ನದಾಫ್/ಪಿಂಜಾರ ಸಮಾಜದಿಂದ ಅಭಿವೃದ್ಧಿ ನಿಗಮ ಮಂಡಳಿ ರಚನೆಗಾಗಿ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ


ಕೊಪ್ಪಳ : ನದಾಫ್ ಪಿಂಜಾರ್ ಸಮುದಾಯದ ಅಭಿವೃದ್ದಿಗಾಗಿ ಅಭಿವೃದ್ದಿ ನಿಗಮ ಮಂಡಳಿ ರಚನೆ ಮಾಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಇಂದು ಮನವಿ ಸಲ್ಲಿಸಲಾಯಿತು.ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿಯವರಿಗೆ ಮನವಿ ಸಲ್ಲಿಸಲಾಯಿತು. ಇಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಹಾಗೂ ತಾಲೂಕ ಕೇಂದ್ರಗಳಲ್ಲಿ ಮನವಿ ಸಲ್ಲಿಸಲಾಯಿತು.
ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಲಾದ ಮನವಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ವಾಸಿಸುವ ನದಾಫ್/ಪಿಂಜಾರ ಜನಾಂಗವು ಶೋಷಿತ ಹಾಗೂ ಕಡು ಬಡತನದ ನೆರಳಲ್ಲಿ ಕಷ್ಟಕರ ಜೀವನವನ್ನು ನಡೆಸುತ್ತಿರುವ ಅತಿ ಹಿಂದುಳಿದ ಜನಾಂಗವಾಗಿದ್ದೇವೆ. ಬಡತನದ ಸರಳತೆಯಲ್ಲಿ ಎಲ್ಲಾ ವರ್ಗದ ಜನತೆಯೊಂದಿಗೆ ಅರಿತು-ಬೆರೆತು ಜೀವನ ನೆಡೆಸುತ್ತಿರುವ ಈ ಜನಾಂಗ ಕೋಮು ಸೌಹಾರ್ಧತೆಗೆ ಸಂಕೇತವಾಗಿದ್ದೇವೆ.
ನಮ್ಮ ಜನಾಂಗ ನಗರ ಹಾಗೂ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ನಮ್ಮ ಮೂಲ ವೃತ್ತಿ ಗಾದಿ, ಹಗ್ಗ ಕಂಣಿ ತಯ್ಯಾರಿಕೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ತಾಂತ್ರಿಕತೆಯಿಂದ ನಮ್ಮ ತಯ್ಯಾರಿಕೆ ವಸ್ತುಗಳಿಗೆ ಬೇಡಿಕೆ ಇಲ್ಲದಂತಾಗಿ ಕಸಬು ಸಂಪೂರ್ಣ ನಿಲುಗಡೆ ಯಾಗಿದೆ. ಹೀಗಾಗಿ ದುಡಿಮೆಗಾಗಿ ಗೌಂಡಿ, ಕೂಲಿ ಕೆಲಸ, ಬೀದಿಗಳಲ್ಲಿ ಹಂಣು ತರಕಾರಿ ವ್ಯಾಪಾರ, ಆಟೊಗ್ಯಾರೆಜ ನಂಥಹ ಸಂಣಪುಟ್ಟ ಉದ್ಯೋಗ ಮಾಡುತ್ತಿದ್ದು ನಾವು ಆರ್ಥಿಕವಾಗಿ ಸಂಕಸ್ಟ ಎದುರಿಸುತ್ತಿದ್ದೇವೆ. ನಮ್ಮ ಜನಾಂಗ ರಾಜ್ಯದಲ್ಲಿ ಸುಮಾರು ೨೫ ರಿಂದ ೩೦ ಲಕ್ಷಗಳ ಜನಸಂಖ್ಯೆ ಇದ್ದು ಇದರಲ್ಲಿ ಶೇಕಡ ೯೦ ಕ್ಕೂ ಅಧಿಕ ಬಡವರಿದ್ದು, ಮಕ್ಕಳಿಗೆ ಶಿಕ್ಷಣ ಕೊಡಿಸುವ ಆರ್ಥಿಕ ಶಕ್ತಿ ಇಲ್ಲದೆ ಇಂದಿನ ಸ್ಪರ್ಧಾತ್ಮಕ ಜನ ಜೀವನದ ಹೋರಾಟದಲ್ಲಿ ಹಾಗೂ ಇನ್ನಿತರ ಎಲ್ಲಾ ಹಂತದಲ್ಲಿ ದುರ್ಬಲರಾಗಿದ್ದೇವೆ.
