ನಗರಕ್ಕೆ ಶೀಘ್ರವೇ ೧ ಸಾವಿರ ಹಾಸಿಗೆಯ ಆಸ್ಪತ್ರೆ ನಿರ್ಮಾಣ-ಸಂಸದೀಯ ಕಾರ್ಯದರ್ಶಿ ಕೆ.ರಾಘವೇಂದ್ರ ಹಿಟ್ನಾಳ


ಕೊಪ್ಪಳ:೦೮, ಹಿರೇಸಿಂದೋಗಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಕಾತರಕಿ,ಗುಡ್ಲಾನೂರು,ಬೆಳೂರು, ಡಂಬ್ರಳ್ಳಿ, ಬೂದಿಹಾಳ, ಬಿಸರಳ್ಳಿ, ಬಿಕನಹಳ್ಳಿ, ಮೈನಹಳ್ಳಿ, ಹಾಗೂ ಹಣವಾಳ ಗ್ರಾಮಗಳಲ್ಲಿ ವಿವಿಧ ಯೋಜನೆ ಅಡಿಯಲ್ಲಿ ರೂ.೧ ಕೋಟಿಯ ಸಿಸಿರಸ್ತೆ, ಅಂಗನವಾಡಿ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕ, ಪದವಿಪೂರ್ವ ಕಾಲೇಜು ಕೊಠಡಿ ನಿರ್ಮಾಣ, ಚರಂಡಿ ಕಾಮಗಾರಿಯ ಭೂಮಿಪೂಜೆ ಹಾಗೂ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು, ರೂ.೧೧೬ ಕೋಟಿಯಲ್ಲಿ ಕೊಪ್ಪಳ ನಗರಕ್ಕೆ ೧ ಸಾವರಿ ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ಈ ಕ್ಯಾಬಿನೇಟ್ ನಲ್ಲಿ ಮಂಜೂರಾಗಿದ್ದು, ಇನ್ನೊಂದು ಜಿಲ್ಲಾ ಆಸ್ಪತ್ರೆ ನಗರದಲ್ಲಿ ಶೀಘ್ರ ನಿರ್ಮಾಣವಾಗಲಿದೆ. ಡಂಬ್ರಳ್ಳಿ-ಹಳೇಗೊಂಡಬಾಳ, ಹಿರೇಹಳ್ಳಕ್ಕೆ ನಿರ್ಮಾಣವಾಗುತ್ತಿರುವ ರೂ.೫ ಕೋಟಿಯ ಬ್ರೀಜ್ ಕಮ್ ಬ್ಯಾರೇಜ್ ಮುಗಿಯುವ ಹಂತದಲ್ಲಿದ್ದು, ಈ ಭಾಗದ ರೈತರಿಗೆ ವರದಾನವಾಗಲಿದೆ. ಸಮ್ಮಶ್ರ ಸರ್ಕಾರದಲ್ಲಿ ರೈತರ ಪರ ಅನೇಕ ಯೋಜನೆಗಳು ಅನುಷ್ಠಾನಗೊಂಡಿದ್ದು, ಕೊಪ್ಪಳ ಕ್ಷೇತ್ರಕ್ಕೆ ನೀರಾವರಿಗೆ ಹೆಚ್ಚು ಅನುಧಾನ ಬಿಡುಗಡೆಯಾಗಿದ್ದು, ಕೊಪ್ಪಳ ಕ್ಷೇತ್ರವು ಬರುವ ದಿನಗಳಲ್ಲಿ ಹಸಿರಿನಿಂದ ಕಂಗೊಳಿಸಲಿದೆ. ತುಂಗಾಭದ್ರ ನದಿಯ ಹಿನ್ನೀರಿನ ಸದ್ಬಳಕೆ ಮಾಡಿಕೊಂಡು ಕೊಪ್ಪಳ ಏತ ನೀರಾವರಿಗೆ ಹೆಚ್ಚಿನ ಭೂಮಿಯು ಒಳಪಡುವಂತೆ ಮಾಡಿ ಸತತವಾಗಿ ಬೀಕರ ಬರಗಾಲಕ್ಕೆ ತುತ್ತಾಗಿರುವ ಕೊಪ್ಪಳ ಕ್ಷೇತ್ರವನ್ನು ಒಂದು ಮಾದರಿಯ ನೀರಾವರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಹಾಲಿ ಸದಸ್ಯ ಎಸ್.ಬಿ.ನಾಗರಳ್ಳಿ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಜುಲ್ಲು ಖಾದ್ರಿ, ಎ.ಪಿ.ಎಮ್.ಮಾಜಿ ಅಧ್ಯಕ್ಷ ಯಂಕನಗೌಡ್ರು ಹಿರೇಗೌಡ್ರು, ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ, ಮುಖಂಡರುಗಳಾದ ಕೃಷ್ಣ ಇಟ್ಟಂಗಿ, ಕೇಶವರೆಡ್ಡಿ, ಶಂಕರಗೌಡ್ರು ಹಿರೇಗೌಡ್ರು, ಜಿಲ್ಲಾ ಎಸ್.ಘಟಕದ ಅಧ್ಯಕ್ಷ ಗಾಳೇಪ್ಪ ಪೂಜಾರ, ಕೃಷ್ಣ ಗಲಬಿ, ಬಸವರೆಡ್ಡಿ ಕರೆಡ್ಡಿ, ರಾಮನಗೌಡ್ರು, ಬಿಮಸೇಪ್ಪ ಭೋಚನಹಳ್ಳಿ, ತಾಲೂಕ ಅಧಿಕಾರಿಗಳು, ಅಳವಬಂಡಿ ಪಿ.ಎಸ್.ಐ.ರಾಮಣ್ಣ, ವಕ್ತಾರ ಕುರಗೋಡ ರವಿ ಯಾದವ್ ಉಪಸ್ಥಿತರಿದ್ದರು.

Please follow and like us:
error