ಧರ್ಮದ ಹೆಸರಿನಲ್ಲಿ ರಾಜಕೀಯ ಸಲ್ಲದು-ಡಾ. ಶ್ಯಾಮಸುಂದರ ಬಿದರಕುಂದಿ

ಕೊಪ್ಪಳ ಮಾರ್ಚ್ :೧೮ ತಿರುಳ್ಗನ್ನಡ ಸಾಹಿತಿಗಳ ಸಹಾಕಾರಿ ಸಂಘ ಹಾಗೂ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಡಾ.ಶ್ಯಾಮಸುಂದರ ಬಿದರಕುಂದಿ ಅವರು ಡಾ. ಪಂಚಾಕ್ಷರಿ ಹೀರೆಮಠರ ಬದುಕು-ಬರಹ ಕುರಿತು ಮಾತನಾಡುತ್ತಾ,
ಡಾ.ಪಂಚಾಕ್ಷರಿ ಹೀರೆಮಠರ ‘ಕವಿ-ಕಾವ್ಯ-ಕಲ್ಪನೆ ಗ್ರಂಥವನ್ನು ಮೊಟ್ಟ ಮೊದಲಿಗೆ ಓದಿ ಪ್ರೇರಣೆ ಪಡೆದೆ. ಹಿಂದಿಯಲ್ಲಿ ಮುನಿರೂಪಚಂದ ಅವರ ‘ಖುಲೆಆಕಾಶಮೇ’ ಕಾವ್ಯವನ್ನು ‘ಬಯಲ ಭಾನಿನಲಿ’ ಎಂದು ಕನ್ನಡದಲ್ಲಿ ಅನುವಾದಿಸಿದ್ದು ಅನುವಾದಿತ ಕೃತಿ ಅನಿಸುವುದಿಲ್ಲ. ಇಲ್ಲಿ ಬರುವ ಮುಕ್ತಕಗಳು ಅವರ ಸಾಮಾಜಿಕ ಜೀವನಕ್ಕೆ ಒಪ್ಪುವಂತವು. ಅವರ ಬದುಕು ಬರಹ ಎರಡು ಒಂದೇ ತರಹ. ಪಂಚಾಕ್ಷರಿ ಹೀರೆಮಠರಿಗೆ ಈಗ ತೊಂಬತ್ತರ ಸಮೀಪ. ಬಯಲ ಬಾನಿನಲ್ಲಿ ಮುನಿರೂಪಚಂದ ಅವರ ಜೀವನ ಮತ್ತು ಸಾಹಿತ್ಯ ಕುರಿತ್ತದ್ದು ಮಾತ್ರವಲ್ಲ. ಅದು ಡಾ.ಪಂಚಾಕ್ಷರಿ ಹೀರೆಮಠರ ಜೀವನವೂ ಹೌದು. ಅವರ ಸಾಹಿತ್ಯವೂ ಹೌದು. ಇಲ್ಲಿಯ ಮುಕ್ತಕಗಳಲ್ಲಿ ಜೀವನ ಕುರಿತು ಮುಕ್ತವಾಗಿ ಹೇಳಲಾಗಿದೆ. ಮುನಿರೂಪಚಂದ ಮುಲತಹ ಜೈನ ಸನ್ಯಾಸಿ, ಪ್ರತಿಭಾವಂತರು. ಮುನಿಯೆಂದರೆ ತಪಸ್ವಿಯೆಂದು ಸಿಟ್ಟನ್ನು ಬಿಟ್ಟವರು, ಸಾತ್ವಿಕ ಸಿಟ್ಟುವುಳ್ಳವರು ಎಂದರ್ಥ. ಸಿಟ್ಟಿನಲೊಂದು ಜೀವನವನ್ನು ಬೇಳಗಿಸುವಂತಹ ಬೆಳಕಿದೆ. ಮುನಿರೂಪಚಂದರ ಭಾವನೆಗಳು, ವಿಚಾರಗಳು ಅದೇ ಮನಸ್ಸನ್ನು ಹಿರೇಮಠರು ಹೊಂದಿದವರಾದುದರಿಂದ ಡಾ.ಪಂಚಾಕ್ಷರಿ ಹೀರೆಮಠರ ಅನುವಾದಿತ ಕೃತಿ ಅವರ ಮೂಲ ಕೃತಿ ಎನ್ನುವಂತಿದೆ.
ಧರ್ಮದ ಬಗೆಗೆ ಇಂದಿನ ಕಲುಷಿತ ವಾತವರಣದಲ್ಲಿರುವ ಧರ್ಮದ ಆಚರಣೆಗೆ ಹೋಲಿಸಿ ನೋಡಿದಾಗ, ಬಹಳಷ್ಟು ವ್ಯತ್ಯಾಸ ಅನಿಸುತ್ತದೆ. ಧರ್ಮ ಇರುವುದು ಶೋಷಣೆ ಮಾಡುವುದಕ್ಕಲ್ಲ. ಧರ್ಮದ ಹೆಸರಿನಲ್ಲಿ ರಾಜಕೀಯ ಸಲ್ಲದು. ಧರ್ಮದ ಮೂಲ ಉದ್ದೇಶ ನಾನು ಬದುಕುವುದು ನನ್ನಂತೆಯೆ ಇತರರು ಬದುಕುವದು ಎಂದು ಹೇಳಿದರು.
ಕಾರ್ಯಕ್ರಮವನ್ನು ಖ್ಯಾತ ಕಥೆಗಾರ ಮಲ್ಲಿಕಾರ್ಜುನ ಹೀರೆಮಠ ದೀಪ ಬೆಳಗಿಸಿ ಉಧ್ಘಾಟಿಸಿ ಸಾಹಿತ್ಯ ಕಲೆಗಳು ಜೀವನವನ್ನು ರೂಪಿಸುತ್ತವೆ. ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕೆಂದು ಆಶಿಸಿದರು.
ಹ.ಯ.ಈಟಿಯವರ ‘ಕಾಮನ ಬಿಲ್ಲು’ ಎಂಬ ಗದ್ಯ ಪದ್ಯ ಸಂಕಲನವನ್ನು ಡಾ.ಶ್ಯಾಮಸುಂದರ ಬಿದರಕುಂದಿಯವರು ಬಿಡುಗಡೆ ಮಾಡಿದರು. ಪ್ರಾರಂಭದಲ್ಲಿ ಪ್ರಾಸ್ತವಿಕ ನುಡಿಗಳನ್ನು ತಿರುಳ್ಗನ್ನಡ ಸಹಕಾರಿ ಸಂಘದ ಅಧ್ಯಕ್ಷರಾದ ಅಲ್ಲಮಪ್ರಭು ಬೆಟ್ಟದೂರು ನುಡಿದರು. ಸಂಘಟನಾ ಕಾರ್ಯದರ್ಶಿ ಮೈಲಾರಪ್ಪ ಉಂಕಿಯವರು ಸ್ವಾಗತಿಸಿದರು. ಡಾ.ಹುಲಿಗೆಮ್ಮನವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Please follow and like us:
error