ದೇವದಾಸಿ ನಿರ್ಮೂಲನೆ ಮತ್ತು ಸಮಗ್ರ ಕಾಯ್ದೆಯನ್ನು ಜಾರಿಮಾಡಿ : ಪ್ರೊ ವೈ.ಜೆ.ರಾಜೇಂದ್ರ

 

ಕೊಪ್ಪಳ : ರಾಜ್ಯದ ದೇವದಾಸಿ ಮಹಿಳೆಯರ ಮತ್ತು ಮಕ್ಕಳಿಗೆ ಸರಕಾರಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಹೊಸ ಕಾಯ್ದೆಯನ್ನು ನೀಡಬೇಂದು ಪ್ರೋ.ವೈ.ಜೆ ರಾಜೇಂದ್ರ ಅವರು ಅಂಬೇಡ್ಕರ್ ಹಾಗೂ ಸಾವಿತ್ರಿಬಾಯಿ ಪುಲೆ ಅವರ ಭಾವ ಚಿತ್ರಗಳಿಗೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ನಗರದ ಸಮೂಹ ಸಾಮಾರ್ಥ  ಸಂಪನ್ಮೂಲ ಕೇಂದ್ರದಲ್ಲಿ  ನಡೆದ ದೇವದಾಸಿ ಕುಟುಂಬಗಳ ಪ್ರಸ್ತುತ ಪರಸ್ಥಿತಿ ಮತ್ತು ವಿದ್ಯಾಮಾನಗಳ ಕುರಿತು ರಾಜ್ಯ ಮಟ್ಟದ ಸಮಾಲೋಚನೆ ಸಭೆಯಲ್ಲಿ ಕಾರ್ಯಕ್ರಮವದಲ್ಲಿ ಅವರು ಮಾತನಾಡಿದರು.

ದೇವದಾಸಿ ವಿಷಯಕ್ಕೆ ಸಂಭವಿಸಿದ ಕಾನೂನು ಜಾರಿಯಾಗಬೇಕು.ರಾಜ್ಯದ ಎಲ್ಲ ತಾಯಂದಿರು ಮಕ್ಕಳಿಗೆ ಸರಕಾರವನ್ನು ಪ್ರಶ್ನಿಸುವ ಮನೋಭಾವನೆಯನ್ನು ಬೇಳಸಿಕೊಳ್ಳಬೇಕು.ರಾಷ್ಟ್ರೀಯ ಕಾನೂನು ಶಾಲೆಯ ಕರುಡು ಸಮಿತಿ ಬಿಲ್ಲನ್ನು ಸರಕಾರದಲ್ಲಿ ಜಾರಿ ಮಾಡಲು ಮನವಿಯನ್ನು ನೀಡಲಾಗಿತ್ತು ಆದರೆ ಸರಕಾರವು ಇಲ್ಲಿಯ ವರೆಗೆ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.ಈ ಕಾನೂನು ಜಾರಿಗೆ ತಾಯಂದಿರಿಗೆ ಮತ್ತು ಮಕ್ಕಳಿಗೆ ತುಂಬ ಅನೂಕೂಲವಾಗುತ್ತದೆ. ಧರ್ಮದ ಹೆಸರಿನಲ್ಲಿ ದಾಸಿಯಾಗಿ ಮಾಡುತ್ತಿದ್ದಾರೆ.ಮಕ್ಕಳು ತಂದೆಯ ಹೆಸರನ್ನು ಹೇಳದೆ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಕಾಯ್ದೆಯಿಂದ ಮೂರು ತಲೆ ಮಾರಿನವರಗೆ ಸೌಲಭ್ಯ ದೊರಕುತ್ತದೆ ಎಂದು ಹೇಳಿದರು. ದೇವದಾಸಿ ಮಕ್ಕಳಿಗೆ ಸರಕಾರದಿಂದ ವಿಶೇಷ ಸೌಲಭ್ಯವನ್ನು ಮಂಡಿಸಬೇಕು. ತಾಯಂದಿರ ಸಮೀಕ್ಷೆ 2007 ರಲ್ಲಿ ಸರಕಾರ ಸಮೀಕ್ಷೆಯನ್ನು ಮಾಡಿದೆ. ಆದ್ರೆ ಆ ಸಮೀಕ್ಷೆಯಲ್ಲಿ ಇನ್ನೂ ಅನೇಕ ಜನ ತಾಯಂದಿರು ಸೌಲಭ್ಯ ವಂಚಿತರಾಗುತ್ತಿದ್ದಾರೆ. ತಾಯಂದಿರ ಮರಣದ ಅಂಕಿ ಅಂಶಗಳನ್ನು ಸರಕಾರ ನೋಡಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ದೇವದಾಸಿ ಪುನರ್ವಸಿತಿ ನಿಗಮವು ಇದರಿಂದ ಜಾರಿಗೊಳ್ಳುವ ಕೆಲಸವನ್ನು ಮಾಡುತ್ತಿದೆ ಎಂದು ದೂರಿದರು.

ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಮಾತನಾಡಿ
ದೇವದಾಸಿ ಪದ್ದತಿಯಿಂದ ದಲಿತ ಸಮುದಾಯಕ್ಕೆ ಈ ಸಮಾಜವು ತುಂಬಾ ಅನ್ಯಾಯವನ್ನು ಮಾಡಿದೆ. ತಾಯಂದಿರ ಮಕ್ಕಳಿಗೆ ಸಮಾಜದಲ್ಲಿ ಉನ್ನತವಾದ ಗೌರವ ಮತ್ತು ಸ್ಥಾನ ಮಾನ ನೀಡಬೇಕು. ಕುಷ್ಟಿಯ ವಿಮುಕ್ತ ದೇವದಾಸಿ ವೇದಿಕೆಯು ರಾಜ್ಯದಲ್ಲಿ ಉತ್ತಮ ಮಾದರಿಯ ಕೆಲಸವನ್ನು ಮಾಡುತ್ತಿದ್ದಾರೆ.ಅದರಂತೆ ಉತ್ತರ ಕರ್ನಾಟಕದ ಹದಿನಾಲ್ಕು ಜಿಲ್ಲೆಯ ತಾಯಂದಿರಿಗೆ ಸರಕಾರವು ವಿಶೇಷ ಕೋಟಾದಡಿಯಲ್ಲಿ ಸೌಲಭ್ಯಗಳನ್ನು ನೀಡಬೇಕು ಎಂದು ಹೇಳಿದರು.

ಮುಖ್ಯಮಂತ್ರಿ   ಬಿ.ಎಸ್ ಯಡಿಯೂರಪ್ಪ ಉನ್ನತವಾದ ಸಮುದಾಯಕ್ಕೆ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸುತ್ತಿದ್ದಾರೆ. ಆದರೆ ನೊಂದವರ ಪರವಾಗಿ ರೈತರ ಪರವಾಗಿ ಹಿಂದುಳಿದವರಿಗೆ ಮತ್ತು ದಲಿತ ಮತ್ತು ದೇವದಾಸಿ ಮಹಿಳಿಯರಿಗೆ ಅನ್ಯಾಯವನ್ನು ಮಾಡುತ್ತಿದೆ. 2019 ಉಪಚುನಾವಣೆಯಲ್ಲಿ ದೇವದಾಸಿ ಮಹಿಳೆಯರಿಗೆ ಮಾಶಾಸನವನ್ನು ಹೆಚ್ಚಿಸಲಾಗುತ್ತಿದೆ ಎಂದು ಭರವಸೆಯನ್ನು ನೀಡಿದ್ದರು. ತಾಯಂದಿರು ಅವರ ಮೇಲೆ ತುಂಭ ಭರವಸೆಯನ್ನು ಇಟ್ಟುಕೊಂಡಿದ್ದರು ಆದರೆ ಅದು ಪ್ರಸ್ತುತದಲ್ಲಿ ಹಸಿಯಾಗಿದೆ ಎಂದು ಬೇಸರವನ್ನು ವ್ಯಕ್ತ ಪಡಿಸಿರು.ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯಂದು ದೇವದಾಸಿ ತಾಯಂದಿರ ಜಾಥಾ ಕಾರ್ಯಕ್ರಮವನ್ನು ಕಲಾವಿದರ ತಂಡದಿಂದ ದೇವದಾಸಿಯರು ಚಾಲನೆಯನ್ನು ನೀಡಲಿದ್ದಾರೆ ಎಂದು ತಿಳಿಸಿದರು.

ಥಿಯಾಗಿ ವಿಜಯಪುರದ ಫಾದರ್ ತಿಯೋಲ್ ಅವರು ದೇವದಾಸಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ತಾಯಂದಿರು ಮತ್ತು ಸಮುದಾಯದ ಮುಖಂಡರು ಪ್ರೋತ್ಸಾಹವನ್ನು ಮಾಡಬೇಕು. ತಾಯಂದಿರ ಮಕ್ಕಳಿಗೆ ಪ್ರತಿ ವರ್ಷ ಐದು ಜನ ವಿದ್ಯಾರ್ಥಿಗಳಿಗೆ ಧನಸಾಹಯವನ್ನು ಮಾಡುವುದಾಗಿ ಮಕ್ಕಳಿಗೆ ಭರವಸೆಯನ್ನು ನೀಡಿದರು.

ನಿರುಪಣೆಯನ್ನು ಮಂಜುನಾಥ ವಿರುಪಾಪುರ ಮಾಡಿದರು.ಪ್ರಾಸ್ತಾವಿಕ ನುಡಿಯನ್ನು ವಿಮುಕ್ತ ದೇವದಾಸಿ ಮಹಿಳಾ ವೇದಿಕೆಯ ಚಂದಲಿಂಗ ಕಲಾಲಬಂಡಿ ಅವರು ಮಾತನಾಡಿದರು.ದಲಿತ ಸಾಹಿತಿ ದಾನಪ್ಪ ಮಸ್ಕಿ, ದಲಿತ ಮುಖಂಡ ಎಂ ಆರ್ ಬೇರಿ, ಹಿರಿಯ ಹೋರಾಟಗಾರ ಆನಂದ ಭಂಡಾರಿ, ಸಮೂಹ ಸಾಮಥ್ರ್ಯ ನಿರ್ದೇಶಕ ಬಿ.ಹಂಪಣ್ಣ, ಡಿ.ಲಕ್ಷ್ಮೀ ದೇವಿ ವಕೀಲೆ ,ಪಡಿಯಮ್ಮ ಕ್ಯಾದಗುಂಪಿ, ನಾಗರಾಜ ವಕೀಲ, ಹಾಗೂ ರಾಜ್ಯದ ತಾಯಂದಿರು ಮತ್ತು ಮಕ್ಕಳು ಉಪಸ್ಥಿಯನ್ನು ಇದ್ದರು.

Please follow and like us:
error