ದಲಿತರನ್ನು ರಕ್ಷಿಸುವಲ್ಲಿ ವಿಫಲರಾದ ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ ರಾಜೀನಾಮೆ ನೀಡಲಿ- ಮಾಲತಿ ನಾಯಕ್

Kannadanet ಅಮಾನುಷವಾಗಿ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದರೂ ಆರೋಪಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳದ ಮತ್ತು ಇಂತಹ ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆಧಿತ್ಯನಾಥ ರಾಜೀನಾಮೆ ನೀಡಬೇಕು ಎಂದು ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷೆ ಮಾಲತಿನಾಯಕ್ ಆಗ್ರಹಿಸಿದರು.

ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ನಗರದ ಅಶೋಕ ವೃತ್ತದಲ್ಲಿ ಉತ್ತರಪ್ರದೇಶದ ಮನೀಷಾ ವಾಲ್ಮೀಕಿ ಅತ್ಯಾಚಾರ ಕೊಲೆ ವಿರುದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಪಟ್ಟಂತಹ ಸಾಕ್ಷಿ ನಾಶ‌ ಮಾಡಿದ ಅಲ್ಲಿನ ಸರಕಾರವನ್ನು ವಜಾಗೊಳಿಸಲು ಒತ್ತಾಯಿಸಿದರು. ಮನಿಷಾ ವಾಲ್ಮಿಕಿಯ ಮನೆಯವರಿಗೆ ಕೊನೆಯ ಕ್ಷಣದಲ್ಲಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದೇ ಏಕಾಏಕಿ ಸುಟ್ಟು ಹಾಕಿರುವುದು ಈ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ. ಕಳೆದ 6 ವರ್ಷಗಳಿಂದ ದಲಿತರ ಮೇಲೆ ನಿರಂತವಾಗಿ ಈ ರೀತಿಯ ಘಟನೆ ನಡೆಯುತ್ತಿದ್ದರೂ ಅವನ್ನು ತಡೆಗಟ್ಟುವಲ್ಲಿ ಕೇಂದ್ರ , ಮತ್ತು ರಾಜ್ಯ ಸರಕಾರ ವಿಫಲವಾಗಿದೆ. ಈ ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು.

ಕಾಂಗ್ರೆಸ್ ಮುಖಂಡರ ಯಮನೂರಪ್ಪ ನಾಯಕ ಮಾತನಾಡಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ಅಲ್ಪಸಂಖ್ಯಾತರನ್ನು ಗುರಿ ಮಾಡಿದೆ. ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇದರ ಬಗ್ಗೆ ಜನತೆ ಜಾಗರೂಕರಾಗೇಬೇಕು, ಯೋಗಿ ಅಧಿತ್ಯನಾಥ ಠಾಕೂರರ ರಕ್ತ ಬಿಸಿಯಾಗಿದೆ ಎಂದು ಹಗುರವಾಗಿ ಮಾತನಾಡುತ್ತಾರೆ. ಅಲ್ಪಸಂಖ್ಯಾತರ ಮತ್ತು ದಲಿತರ ರಕ್ತದ ಬಿಸಿಯನ್ನು ತೋರಿಸಬೇಕಾಗುತ್ತೆ ಎಂದು ಎಂದು ಎಚ್ಚರಿಸಿದರು. ರಾಜ್ಯ ಕಾಂಗ್ರೆಸ್ ಪ್ಯಾನಲಿಸ್ಟ್ ಶೈಲಜಾ ಹಿರೇಮಠ ಮಾನಾಡಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ ಭಾವಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕಾಟನ್‌ ಪಾಶಾ, ಪ್ರಸನ್ನ ಗಡಾದ, ರವಿ ಕುರಗೋಡ, ಮಾನವಿ ಪಾಶಾ, ಶ್ರೀನಿವಾಸ ಪಂಡಿತ್, ಮಲ್ಲು ಪೂಜಾರ್, ಸಲೀಂ ಅಳವಂಡಿ, ಪರಶುರಾಮ, ದ್ಯಾಮಣ್ಣ ಚಿಲವಾಡಗಿ, ಗಂಗಾ ಚಿಕ್ಕೆನಕೊಪ್ಪ , ಕೆಪಿಸಿಸಿ ಸಂಚಾಲಕಿ ಕಿಶೋರಿ ಬೂದನೂರ, ನಾಗವೇಣಿ ಬಡಿಗೇರ್ ಜಿಲ್ಲಾ ಮಹಿಳಾ ಸಹ ಕಾರ್ಯದರ್ಶಿ, ರೇಣುಕಾ ಅಹುಲ್ ಜಿಲ್ಲಾ ಮಹಿಳಾ ಕಾರ್ಯದರ್ಶಿ, ಶಶಿಕಲಾ B ಗೌಡರ್ ಜಿಲ್ಲಾ ಮಹಿಳಾ ಕಾರ್ಯದರ್ಶಿ, ರೇಷ್ಮಾ, ರಜಿಯಾ ಮನಿಯಾರ್, ಸಿದ್ದಮ್ಮ ಅಬ್ಬೆಗೇರಮಠ, ಮಹಾದೇವಿ ಕುರಿ, ಸಿದ್ದಮ್ಮ ಸಿಂದೋಗಿ, ನಜ್ಮುನ್ನಿಸಾ, ಅಮೀನಠ ಬೀ, ನೇತರಾವತಿ, ಸುನೀತಾ, ಅಕ್ಕಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error