ಧಾರ್ಮಿಕ ಸಭೆ ಸಮಾರಂಭಗಳು ಸಾಮಾಜಿಕ ಶಕ್ತಿ ತುಂಬುತ್ತವೆ: ಹೆಚ್.ಎಸ್. ಪಾಟೀಲ್

ಕೊಪ್ಪಳ,  : ಧಾರ್ಮಿಕ ಸಭೆ ಸಮಾರಂಭಗಳು ಮಾನವಕಲ್ಯಾಣಕ್ಕೆ ಶಕ್ತಿ ಮತ್ತುಯುಕ್ತಿಯನ್ನುತುಂಬುತ್ತವೆಇದರಿಂದಜನರುಕೂಡಜಾಗೃತ ಭಾವವನ್ನು ಹೊಂದುತ್ತಾರೆಇಂತಹಧಾರ್ಮಿಕ ಗೋಷ್ಠಿಗಳು ಹೆಚ್ಚಿನರೀತಿಯಲ್ಲಿ ಸಂಘಟಿತಗೊಳ್ಳಬೇಕೆಂದು ಹಿರಿಯ ಸಾಹಿತಿ ಹೆಚ್.ಎಸ್. ಪಾಟೀಲ್‌ಅಭಿಮತ ವ್ಯಕ್ತಪಡಿಸಿದರು.
ಅವರು  ಗಣೇಶ ನಗರದ ಲಕ್ಷ್ಮೀವೆಂಕಟೇಶ್ವರದೇವಸ್ಥಾನ ೬ ನೇ ವಾರ್ಷಿಕೋತ್ಸವ ಹಾಗೂ ಡಾ.ಪಂಡಿತ ಪುಟ್ಟರಾಜ ಹರಿಕಥಾ ಸಾಂಸ್ಕೃತಿಕ ಕಲಾ ಸಂಘದ ೧೪ ನೇ ವಾರ್ಷಿಕೋತ್ಸವಕಾರ್ಯಕ್ರಮದಉದ್ಘಾಟನೆ ನೇರವೇರಿಸಿ ಮಾತನಾಡಿದರು. ಸಮಾರಂಭದಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ತಿನಜಿಲ್ಲಾಧ್ಯಕ್ಷರಾದಜಿ.ಎಸ್. ಗೋನಾಳ ಮಾತನಾಡಿ, ಕಲೆ ಸಾಹಿತ್ಯ ಸಂಗೀತ ನೃತ್ಯ, ಜಾನಪದ ಇವುಗಳು ಮನುಕೂಲದ ಶ್ರೇಷ್ಟ ಆಯಾಮಗಳು ಇಂತಹ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದ ಮಹಾಂತಯ್ಯ ಶಾಸ್ತ್ರಿಯವರ ಸಂಸ್ಥೆ ೧೪ ನೇ ವಾರ್ಷಿಕೋತ್ಸವ ನಿಮಿತ್ಯ ಹಮ್ಮಿಕೊಂಡಿರುವ ಸಂಗೀತ ಮತ್ತು ಸನ್ಮಾನ ಸಮಾರಂಭ ಸುತ್ಯಾರ್ಹವಾದದು. ಮತ್ತು ಮಹಿಳೆ ಮಕ್ಕಳು ಸಮಾಜದ ಬೆಲೆ ಕಟ್ಟಲಾಗದ ಆಸ್ತಿ.ಇಂತಹಯುವ ಸಂಪತ್ತನ್ನುಧಾರ್ಮಿಕ ಸಭೆ ಸಮಾರಂಭಗಳ ಮೂಲಕ ಸಾಹಿತ್ಯ ಸಂಗೀತಜಾನಪದತತ್ವಪದ, ವಚನ ಸಂಗೀತಗಳಂತಹ ಮೂಲ ಬುನಾದಿ ಶಾಸ್ತ್ರಿ ಸಂಗೀತ ವೆಂಬುದನ್ನು ತಿಳಿಹೇಳುವ ಇಂತಹ ಮಹತ್ತಕಾರ್ಯಕ್ರಮ ಪದೇ ಪದೇ ನೇರವೇರಬೇಕಿದೆ ಎಂಬ ಡಾ.ಪಂ.ಪುಟ್ಟರಾಜ ಕವಿಗವಾಯಿಗಳವರ ಆಶಯದಂತೆ ನಾವು ನೀವು ನಡೆದುಕೊಳ್ಳಬೇಕೆಂದು ಅವರಿಲ್ಲಿ ಅಭಿವ್ಯಕ್ತಪಡಿಸಿದರು. ಇದೇ ವೇಳೆ ಹಿರೇಬಗನಾಳ ಗ್ರಾಮ ಪಂಚಾಯತ ಸದಸ್ಯರಾದ ಜಿ.