You are here
Home > ಈ ಕ್ಷಣದ ಸುದ್ದಿ > ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ರಥಯಾತ್ರೆ : ಸಂಚಾಲಕರಾಗಿ ಸಿ.ವಿ ಚಂದ್ರಶೇಖರ

ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ರಥಯಾತ್ರೆ : ಸಂಚಾಲಕರಾಗಿ ಸಿ.ವಿ ಚಂದ್ರಶೇಖರ

ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ರಥಯಾತ್ರೆಯ ಕೊಪ್ಪಳ ವಿಧಾನಸಭಾ ಕ್ಷೆತ್ರದ ಸಂಚಾಲಕರಾಗಿ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ  ಸಿ.ವಿ ಚಂದ್ರಶೇಖರ   ನೇಮಕ.

ಕೊಪ್ಪಳ: ನವಕರ್ನಾಟಕ ನಿರ್ಮಾಣಕ್ಕಾಗಿ ಪರಿಚರ್ತನಾ ರಥಯಾತ್ರೆಯ ಕೊಪ್ಪಳ ವಿಧಾನಸಭಾ ಕ್ಷೆತ್ರದ ಸಂಚಾಲಕರಾಗಿ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ  ಸಿ.ವಿ ಚಂದ್ರಶೇಖರ  ನೇಮಕ. ಭಾರತಿಯ ಜನತಾ ಪಕ್ಷದ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಹಾಗೂ ರಾಜ್ಯಧ್ಯಕ್ಷರಾದ ಶ್ರೀ ಯಡಿಯುರಪ್ಪನವರ ನೆತೃತ್ವದಲ್ಲಿ ರಾಜ್ಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೂ ಈ ರಥಯಾತ್ರೆ ತೆರಳಲಿದ್ದು ನವ ಕರ್ನಾಟಕ ನಿರ್ಮಾಣಕ್ಕಾಗಿ ಪ್ರಸ್ತುತ ರಾಜ್ಯದಲ್ಲಿರುವ ಕಾಂಗ್ರೇಸ್ ಸರ್ಕಾರದ ಭ್ರಷ್ಟಾಚಾರ, ಜನವಿರೋಧಿ ನೀತಿಗಳ ಕುರಿತು ರಾಜ್ಯದಲ್ಲಿರುವ ೫೭ ಸಾವಿರಕ್ಕೂ ಹೆಚ್ಚು ಭೂತಗಳಲ್ಲಿನ ಪ್ರತಿ ಮನೆ ಮನೆಗಳಿಗೂ ಜಾಗೃತಿ ಮೂಡಿಸಿ ಕಾಂಗ್ರೇಸ್ ಮುಕ್ತ ಕರ್ನಾಟಕವನ್ನಾಗಿ ಮಾಡಲು ಈ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯನ್ನು ನವಂಬರ್ ೦೨ ರಿಂದ ರಾಜ್ಯದ ಪ್ರತಿ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೆತ್ರಗಳಿಗೂ ತಲುಪಲಿದೆ,  ಪ್ರಧಾನಿ ನರೇಂದ್ರ ಮೋದಿಯವರು ೨೦೨೨ ರ ವೇಳೆಗೆ ನವ ಭಾರತ ನಿರ್ಮಿಸುವ ಸಂಕಲ್ಪ ತೊಟ್ಟಿದ್ದಾರೆ ಆ ನಿಟ್ಟಿನಲ್ಲಿ ಅದೇ ಮಾದರಿಯಲ್ಲಿ ಭಾ.ಜ ಪಕ್ಷವೂ ನವ ಕರ್ನಾಟಕ ನಿರ್ಮಾಣದ ಸಂಕಲ್ಪ ತೊಟ್ಟಿದೆ ಆ ನಿಟ್ಟಿನಲ್ಲಿ ರಾಜ್ಯದ ಪ್ರತಿ ವಿಧಾನ ಸಭಾ ಕ್ಷೆತ್ರದ ರಥಯಾತ್ರೆಯ ಸಂಚಾಲಕರನ್ನು ನೇಮಕಗೊಳಿಸಿದ್ದು ಕೊಪ್ಪಳ ವಿಧಾನ ಸಭಾ ಕ್ಷೆತ್ರದ ನವ ಕರ್ನಾಟಕ ಪರಿವರ್ತನಾ ರಥಯಾತ್ರೆಯ ಸಂಚಾಲಕರನ್ನಾಗಿ ಬಿಜೆಪಿ ರಾಷ್ಟ್ರಿಯ ಪರಿಕ್ಷತ್ ಸದಸ್ಯರಾದ  ಸಿ.ವಿ ಚಂದ್ರಶೇಖರ ಅವರನ್ನು ನೇಮಕಗಳಿಸಿದ್ದಾರೆ.

Top