ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದು : ಅಣ್ಣಾ ಹಜಾರೆ

ಕೊಪ್ಪಳ,ಜ.೦೪: ದೇಶದ ಯುವಕರೇ ನಿಮ್ಮ ವೋಟನ್ನು ನೋಟಿಗೆ ಮಾರಿಕೊಳ್ಳಬೇಡಿ ನಿಷ್ಠಾವಂತರಿಗೆ ಮಾರಿಕೊಳ್ಳಿ. ದೇಶದ ಅಭಿವೃದ್ದಿಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಸಾಮಾಜಿಕ ಹೋರಾಟಗಾರ, ಪದ್ಮಭೂಷಣ ಅಣ್ಣಾ ಹಜಾರೆ ಹೇಳಿದರು.

ಅವರು ನಗರದ ಸಾಹಿತ್ಯ ಭವನದಲ್ಲಿ ಇಂದು ಬೆಳಿಗ್ಗೆ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತ ದೇಶದ ಬೆನ್ನೆಲುಬು ರೈತ. ಈ ದೇಶದಲದಲ್ಲಿ ರೈತನ ಸ್ಥಿತಿ ತುಂಬಾ ಗಂಭೀರವಾಗಿದೆ. ಆದ್ದರಿಂದ ರೈತ ಬೆಳೆದ ಬೆಳೆಗೆ ೫೦ ರಷ್ಟು ಹೆಚ್ಚಿನ ಹಣ ಸಂದಾಯವಾಗಬೇಕು. ಅಂದಾಗಲೇ ರೈತರ ಬದುಕು ಉನ್ನತಗೊಳ್ಳಲಿಕ್ಕೆ ಸಾಧ್ಯ. ಅಂದಾಗ ಮಾತ್ರ ರೈತ ಸಾಲಬಾದೆ, ಆತ್ಮಹತ್ಯೆ ನಿಲ್ಲುತ್ತದೆ. ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಅಣ್ಣಾ ಹಜಾರೆಯ ಬೆಂಬಲಿಗರು ಆಗುದಕ್ಕಿಂತ ಸ್ವತ: ನೀವೇ ಅಣ್ಣಾ ಹಜಾರೆ ಆಗಿ ಎಂದು ಕರೆನೀಡಿದರು. ಈ ದೇಶ ಕಂಡ ಮಹಾನ್ ನಾಯಕರಲ್ಲಿ ನೀವು ಸೇರಿಕೊಳ್ಳುತ್ತೀರಿ. ನನ್ನ ಜೀವನದ ಸ್ಪೂರ್ತಿ ಸ್ವಾಮಿ ವಿವೇಕಾನಂದ ಹಾಗೂ ಮಹಾತ್ಮ ಗಾಂಧೀಜಿ ಇವರ ದಾರಿಯಲ್ಲಿಯೇ ನಾನು ನಡೆಯುತ್ತ ಬಂದಿದ್ದೇನೆ. ನಾನು ಸಂಸಾರಿಯಾಗಿ ಮನೆಗೆ ಸ್ವಂತ ಮಗನಾಗಿ ಇರಲು ಇಷ್ಟಪಡುವುದಿಲ್ಲ. ಅದು ನಾಲ್ಕು ಮೂಲೆ ಮಧ್ಯೆ ತುಂಬಿರುತ್ತದೆ. ಆದರೆ ನನ್ನ ಗುರಿ ಸಂಸಾರಿ ಜೀವನವಲ್ಲ. ಸಾಧನೆಯ ಜೀವನ. ಹೀಗಾಗಿ ನಾನು ನನ್ನ ಊರು ಸಮಾಜ, ದೇಶಕ್ಕಾಗಿ ಬದುಕಲು ಇಷ್ಟಪಡುತ್ತೇನೆ. ಆದ್ದರಿಂದ ನೀವು ಸಮಾಜದಲ್ಲಿ ಏನಾದರೂ ಬದಲಾವಣೆ ತರಬೇಕೆಂಬ ಇಚ್ಚೆ ನಿಮಗಿದ್ದರೆ ಚುನಾವಣೆಯಲ್ಲಿ ಒಳ್ಳೆಯ ಪ್ರತಿನಿಧಿಗಳನ್ನು ಆಯ್ಕೆಮಾಡಿ ಅದರಿಂದ ಜಗತ್ತು ಕಂಡಂತಹ ಎಲ್ಲ ದೇಶಗಳಲ್ಲಿ ಭಾರತ ದೇಶವೇ ಮೊದಲನೇ ಸ್ಥಾನದಲ್ಲಿರುತ್ತದೆ ಆಗಿರುತ್ತದೆ ಎಂದು ತಿಳಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ, ರೈತರ ಮೇಲೆ ಆಗುತ್ತಿರುವ ಅನ್ಯಾಯಗಳು, ಮೋದಿ ಸರ್ಕಾರದ ವಿಫಲಗಳು ಮೊದಲಾದವುಗಳ ಕುರಿತು ಮಕ್ಕಳು, ಹಿರಿಯರು, ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅಣ್ಣಾ ಹಜಾರೆಯವರು ಉತ್ತರಿಸಿದರು. ಇಡೀ ಸಾಹಿತ್ಯ ಭವನದ ತುಂಬೆಲ್ಲ ಜನಸ್ತೋಮ ಕಿಕ್ಕಿರಿದು ತುಂಬಿಕೊಂಡಿತ್ತು. ಪ್ರಸ್ತಾವಿಕ ಸೋಮರೆಡ್ಡಿ ಅಳವಂಡಿ,ವಂದನಾರ್ಪಣೆ ಡಾ ಶ್ರೀನಿವಾಸ ಹ್ಯಾಟಿ.ನಿರೂಪಣೆ ರಾಜಶೇಕರ ಪಾಟೀಲ ನೆರವೇರಿಸಿದ್ದರು.

Please follow and like us:
error