You are here
Home > ಈ ಕ್ಷಣದ ಸುದ್ದಿ > ನಮ್ಮ ದೇಶದ ಸಂಸ್ಕೃತಿ ನಮ್ಮ ಹೆಮ್ಮೆ – ಅಮರೇಶ ಕರಡಿ

ನಮ್ಮ ದೇಶದ ಸಂಸ್ಕೃತಿ ನಮ್ಮ ಹೆಮ್ಮೆ – ಅಮರೇಶ ಕರಡಿ


ಕೊಪ್ಪಳ: ನಮ್ಮ ದೇಶ ಕಲೆ ಸಂಸ್ಕೃತಿ ಸಾಹಿತ್ಯದಲ್ಲಿ ಜಗತ್ಪ್ರಸಿದ್ದವಾದದ್ದು, ಅದರಲ್ಲೂ ನಮ್ಮ ದೇಶದ ಆಚಾರ ವಿಚಾರಗಳಿಗೆ ಪಾಶ್ಚಿಮಾತ್ಯರು ತಲೆ ಭಾಗಿದ್ದಾರೆ. ನಮ್ಮ ದೇಶದ ಸಂಸ್ಕೃತಿಯೇ ನಮಗೊಂದು ದೊಡ್ಡ ಹೆಮ್ಮೆ ಎಂದು ಬಿಜೆಪಿ ಮುಖಂಡ ಅಮರೇಶ ಕರಡಿ ಹೇಳಿದರು.
ನಗರದ ಸಾಹಿತ್ಯಭವನದಲ್ಲಿ ರಿದಮ್ ಡ್ಯಾನ್ಸ್ ಕಲ್ಚರ್ ಟ್ರಸ್ಟ್ ಆದರ್ಶ ದಂಪತಿ ಕಾರ್ಯಕ್ರಮದಲ್ಲಿ ಭಾಗವಹಸಿ ಭಾನುವಾರ ಅವರು ಮಾತನಾಡಿದರು,
ಕೊಪ್ಪಳ ಜಿಲ್ಲೆ ಕಲೆ, ಸಂಗೀತ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ರಾಜ ಮಹಾರಾಜರ ಕಾಲದಿಂದಲೂ ನಮ್ಮ ಜಿಲ್ಲೆಯ ಜನ ಸಂಗೀತ ಸಾಹಿತ್ಯ ದಂತ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತ ಬಂದಿದೆ. ಮುಂದುವರೆದ ದಿನಮಾನದಲ್ಲಿ ಕೊಪ್ಪಳದಲ್ಲಿ ಆಯೋಜಿಸರುವ ಈ ಆದರ್ಶ ದಂಪತಿ ಕಾರ್ಯಕ್ರಮ ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವುದರ ಜೊತೆಗೆ ಯಾವುದೇ ಟಿವಿ ಲೈವ್ ಕಾರ್ಯಕ್ರಮಗಳಿಗಿಂತ ಕಡಿಮೆ ಇಲ್ಲದಂತೆ ಆಯೋಜನೆ ಮಾಡಿದ್ದಾರೆ. ಕಾರ್ಯಕ್ರಮ ಆಯೋಜಿಸಿರುವ ಬಸವರಾಜ ಮಾಲಗಿತ್ತಿ ಮತ್ತು ಸ್ನೇಹಿತರಿಗೆ ಅಭಿನಂದನೆ ಸಲ್ಲಿಸಿದರು.
ಸಿ.ವಿ ಚಂದ್ರಶೇಖರ ಮತ್ತು ಲಕ್ಷ್ಮೀದೇವಿ ಚಂದ್ರಶೇಖರ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ, ಸಂದ್ಯಾ ಮಾದಿನೂರ, ಸಿದ್ದಪ್ಪ ಹಂಚಿನಾಳ, ಗೀತಾ, ಮಂಜುನಾಥ ಗೊಂಡಬಾಳ, ಈರಪ್ಪ ಕುಡಗುಂಟಿ, ಮಂಜುನಾಥ ಗೊಂಡಬಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Top