ದೆಹಲಿಯಲ್ಲಿನ ರೈತರ 58 ದಿನಗಳಿಂದ ಹೋರಾಟವನ್ನು ಬೆಂಬಲಿಸಿ ನಿಧಿ ಸಂಗ್ರಹ

Gangavati : ದೆಹಲಿಯಲ್ಲಿನ ರೈತರ 58 ದಿನಗಳಿಂದ ಹೋರಾಟವನ್ನು ಬೆಂಬಲಿಸಿ ಎಐಡಿವೈಒ ಸಂಘಟನೆಯಿಂದ ಗಂಗಾವತಿ ಜಾಮಿಯಾ ಮಸೀದಿಯಲ್ಲಿ ನಿಧಿ ಸಂಗ್ರಹ ಮಾಡಲಾಯಿತು.
ನವೆಂಬರ್ 26 ರಿಂದ ಶುರುವಾದ ಪ್ರತಿಭಟನೆ ಹಲವಾರು ಹಲವಾರು ಅಡೆತಡೆಗಳನ್ನು ಎದುರಿಸಿ ವಿಪರೀತ ಚಳಿಗೆ ಎದೆಯೊಡ್ಡಿ ಪೊಲೀಸರ ದೌರ್ಜನ್ಯ ಎದೆಗುಂದದೆ ಧೀರೋದಾತ್ತ ಹೋರಾಟದಲ್ಲಿ ಮುನ್ನುಗ್ಗಿದ್ದಾರೆ. ಈ ಹೋರಾಟವನ್ನು ಇಡೀ ದೇಶದ ಜನ ಎಲ್ಲಾ ರೀತಿಯ ಸಹಕಾರ ಸಹಾಯದೊಂದಿಗೆ ಬೆಂಬಲಿಸಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರೈತರ ಈ ಹೋರಾಟವನ್ನು ಬೆಂಬಲಿಸಿ ಈಗಾಗಲೇ ಕೊಪ್ಪಳದ ಐವತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ಗ್ರಾಮ ಸಭೆ ಮಾಡಿದೆ. ಈ ರೈತರ ಯಶಸ್ವಿಯಾಗಲು ಎಐಡಿವೈಒ ಸಂಘಟನೆ ಸಂಪೂರ್ಣ ಬೆಂಬಲಿಸಿ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಈ ಹೋರಾಟವನ್ನು ರೈತಾಪಿ ಜನ ಬೆಂಬಲಿಸುತ್ತಿದ್ದಾರೆ. ಈಗಾಗಲೇ ಎಐಡಿವೈಒ ಅಖಿಲ ಭಾರತ ಅಧ್ಯಕ್ಷರ ನೇತೃತ್ವದಲ್ಲಿ ಸಿಂಘು ಗಡಿಯಲ್ಲಿ ಬೃಹತ್ ರ್ಯಾಲಿ ಮಾಡಲಾಯಿತು. ಸಂಘದ ಕಾರ್ಯಕರ್ತರು ವಾರಗಟ್ಟಲೆ ಅಲ್ಲಿಯೇ ಇದ್ದು ಎಲ್ಲರೀತಿಯ ಸಹಾಯ ಮಾಡಿ ವಾಪಸಾಗಿದ್ದಾರೆ.ಇದೆ ತಿಂಗಳು 26 ತಾರೀಕಿಗೆ ದೆಹಲಿ ಟ್ರ್ಯಾಕ್ಟರ್ ರ್ಯಾಲಿ ಬೆಂಬಲಿಸಿ ಬೆಂಗಳೂರಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಂಡಿದ್ದು ಈ ರೈತರ ಹೋರಾಟಕ್ಕೆ ಗಂಗಾವತಿಯ ಜಮೀಯಾ ಮಸೀದಿಯಲ್ಲಿ ನಿಧಿ ಸಂಗ್ರಹ ಮಾಡಲಾಯಿತು. ಈ ಸಂದರ್ಭದಲ್ಲಿ ಎಐಡಿವೈಒ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಗಡ್ಡಿ ಜಿಲ್ಲಾ ಸಂಘಟನಾಕಾರಶರಣು ಪಾಟೀಲ್, ಸಾಮಾಜಿಕ ಹೋರಾಟಗಾರರಾದ ಫಯಾಜ್ ಇಂಕ್ವಿಲಾಬಿ, ಹಾಗೂ ಜಾಮಿಯಾ ಮಜೀದ್ ನ ಧರ್ಮ ಗುರುಗಳಾದ ಮುಸ್ತಫಾ ಕಮಲ್ ಪಾಶ, ತುರಾಬ್ ಪಟೇಲ್, ಉಸೇನ್ ಪೀರ್, ಮಜೀದ್ ಕಾರ್ಯದರ್ಶಿ ಡಾ. ಅಲೀಖಾನ ಮುಂತಾದವರು ಭಾಗವಹಿಸಿದ್ದರು.

Please follow and like us:
error