ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ – ಕೃಷ್ಣ ಉಕ್ಕುಂದ

ಕೊಪ್ಪಳ,  : ಕೊಪ್ಪಳ ಜಿಲ್ಲೆಯ ಅರ್ಹ ರೈತ ಮಕ್ಕಳಿಂದ 2021-22 ನೇ ಸಾಲಿಗೆ 10 ತಿಂಗಳ ತೋಟಗಾರಿಕೆ ತರಬೇತಿಯನ್ನು ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿ ಅವಧಿಯು 2021 ರ ಮೇ 03 ರಿಂದ 2022 ರ ಫೆಬ್ರವರಿ 28 ರವರೆಗೆ ಇದ್ದು, 05 ಮಹಿಳಾ ಅಭ್ಯರ್ಥಿಗಳು ಹಾಗೂ 06 ಪುರುಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುವುದು. ಆಯ್ಕೆಯಾದ ಮಹಿಳಾ ಅಭ್ಯರ್ಥಿಗಳಿಗೆ ಕೊಪ್ಪಳ ಜಿಲ್ಲೆಯ ಮುನಿರಾಬಾದನ ಮಹಿಳಾ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಹಾಗೂ ಪುರುಷ ಅಭ್ಯರ್ಥಿಗಳಿಗೆ ಬಳ್ಳಾರಿ ಜಿಲ್ಲೆಯ ಮಾಲವಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು.
ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ ಹಾಗೂ ಇತರರಿಗೆ ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಕನ್ನಡ ವಿಷಯದೊಂದಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಕನ್ನಡ ಓದಲು, ಬರೆಯಲು ಹಾಗೂ ಮಾತನಾಡಲು ಬಲ್ಲವರಾಗಿರಬೇಕು.
ಈ ತರಬೇತಿಯು ರೈತರ ಮಕ್ಕಳಿಗಾಗಿ ಇರುವುದರಿಂದ ಅಭ್ಯರ್ಥಿಯ ತಂದೆ/ತಾಯಿ ಅಥವಾ ಪೋಷಕರು (ತಂದೆ/ತಾಯಿ ಇಲ್ಲದ ಪಕ್ಷದಲ್ಲಿ) ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಬಗ್ಗೆ ಪಹಣಿಯನ್ನು ನೀಡುವುದು ಕಡ್ಡಾಯವಾಗಿರುತ್ತದೆ. ಅಭ್ಯರ್ಥಿಗಳು ತೋಟದ ಕೆಲಸಗಳನ್ನು ಮಾಡುವಷ್ಟು ದೃಢಕಾಯರಾಗಿರಬೇಕು.
ಸಾಮಾನ್ಯ ಆಭ್ಯರ್ಥಿಗಳು ರೂ. 30 ಹಾಗೂ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳು ರೂ.15 ಅರ್ಜಿ ಶುಲ್ಕವನ್ನು ಪೋಸ್ಟಲ್ ಆರ್ಡರ್ ಅಥವಾ ಡಿಮ್ಯಾಂಡ್ ಡಾçಫ್ಟ್ (ಡಿಡಿ)ನ್ನು ತೋಟಗಾರಿಕೆ ಉಪನಿರ್ದೇಶಕರು(ಜಿ.ಪಂ), ಕೊಪ್ಪಳ ರವರ ಹೆಸರಿನಲ್ಲಿ ಪಡೆದು ಅರ್ಜಿ ಜೊತೆಗೆ ಲಗತ್ತಿಸಬೇಕು.
ಅರ್ಜಿಗಳನ್ನು ಮಾರ್ಚ್ 24 ರಿಂದ ಏಪ್ರಿಲ್ 17 ರವರೆಗೆ ಕೊಪ್ಪಳದ ಉಪನಿರ್ದೇಶಕರು(ಜಿ.ಪಂ) ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾ.ವ) ಕಚೇರಿಯಲ್ಲಿ ಪಡೆಯಬಹುದು ಅಥವಾ ಇಲಾಖಾ ವೆಬ್‌ಸೈಟ್  https://horticulturedir.karnataka.gov.in    ಮುಖಾಂತರ ಡೌನ್‌ಲೋಡ್ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿ ಹಾಗೂ ಶುಲ್ಕ ಪಾವತಿ ರಶೀತಿಯನ್ನು ಏ.17 ರ ಸಂಜೆ 05 ಗಂಟೆಯೊಳಗೆ ಮೇಲ್ಕಂಡ ಕಚೇರಿಗಳಿಗೆ ಸಲ್ಲಿಸಬೇಕು. ಏಪ್ರಿಲ್ 20 ರಂದು ಬೆಳಿಗ್ಗೆ 11 ಗಂಟೆಗೆ ತೋಟಗಾರಿಕೆ ಉಪನಿರ್ದೇಶಕರು(ಜಿ.ಪಂ) ಕಚೇರಿಯಲ್ಲಿ ನಡೆಯಲಿರುವ ಸಂದರ್ಶನಕ್ಕೆ ಅಭ್ಯರ್ಥಿಗಳು ಅಗತ್ಯ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಇದಕ್ಕಾಗಿ ಪçತ್ಯೇಕ ಸಂದರ್ಶನ ಪತçವನ್ನು ಕಳುಹಿಸಲಾಗುವುದಿಲ್ಲ ಎಂದು ತೋಟಗಾರಿಕೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ   ತಿಳಿಸಿದ್ದಾರೆ.

Please follow and like us:
error