ದೇಶಕ್ಕೆ ಅನಂತ ಸೇವೆ ಶ್ಲಾಘನೀಯ : ಗೊಂಡಬಾಳ


ಕೊಪ್ಪಳ, ನ. ೧೨: ಕರ್ನಾಟಕ ರಾಜ್ಯ ಸೇರಿದಂತೆ ದೇಶಕ್ಕೆ ಸಚಿವ ಅನಂತಕುಮಾರ್ ಸೇವೆ ಶ್ಲಾಘೀಯ, ಅವರು ಹತ್ತು ಖಾತೆಗಳನ್ನು ನಿರ್ವಹಿಸಿ ೬ ಬಾರಿ ಸಂಸದರಾಗಿ ಬೆಂಗಳೂರು ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ, ಅವರಿಲ್ಲದ ಕರ್ನಾಟಕದ ರಾಷ್ಟ್ರ ರಾಜಕಾರಣ ಸಪ್ಪೆ ಅನಿಸುತ್ತದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಹೇಳಿದರು.
ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ ಹಮ್ಮಿಕೊಂಡಿದ್ದ ಸಂತಾಪ ಸೂಚಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಸ್ತುತ ರಾಜಕಾಋಣದಲ್ಲಿ ಕೇವಲ ಜಾತಿ ಮತ್ತು ಹಣಬಲವೇ ಪ್ರಧಾನವಾಗಿದೆ ಅಂತಹದರಲ್ಲಿ ಅವರು ಬೆಳೆದಿದ್ದು ಒಂದು ರಾಜಕೀಯದ ಮೈಲಿಗಲ್ಲು. ಅವರ ಜೀವನ ಮತ್ತು ಶ್ರದ್ಧೆಯನ್ನು ನಾವೂ ಸಹ ಅನುಸರಿಸಬೇಕು. ಕೇವಲ ದೊಡ್ಡ ಧ್ವನಿಯಲ್ಲಿ ಮಾತನಾಡಿದರೆ ಸಾಲದು, ತಾಳ್ಮೆ ಇದ್ದಾಗಲೇ ರಾಜಕಾರಣ ಸಾಧ್ಯ ಎಂದು ತೋರಿಸಿಕೊಟ್ಟ ಸಾಧಕ ಇನ್ನಿಲ್ಲ ಎಂಬುದು ನಿಜವಾಗಲೂ ಬೇಸರ ಎಂದು ವಿಷಾಧಿಸಿದರು.
ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ವೆಂಕಟೇಶ್ ಎಂ.ಆರ್. ಸಂತಾಪ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಕೊಪ್ಪಳ ಬ್ಲಾಕ್ ಅಧ್ಯಕ್ಷ ಚಾಂದಪಾಶಾ ಕಿಲ್ಲೇದಾರ, ತಾಲ್ಲೂಕು ಕಾರ್ಯದರ್ಶಿ ಬಸವರಾಜ ದೇಸಾಯಿ, ಹನುಮಂತ ನಾಯಕ ಡಂಬ್ರಳ್ಳಿ, ವಿರುಪಣ್ಣ ಜಾಲಗಾರ, ಹನುಮಂತ ದೊಡ್ಡಮನಿ, ಮಾರುತಿ ಕಲ್ಲನವರ, ರಾಘವೇಂದ್ರ ಡಂಬ್ರಳ್ಳಿ, ಭರಮಪ್ಪ ಕಲ್ಲನವರ, ಚನ್ನಪ್ಪ ವಾಲ್ಮೀಕಿ, ಪಾಪಣ್ಣ ಶಹಪೂರ ಇತರರು ಇದ್ದರು.