ಬಿ. ಸರ್ದಾರ, ಯಲ್ಲಮ್ಮ ಸಿದ್ಧಪ್ಪ ದೇವರಮನಿ, ಬದ್ಯೇಪ್ಪಎಸ್.ಲಂಬಾಣಿಯವರಿಗೆಅಭಿನಂದನಾ ಪತ್ರ ನೀಡಿಗೌರವಿಸಲಾಯಿತು. ಇದೇ ಸಂದರ್ಭದಲ್ಲಿರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೆಚ್.ಎಸ್. ಪಾಟೀಲ್, ಹಿಂದೂಸ್ಥಾನಿ ಗಾಯಕರಾದ ಮಲ್ಲಿಕಾರ್ಜುನತುರನೂರು, ತಬಲಾ ವಾದಕಜಲೀಲ್ ಪಾಷಾ ಮುದ್ದಾಬಳ್ಳಿ, ಲಕ್ಷ್ಮೀವೆಂಕಟೇಶ್ವರ ಟ್ರಸ್ಟಿನ್ ಅಧ್ಯಕ್ಷರಾದಜ್ಞಾನೇಶ್ವರ ನರಸಪ್ಪ ಹೆಚ್., ಸವಿತಾ ಸಮಾಜದ ಮುಖಂಡರಾದರವಿಕುಮಾರ ಸಿದ್ದಪ್ಪ ಸೂಗೂರು, ಇವರಿಗೆ ವಿಶೇಷ ಸನ್ಮಾನ ಮಾಡಿಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಲಕ್ಷ್ಮೀವೆಂಕಟೇಶ್ವರ ಟ್ರಸ್ಟಿನ್ ಅಧ್ಯಕ್ಷರಾದಜ್ಞಾನೇಶ್ವರ ನರಸಪ್ಪ ಹೆಚ್., ಸವಿತಾ ಸಮಾಜದ ಮುಖಂಡರಾದರವಿಕುಮಾರ ಸಿದ್ದಪ್ಪ ಸೂಗೂರು, ಹೂಗಾರ ಸಮಾಜದಜಿಲ್ಲಾಧ್ಯಕ್ಷರಾದ ಗವಿಸಿದ್ದಪ್ಪ ಹೂಗಾರ, ಸವಿತಾ ಸಮಾಜದ ನಿರ್ದೇಶಕರಾದ ಮಾರುತಿ ವೆಂಕಟೇಶ ಸೂಗೂರು ಸೇರಿದಂತೆಇತರರು ಉಪಸ್ಥಿತರಿದ್ದರು.
ನಂತರ ಶರಣ ಸಾಹಿತ್ಯ ಪರಿಷತನಿಂದ ಶ್ರೀ ಮಹಾಂತಯ್ಯ ಸ್ವಾಮಿಗಾಯಕರುಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಂಗೀತಕಾರ್ಯಕ್ರಮವನ್ನು ಮಲ್ಲಿಕಾರ್ಜುನತುರನೂರು, ಮಹಾಂತಯ್ಯ ಹಿರೇಬಗನಾಳ ವಚನ ಸಂಗೀತ, ಚನ್ನಯ್ಯರ್‍ಯಾವಣಕಿ ಭಕ್ತಿಗೀತೆ ಹಾಗೂ ತಬಲಾ ಸೋಲೋ ಜಲೀಲ್ ಪಾಷಾ ಹಾಗೂ ಎನ್.ಎಸ್. ಬಡಿಗೇರ, ತಾಳದಲ್ಲಿ ಕೃಷ್ಣ ಸೊರಟೂರು ನಡೆಸಿಕೊಟ್ಟರು. ದೇವಸ್ಥಾನಅರ್ಚಕರಾದರಾಘವೇಂದ್ರ ಸಹೋದರರು ಮತ್ತು ಭಕ್ತವೃಂದದವರೆಲ್ಲಾ ಸೇರಿ ಸಾಮೂಹಿಕವಾಗಿ ವೆಂಕಟೇಶ್ವರ ಸ್ವಾಮಿಯ ನಾಮವಳಿಯನ್ನು ಪಠಿಸಿದರು.

Please follow and like us:
error