ದೇಶಕ್ಕೆ ನಮೋ.. ಕೊಪ್ಪಳಕ್ಕೆ ಸಂಗಣ್ಣ ಕರಡಿ : ಹನುಮೇಶ್ಯಾದವ್

ಕೊಪ್ಪಳ : ಲೋಕ ಸಮರಕ್ಕೆ ಅಖಾಡಸಿದ್ಧವಾಗಿರುವುಂತೆ ಜಿಲ್ಲೆಯಲ್ಲಿ ಭಾರತೀಯ ಜನತಾಪಾರ್ಟಿ ನಡೆಸಿರುವ ದೇಶಕ್ಕೆ ಮೊತ್ತೊಮ್ಮೆ ನಮೋ..ಕೊಪ್ಪಳಕ್ಕೆ ಸಂಗಣ್ಣ ಕರಡಿ ಅಭಿಯಾನವು ಬಿಜೆಪಿಯಶಕ್ತಿ ಕೇಂದ್ರಗಳಲ್ಲಿ ಪ್ರಬುದ್ಧರ ಮತ್ತು ಪ್ರಮುಖರ ಸಭೆ,ಸಂವಾದಗಳು ಬಲು ಜೋರಾಗಿಯೇ ನಡೆದಿವೆ.

ಭಾನುವಾರದಂದು ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಶಕ್ತಿ ಕೇಂದ್ರದಲ್ಲಿ ಆನೆಗೊಂದಿ, ಮಲ್ಲಾಪೂರ, ಸಣಾಪುರ ನಡೆದ ಪ್ರಮುಖರ,ಪ್ರಬುದ್ಧರ ಸಭೆಯಲ್ಲಿ ಮಾತನಾಡಿದ ನ್ಯಾಯವಾದಿ ಹನುಮೇಶ್ ಯಾದವ್ ಮಾತನಾಡಿ ಕೇಂದ್ರದಎನ್.ಡಿ.ಎ. ಅದರಲ್ಲಿಯೂ ಪ್ರಧಾನಿ ನರೇಂದ್ರಮೋದಿಯವರ ಸಾಧನೆ, ಹಾಗೂ ಕ್ಷೇತ್ರದ ಸಂಸದಸಂಗಣ್ಣ ಕರಡಿ ಅವರ ಅಭಿವೃದ್ಧಿ ಕಾರ್ಯಗಳನ್ನುಜನರಿಗೆ ತಲುಪಿಸಬೇಕಾಗಿದೆ, ದೇಶದ ರಕ್ಷಣೆಗಾಗಿಮೋದಿ, ಕ್ಷೇತ್ರದ ಅಭಿವೃದ್ಧಿಗಾಗಿ ಸಂಗಣ್ಣ ಕರಡಿಅವರನ್ನು ಆಯ್ಕೆ ಮಾಡುವುಂತೆ ಕರೆನೀಡಿದರು.

ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ದೇಶದಪ್ರಧಾನಿ ಆಗಲೆಂದು ಆಶಿಸಿ ಕ್ಷೇತ್ರದ ಜನತೆ ಸಂಗಣ್ಣಕರಡಿ ಅವರನ್ನು ಸಂಸದರನ್ನಾಗಿ ಆಯ್ಕೆಮಾಡಲಾಗಿತ್ತು, ದೇಶದ ರಕ್ಷಣೆ, ಹಾಗೂ ಅಭಿವೃದ್ಧಿಗಾಗಿಮೊತ್ತೊಮ್ಮೆ ದೇಶಕ್ಕೆ ನಮೋ.. ಕೊಪ್ಪಳಕ್ಕೆ ಸಂಗಣ್ಣಕರಡಿ ಎಂಬ ಘೋಷವಾಕ್ಯದಡಿ ಚುನಾವಣೆಯಲ್ಲಿಗೆಲುವಿಗಾಗಿ ಶಕ್ತಿಕೇಂದ್ರಗಳಲ್ಲಿ ಕಾಂiiಕರ್ತರಪಡೆಯನ್ನು ಸಿದ್ಧಗೊಳಿಸಲಾಗುತ್ತದೆ ಎಂದರು.

