ದೇಶದ್ರೋಹಿ ಅಂತಾ ಹೇಳಿಲ್ಲ. ಹಾರಿಕೆ ಸುದ್ದಿ ಹರಡುವವರಿಗೆ ನಾನು ದೇಶದ್ರೋಹಿ ಅಂದಿದ್ದು. ನಾನೇನು ಅವರ ಹೆಸರು ಹೇಳಿದ್ನಾ ಎಂದು ಪ್ರಶ್ನೆ ಮಾಡಿದ ಗೌಡರು  ಯಾರಿಗೋ ಏನೋ ಆಯ್ತು ಅಂದ್ರೆ ನನಗೆ ಯಾಕೆ ತಿಳಕೊಬೇಕು ಎಂದ ಕೇಳಿದರು

Please follow and like us:
error