ದೆಹಲಿ ರೈತರ ಹೋರಾಟಕ್ಕೆ : ನಿಧಿ ಸಂಗ್ರಹ


 

KOppal ದೆಹಲಿಯಲ್ಲಿ ರೈತರ 43 ದಿನಗಳಿಂದ  ಹೋರಾಟಕ್ಕೆ ಎ ಐ ಡಿ ವೈ ಒ ಸಂಘಟನೆಯಿಂದ ಕೊಪ್ಪಳದ ಮಸೀದಿಗಳಲ್ಲಿ ನಿಧಿ ಸಂಗ್ರಹ ಮಾಡಲಾಯಿತು.

ನವೆಂಬರ್ 26 ರಿಂದ ಶುರುವಾದ ಪ್ರತಿಭಟನೆ ಹಲವಾರು ಹಲವಾರು ತಾಪತ್ರೆಯ ವಿಪರೀತ ಚಳಿಗೆ ಎದೆಯೊಡ್ಡಿ ಪೊಲೀಸರ ದೌರ್ಜನ್ಯ ಎದುರಿಸಿ ಧೀರೋದಾತ್ತ ಹೋರಾಟದಲ್ಲಿ ಮುನ್ನುಗ್ಗಿದ್ದಾರೆ. ಈ ಹೋರಾಟವನ್ನು ಇಡೀ ದೇಶದ ಜನ ಎಲ್ಲಾ ರೀತಿಯ ಸಹಕಾರ ಸಹಾಯದೊಂದಿಗೆ ಬೆಂಬಲಿಸಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರೈತರ ಈ ಹೋರಾಟವನ್ನು ಬೆಂಬಲಿಸಿ ಈಗಾಗಲೇ ಕೊಪ್ಪಳದ ಮೂವತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ಗ್ರಾಮ ಸಭೆ ಮಾಡಿ ಎಲ್ಲ ಕೊಪ್ಪಳದ ಮಸೀದಿಗಳಲ್ಲಿ ರೈತರ ಹೋರಾಟಕ್ಕೆ  ಹಣ ಸಂಗ್ರಹ ಮಾಡಲಾಯಿತು. ಈ ಸಂದರ್ಭದಲ್ಲಿ ಎಐಡಿವೈಒ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಗಡ್ಡಿ ಜಿಲ್ಲಾ ಸಂಘಟನಾಕಾರಶರಣು ಪಾಟೀಲ್, ಸಾಮಾಜಿಕ ಹೋರಾಟಗಾರರಾದ ಸಲೀಂ ಮಂಡಲಗೇರಿ, ಯುಸಫ್ ಮಳೆ ಕೊಪ್ಪ, ಮಹಮ್ಮದ್ ಇಕ್ಬಾಲ್, ಆಸಿಫ್ ಖಾನ್, ಫಯಾಜ್, ಇನ್ ಕ್ವಿಲಾಬಿ, ಮಂಜು, ಭೀಮಸೇನ, ಅಬ್ದುಲ್ ಸೆಕ್ ಮುಂತಾದವರು ಭಾಗವಹಿಸಿದ್ದರು.

Please follow and like us:
error