ಈಗಾಗಲೇ ೨ ಸಲ ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿಯಾಗಿ, ಸಂಪರ್ಕಿಸಿ ಮನವಿ ನೀಡಲಾಗಿದೆ. ಪರಿಶೀಲಿಸುವಾದಾಗಿ ತಿಳಿಸಿದ್ದು ಇದುವರೆಗೆ ನಮ್ಮ ಬೇಡಿಕೆ ಈಡೆರಿರುವದಿಲ್ಲ. ನಮ್ಮ ಜನಾಂಗ ಕರ್ನಾಟಕ ಸರಕಾರದ ಮೀಸಲಾತಿ ಪ್ರಕಾರ ಹಿಂದುಳಿದ ಪ್ರವರ್ಗ-೧ ರಲ್ಲಿ ಬರುವದರಿಂದ ಈಗಿರುವ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಹಲವಾರು ತಾಂತ್ರಿಕ ದೋಷಗಳಿಂದ, ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ. ನಮ್ಮ ಜನಾಂಗವನ್ನು ನೇರವಾಗಿ ಸರ್ವತೋಮುಖ ಅಭಿವೃದ್ಧಿ ಪಡಿಸಲು ಪ್ರತ್ಯೇಕ ನಿಗಮ ಮಂಡಳಿಯ ಅವಶ್ಯಕತೆ ಇದೆ. ಪ್ರತ್ಯೇಕ ನಿಗಮ ಮಂಡಳಿಯಾದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ.
ಮುಂದಿನ ಹಂತದಲ್ಲಿ ಈಗಾಗಲೇ ಹಲವಾರು ಮಂತ್ರಿಗಳು, ಸಂಸದರುಗಳು ಮುಖ್ಯ ಮಂತ್ರಿಗಳಿಗೆ ನಿಗಮ ರಚನೆಗಾಗಿ ಶಿಫಾರಸ್ಸು ಮಾಡಲು ಸಂಪೂರ್ಣ ಸಹಕಾರವನ್ನು ವ್ಯಕ್ತ ಪಡಿಸಿದ್ದು ಮುಖ್ಯಮಂತ್ರಿಗಳವರಿಗೆ ನಿಯೋಗದೊಂದಿಗೆ ಪುನ: ನೇರವಾಗಿ ಸಂಪರ್ಕಿಸಿ ಮನ ಒಲಿಸಲು ಪ್ರಯತ್ನಿಸಲಾಗುವದು. ನಮ್ಮ ಬೇಡಿಕೆಗೆ ಬೇಗನೆ ಸ್ಪಂಧಿಸಲು ಸಮಾಜದ ಪರವಾಗಿ ಇಂದು ರಾಜ್ಯಾದ್ಯಂತ ಮನವಿಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಸಹಕಾರ್ಯದರ್ಶಿಗಳಾದ ಶಹಾಬುದ್ದೀನಸಾಬ ನೂರಭಾಷ ಇವರು ರಾಜ್ಯ ಘಟಕದ ಪರವಾಗಿ, ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಕಾಶಿಮ ಅಲಿ ಮುದ್ದಾಬಳ್ಳಿ ಇವರು ಜಿಲ್ಲಾ ಘಟಕದ ಪರವಾಗಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಲ್ಲಾಸಾಬ ಗೊಂದಿಹೊಸಳ್ಳಿ ಇವರು ತಾಲೂಕ ಘಟಕದ ಪರವಾಗಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಇನ್ನುಳಿದ ಪದಾಧಿಕಾರಿಗಳಾದ ಹೊನ್ನುರಸಾಬ ಭರಾಪೂರ, ಯಾಸೀನಸಾಬ ಗಂಗಾವತಿ, ಜಾಕಿರ ಹುಸೇನ ತಳಕಲ್, ಸಲಿಂ ಸಾಬ ಭಾಗ್ಯನಗರ, ಕಾಶಿಮಸಾಬ ಸಂಕನೂರ, ಶಕ್ಷಾವಲಿ ಗಂಗಾವತಿ, ಮಾಬುಸಾಬ ಬಿಕನಳ್ಳಿ, ಮುಸ್ತಫ್ ಕುದ್ರಿಮೊತಿ, ಇನ್ನೂ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error