fbpx

ದಲಿತ ಯುವಕನ ಮೇಲೆ ಹಲ್ಲೆ ಆರೋಪಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರೂಗಿಸಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಸೇವಾ ಸಂಘ ಮನವಿ

 

ಗಂಗಾವತಿ : ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ  ಮಿಣಜಣಿ ಗ್ರಾಮದಲ್ಲಿ ದಲಿತ ಸಮಾಜದ ಯುವಕನ ವಾಹನ ಮುಟ್ಟಿ ಮೈಲಿಗೆ  ಮಾಡಿದ್ಧಾನೆ ಎಂದು   ಕೆಲವರು  ಯುವಕರು ಮಾರಣಾಂತಿಕ ಹಲ್ಲೆ  ಮಾಡಿದ್ದನ್ನು ಖಂಡಿಸಿ ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ಇಂದು    ಇಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಸೇವಾ ಸಂಘದಿಂದ ಗಂಗಾವತಿ ಉಪತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದ‍ರ್ಭದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಸೇವಾ ಸಂಘದ ರಾಜ್ಯ ನಿರ್ದೇಶಕರಾದ    ಜಬ್ಬರ್ ಖಾನ್ , ಕೊಪ್ಪಳ ಜಿಲ್ಲೆಯ ಅಧ್ಯಕ್ಷರಾದ   ಹಮೀದ್ ಮುಲ್ಲಾ ಪ್ರಧಾನ ಕಾರ್ಯದರ್ಶಿ  ಮೊಹಮ್ಮದ್  ಪೀರು ಉಪಾಧ್ಯಕ್ಷರಾದ  ಹುಸೇನ್ ಸಾಬ್ ಸಿ  ಸೆಕ್ಯೂರಿಟಿ ಯಾದ  ಹೊಸದುರ್ಗ ಉಪಸ್ತಿತರಿದ್ದರು .

Please follow and like us:
error
error: Content is protected !!