ದಿಶಾ ಸಮಿತಿಗೆ ನಾಮನಿದೇರ್ಶನ ಸದಸ್ಯರ ಆಯ್ಕೆ

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ | ಜಿಲ್ಲೆಯ ೮ ಸದಸ್ಯರು ಆಯ್ಕೆ
ಕೊಪ್ಪಳ:  ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ)ಗೆ ಜಿಲ್ಲೆಯ ಒಟ್ಟು ೮ ಜನ ಪ್ರಮುಖರನ್ನು ನಾಮನಿರ್ದೇಶನ ಮಾಡಿ ಆಯ್ಕೆ ಮಾಡಲಾಗಿದೆ ಎಂದು ಸಂಸದರಾದ ಸಂಗಣ್ಣ ಕರಡಿ ಅವರ ಕಚೇರಿ ಪ್ರಕಟಣೆ ತಿಳಿಸಿದೆ. ಈ ಸಮಿತಿ ಸಂಸದರ ಅಧ್ಯಕ್ಷತೆಯನ್ನು ಹೊಂದಿರುತ್ತದೆ. ಕಳೆದ ಲೋಕಸಭಾ ಚುನಾವಣೆ ನಂತರ ಇದೀಗ ಹೊಸದಾಗಿ ಸಮಿತಿಗೆ ನೂತನ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ.
ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಪರವಾಗಿ ಬಿಜೆಪಿ ಯುವ ಮುಖಂಡ, ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರೂ ಆದ ನವೀನ್‌ಕುಮಾರ್ ಗುಳಗಣ್ಣವರ ಅವರನ್ನು ಆಯ್ಕೆ ಮಾಡಲಾಗಿದೆ. ೨೦೧೮ರ ಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಇವರ ತಂದೆ ಈಶಣ್ಣ ಗುಳಗಣ್ಣವರ ಮಾಜಿ ಶಾಸಕರು, ತಾಯಿ ಗಂಗಮ್ಮ ಗುಳಗಣ್ಣವರ ಹಾಲಿ ಜಿಪಂ ಸದಸ್ಯರಾಗಿದ್ದಾರೆ. ಪಕ್ಷನಿಷ್ಠೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಪರ ಹಗಲಿರುಳು ಶ್ರಮಿಸಿ ಗೆಲ್ಲಿಸಿದ ಹಿನ್ನೆಲೆಯಲ್ಲಿ ಇವರನ್ನು ಆಯ್ಕೆ ಮಾಡಲಾಗಿದೆ. ಇನ್ನುಳಿದಂತೆ ಹಿರಿಯ ನಾಗರೀಕರ ಪ್ರತಿನಿಧಿಯಾಗಿ ಸತ್ಯನಾರಾಯಣ ದೇಶಪಾಂಡೆ ಅವರು ಎರಡನೇ ಅವಧಿಗೆ ಆಯ್ಕೆಯಾಗಿದ್ದು, ಅವರ ಕಾರ್ಯದಕ್ಣತೆ, ಅತ್ಯುತ್ತಮ ಕಾರ್ಯವನ್ನು ಪರಿಗಣಿಸಿ ಎರಡನೆ ಬಾರಿಗೂ ಮುಂದುವರಿಸಲಾಗಿದೆ. ಮಹಿಳಾ ಪ್ರತಿನಿಧಿಯಾಗಿ ಶಕುಂತಲಾ ಮಾಲಿಪಾಟೀಲ್, ಎಸ್ಟಿ ಮಹಿಳಾ ಕೋಟಾದಡಿ ಹೇಮಲತಾ ನಾಯಕ್, ಎಸ್ಸಿ ಕೋಟಾದಡಿ ಗಣೇಶ್ ಹೊರತಟ್ನಾಳ, ಸಮಾಜಿಕ ಕಾರ್ಯಕರ್ತರಡಿ ವಿಜಯಕುಮಾರ್ ಹಿರೇಮಠ, ರಾಘವೇಂದ್ರ ನಾಯಕ್ ಹಾಗೂ ಹನುಮೇಶ್ ಯಲಬುರ್ಗಿ ಅವರನ್ನು ನಾಮನಿರ್ದೇಶನ ಮಾಡಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರು ಆದೇಶ ಹೊರಡಿಸಿದ್ದಾರೆ ಎಂದು ಕಚೇರಿ ಪ್ರಕಟಣೆ ತಿಳಿಸಿದೆ.
Please follow and like us:
error