fbpx

ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ – ಡಾ. ಶ್ರೀನಿವಾಸ

ಕೋರೆಗಾಂವ್ ವಿಜಯೋತ್ಸವ-೨೦೦ ವರ್ಷಗಳು ಮುಂದೇನು…?
ಬಳ್ಳಾರಿ, ಡಿ.೩೧:ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಬೆಂಗಳೂರಿನ ಬಿಎಂಎಸ್ ಲಾ ಕಾಲೇಜ್ ನ ಸಹ ಪ್ರಾಧ್ಯಾಪಕ ಡಾ. ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದರು. ಬಹುಜನ ವಿದ್ಯಾರ್ಥಿ ಸಂಘ ಜಿಲ್ಲಾ ಘಟಕ ನಗರದ ಡಾ. ಬಿ. ಆರ್ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕೋರೆಗಾಂವ್ ವಿಜಯೋತ್ಸವ-೨೦೦ ವರ್ಷಗಳು ಮುಂದೇನು…? ವಿಷಯದ ಕುರಿತು ಜಿಲ್ಲಾಮಟ್ಟದ ವಿಚಾರಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮನುವಾದಿ ಸರಕಾರ, ಮನಸುಗಳಿಂದ ಪ್ರಜಾಪ್ರಭುತ್ವಕ್ಕೆ ಅಪಾಯ ಒದಗಿದೆ. ಇದಕ್ಕೆ ಕೇಂದ್ರ ಸರಕಾರದ ಸಚಿವರೇ ಸಂವಿಧಾನ ಬದಲಾಯಿಸುವ ಮಾತನಾಡುತ್ತಿರುವುದು, ದೇಶದ ಸಾಮಾನ್ಯ ಜನತೆಗೆ ಶಿಕ್ಷಣ ದುಬಾರಿಯಾಗುತ್ತಿರುವುದು. ದಮನಿತರಿಗೆ ಡಾಕ್ಟರ್, ಇಂಜನಿಯರ್ ಸೇರಿದಂತೆ ಉನ್ನತ ಹುದ್ದೆಗಳು ಗಗನ ಕುಸುಮವಾಗುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಆರೋಪಿಸಿದರು.
ಶೂದ್ರರು, ಶೂದ್ರಾತಿ ವರ್ಗದ ಎಲ್ಲಾ ಬಹುಜನರು ಒಗ್ಗಟ್ಟಾಗುವ ಮೂಲಕ ಪಟ್ಟಭದ್ರರ ಷಡ್ಯಂತ್ರಗಳನ್ನು ಹಿಮ್ಮೆಟ್ಟಿಸಬೇಕು ಎಂದು ಹೇಳಿದರು.
ದೇಶದ ಬಡತನ, ಅಸಹಾಯಕತೆ ಕಾಂಗ್ರೆಸ್ ಪಕ್ಷಕ್ಕೆ ಬಂಡವಾಳವಾದರೆ ಬಿಜೆಪಿಗೆ ಕೋಮುವಾದವೇ ಬಂಡವಾಳವಾಗಿದೆ. ಹೀಗಾಗಿ ಈ ಎರಡು ಪಕ್ಷಗಳ ಬಗ್ಗೆ ಬಹುಜನರು ಎಚ್ಚರಿಕೆ ಇಂದ ಇರಬೇಕು. ವಿವಿಧ ಸಂಘಟನೆಗಳಲ್ಲಿ ಹರಿದು ಹಂಚಿಹೋಗಿರುವ ದಲಿತರು, ದಮನಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಒಗ್ಗಟ್ಟಾಗುವ ಮೂಲಕ ಡಾ. ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಬೇಕು. ಬಾಬಾ ಸಾಹೇಬರ ಆಶಯದಂತೆ ಬಹುಜನರು ದೇಶದ ಚುಕ್ಕಾಣಿ ಹಿಡಿಯಬೇಕು ಎಂದರು.
ಮನುವಾದಿ ಸರಕಾರಗಳನ್ನು ಕಿತ್ತೊಗೆಯುವ ಪಣತೊಟ್ಟರೆ ಮಾತ್ರ ಕೊರೆಂಗಾವ್ ವಿಜಯೋತ್ಸವಕ್ಕೆ ಅರ್ಥ ಹಾಗೂ ಗೌರವ ಸಲ್ಲಿಸಿದಂತೆ. ಹಿಂದೆ ಕತ್ತಿ-ಗುರಾಣಿಗಳ ಮೂಲಕ ಯುದ್ಧ ರಣರಂಗದಲ್ಲಿ ನಡೆಯುತ್ತಿತ್ತು. ಪ್ರಜಾಪ್ರಭುತ್ವದಲ್ಲಿ