ಮೋದಿ ಆಡಳಿತದಿಂದ ದೇಶ ಬಲಿಷ್ಠವಾಗಿದೆ -ಅಮರೇಶ ಕರಡಿ : ಕಳೆದ ಐದು ವರ್ಷದಲ್ಲಿ ದೇಶದಲ್ಲಿಅಭಿವೃದ್ಧಿ ಪರ್ವ ನಡೆದಿದ್ದು, ಪ್ರಮುಖ ರಂಗಗಳಲ್ಲಿನಸಾಧನೆಯಿಂದ ಭಾರತ ಜಗತ್ತಿನ ಬಲಿಷ್ಠ ರಾಷ್ಟ್ರವಾಗಿಬೆಳೆದು ನಿಂತಿದೆ ಎಂದು ಮುಖಂಡ ಅಮರೇಶ ಕರಡಿಹೇಳಿದರು. ಆನೆಗೊಂದಿ ಶಕ್ತಿ ಕೇಂದ್ರಕ್ಕೆ ಭೇಟ್ಟಿ ನೀಡಿಅಲ್ಲಿನ ಪ್ರಮುಖರೊಂದಿಗೆ ಸಂವಾದ ನಡೆಸಿದ ಅವರುಪ್ರಧಾನಿ ಮೋದಿಯವರ ದಿಟ್ಟ ನಿಲುವು ಹಾಗೂಅವರ ದೂರದೃಷ್ಠಿಯಿಂದಾಗಿ ಭಾರತ ಜಗತ್ತಿನಲ್ಲಿಮುಂದುವರೆದ ಹಾಗೂ ಅಭಿವೃದ್ಧಿ ಹೊಂದುತ್ತಿರುವರಾಷ್ಟ್ರವಾಗಿ ರೂಪಗೊಂಡಿದೆ ಎಂದರು.

ಈಗಾಗಲೇ ಕ್ಷೇತ್ರದಲ್ಲಿನ ಎಲ್ಲಾ ಶಕ್ತಿ ಕೇಂದ್ರಗಳಲ್ಲಿಪ್ರಬುದ್ಧರ, ಪ್ರಮುಖರ ಸಭೆ, ಸಂವಾದಗಳು ನಡೆದಿದ್ದು,ಜನರಿಗೆ ಬಿಜೆಪಿಯ ಸಾಧನೆಗಳ ಜೊತೆ ದೇಶವನ್ನುಮತ್ತೇ ಮುನ್ನೆಡಸಲು ಮೋದಿ ಮೊತ್ತೊಮ್ಮೆ ನಮೋಗಾಗಿ ಇಲ್ಲಿ ಬಿಜೆಪಿ ಗೆಲ್ಲಲೆಬೇಕು ಅದಕ್ಕೆ ಪಕ್ಷದಕಾರ್ಯಕರ್ತರ ಪಡೆ ಸಿದ್ಧಗೊಂಡಿದೆ ಎಂದು ಹೇಳಿದಅಮರೇಶ ಕರಡಿಯವರು ಶಕ್ತಿ ಕೇಂದ್ರಗಳ ಮೂಲಕಜನರ ಮನೆಬಾಗಿಲಿಗೆ ತಲುಪಿಸಲಾಗುತ್ತದೆ ಎಂದರು.

ಆನೆಗೊಂದಿ, ಸಾಣಪೂರ, ಹಾಗೂ ಮಲ್ಲಾಪುರಶಕ್ತಿಕೇಂದ್ರಗಳಿಗೆ ಭೆಟಿ ನೀಡಲಾಯಿತು. ಈಸಂದರ್ಭದಲ್ಲಿ ಪ್ರಮುಖರಾದ ಕಳಕಪ್ಪ ಜಾಧವ್, ಶ್ರೀಶರಾವ್, ರಾಜಶ್ವರಿ, ಇತರರು ಪಾಲ್ಗೊಂಡಿದ್ದರು.

Please follow and like us:
error