ಸಂವಿಧಾನದ ಸವಲತ್ತು ಪಡೆದುಕೊಂಡು ಆರ್ಥಿಕವಾಗಿ ಮುಂದುವರೆದಿರುವ ವ್ಯಕ್ತಿಗಳು ತಮ್ಮ ಸಮುದಾಯಗಳು ನಿರ್ಲಕ್ಷ್ಯ ತೋರುತ್ತಿರುವುದು ನೋವಿನ ಸಂಗತಿ ಎಂದು ವಿಷಾಧಿಸಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಪ್ರಾಧ್ಯಾಪಕ ಡಾ. ರಾಜೇಂದ್ರ ಪ್ರಸಾದ್ ಮಾತನಾಡಿ, ವಿಶ್ವದಲಿಯೇ ಅತ್ಯುತ್ತಮ ಎನಿಸಿರುವ ಸಂವಿಧಾನದ ಬಗ್ಗೆ ಅಪಶೃತಿ ಎತ್ತುವ ಪಕ್ಷಗಳಿಗೆ ಬರುವ ಚುನಾವಣೆಗಳಲ್ಲಿ ಬಹುಜನರು ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಬಹುಜನರು ಜಾತಿ ಉಪ ಜಾತಿ, ಒಳಪಂಗಡಗಳನ್ನು ಮರೆತು ಆಳುವ ವರ್ಗವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತ ಡಾ. ವೆಂಕಟಯ್ಯ ಅಪ್ಪಗೆರೆ ಅವರು ವಿದ್ಯಾರ್ಥಿಗಳು, ಯುವ ಜನರು ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಮೂಢನಂಬಿಕೆ ಅಂಧಶ್ರದ್ಧೆಗಳ ವಿರುದ್ಧ ಹೋರಾಟ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿ. ನರಸಪ್ಪ, ವಿಎಸ್‌ಕೆಯುಬಿ ಪ್ರಾಧ್ಯಾಪಕ ಡಾ. ಕುಮಾರ್, ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿವಿಎಸ್ ಜಿಲ್ಲಾಧ್ಯಕ್ಷ ದೇವೇಂದ್ರ ನಾಗೇಹಳ್ಳಿ ಮಾತನಾಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ. ನಿಂಗಪ್ಪ, ವಿಎಸ್‌ಕೆಯುಬಿ ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ಬಸವರಾಜ್, ವಿಎಸ್‌ಕೆಯುಬಿ ಬಿವಿಎಸ್ ಘಟಕದ ಅಧ್ಯಕ್ಷ ಲಕ್ಷ್ಮಣ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕ್ಯಾಲೆಂಡರ್ ಬಿಡುಗಡೆ: ಇದೇ ಸಂದರ್ಭದಲ್ಲಿ ಬಿವಿಎಸ್ ವಾರ್ಷಿಕ ಕ್ಯಾಲೆಂಡರ್‌ನ್ನು ಗಣ್ಯರು ಬಿಡುಗಡೆ ಮಾಡಿದರು.
ಅಧ್ಯಾಪಕ ರಮೇಶ್ ಸುಗ್ನಳ್ಳಿ ಸ್ವಾಗತಿಸಿದರು. ಬಿವಿಎಸ್ ಸಂಯೋಜಕ ಡಿ. ಮಹಾಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಯಚೂರು ಬಿಎಎಂಸಿಇಎಫ್ ಸದಸ್ಯ ಚಿದಾನಂದ ನಿರೂಪಿಸಿದರು. ಬಿಎಎಂಸಿಇಎಫ್‌ನ ಹುಲಿಯಪ್ಪ ಬಸಾಪುರ ವಂದಿಸಿದರು.
ಯುವ ಜಾನಪದ ಗಾಯಕ ಎಸ್ ಎಂ ಹುಲುಗಪ್ಪ ಮತ್ತು ತಂಡ ಪರಿವರ್ತನೆ, ಕ್ರಾಂತಿ ಗೀತೆಗಳನ್ನು ಹಾಡಿ ಸಭಿಕರ ಗಮನ ಸೆಳೆದರು

Please follow and like us:
error
error: Content is protected !!