ತುಂಗಭದ್ರಾ ಜಲಾಶಯದ ಕಾರ್ಯಪಾಲಕ ಅಭಿಯಂತರರನ್ನು ತಕ್ಷಣ ಅಮಾನತು ಮಾಡಿ- ತುಂಗಭದ್ರಾ ಉಳಿಸಿ ಆಂದೋಲನ

ಗಂಗಾವತಿ: ತುಂಗಭದ್ರಾ ಜಲಾಶಯದ (ಯೋಜನೆಯ) ಇತಿಹಾಸದಲ್ಲಿ ಎಂದೂ ಕೂಡ ಯಾವುದೇ ಕಾಲುವೆಯ ಮುಖ್ಯ ಗೇಟ್ ಕಿತ್ತು ಹೋದ ಇತಿಹಾಸವಿಲ್ಲ. ಈ ಜಲವರ್ಷದಲ್ಲಿ ಎಡದಂಡೆ ಮೇಲ್ಮಟ್ಟದ ಕಾಲುವೆಯ ಮೇನ್ ಗೇಟ್ ಕಿತ್ತು ಹೋಗಲು ಮೂಲ ಕಾರಣ ಅದರ ನಿರ್ವಹಣೆ ಸರಿಯಾಗಿರಲಿಲ್ಲ. ಅದಕ್ಕೆ ಪ್ರತಿ ವರ್ಷ ಬೇಸಿಗೆಯಲ್ಲಿ ಜಲಾಶಯದಲ್ಲಿ ನೀರಿಲ್ಲದಾಗ (ಏಪ್ರೀಲ್-ಮೇ ತಿಂಗಳುಗಳಲ್ಲಿ) ಗ್ರೀಸಿಂಗ್, ಪೇಂಟಿಂಗ್ ಹಾಗೂ ಇತ್ಯಾದಿ ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ ಐದಾರು ವರ್ಷಗಳಿಂದ ಈ ರೀತಿಯ ನಿರ್ವಹಣೆ ಮಾಡಲಾಗಿಲ್ಲ. ಆದರೆ ಪ್ರತಿ ವರ್ಷ ನಿರ್ವಯಹಣೆಯ ಬಿಲ್ ಎತ್ತಲಾಗಿದೆ. ಈ ಕಾಲುವೆಯ ನಿರ್ವಹಣೆಯ ಹೊಣಿ ತುಂಗಭದ್ರಾ ಜಲಾಶಯದ ನಂಬರ್-೧ ವಿಭಾಗದ ಕಾರ್ಯಪಾಲಕ ಅಭಿಯಂತರರ ದಾಗಿದೆ. ಕಳೆದ ಐದು ವರ್ಷಗಳಿಂದ ಈ ವಿಭಾಗಕ್ಕೆ ಕಾರ್ಯಪಾಲಕ ಅಭಿಯಂತರರಾಗಿ ಶ್ರೀ ನಾಗಭೂಷನರವರು ಇದ್ದಾರೆ. ಇವರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದಾಗಿ ಈ ಅನಾಹುತಕ್ಕೆ ಕಾರಣವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಎಡದಂಡೆ ಮೇಲ್ಮಟ್ಟದ ಕಾಲುವೆಯ ಹೆಚ್ಚುವರಿ ನೀರು ಹೋಗಲು ಕಾಲುವೆಯ ಒಂದನೆ ಕಿ.ಮೀ.ನಲ್ಲಿ ಎಸ್ಕೇಪ್ ಹಳ್ಳ ತೋಡಲಾಗಿದೆ. ಈ ಹಳ್ಳವು ಹರಿದು ಎಡದಂಡೆ ಮುಖ್ಯಕಾಲುವೆಯ(ರಾಯಚೂರಿಗೆ ಹರಿಯುವ ಕಾಲುವೆ) ಒಂದನೇ ಕಿ.ಮೀ. ಬಳಿ ಅಂಡರ್ ಪಾಸ್ (ಮುಖ್ಯ ಕಾಲುವೆ ಕೆಳಭಾಗದಿಂದ) ಹರಿದು ಹೂಳೆ ಮುದ್ಲಪುರ ಸೀಮಾದ ಮೂಲಕ ಜಲಾಶಯದ ಮುಂಭಾಗದ ತುಂಗಭದ್ರಾ ನದಿಯನ್ನು ಸೇರುತ್ತದೆ. ಈಗ ಈ ಕಾಲುವೆಯ ನಿರ್ವಹಣೆ ಇಲ್ಲದೇ ಮೇನ್ಗೇಟ್ ಕಿತ್ತು ಹೋಗಿರುವುದರಿಂದ ೩೬ ಕ್ಯೂಸೆಕ್ಸ್ ಗರಿಷ್ಠ ಹರಿಯಬೇಕಾದ ಕಾಲುವೆಯಲ್ಲಿ ಈಗ ೨೫೦ – ೩೦೦ ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಇದರಿಂದ
೧) ರಾಜ್ಯದ ಹೆಸರಾಂತ ಜಪಾನ್ ಮಾದರಿಯ ಪಂಪಾವನ ಶೇಕಡಾ ೮೦ ರಷ್ಟು ಮುಳುಗಡೆಯಾಗಿ ಅಲ್ಲಿಯ ನರ್ಸರಿಯ ಲಕ್ಷಾಂತರ ಸಸಿಗಳು , ಹುಲ್ಲು ಹಾಸುಗಳು, ಪಗೋಡಗಳು, ಔಷದೀಯ ಸಸ್ಯಗಳು ಇತ್ಯಾದಿಗಳು ಹಾಳಾಗಿ ಹೋಗಿವೆ. ಅಲ್ಲದೇ ಸಾವಿರಾರು ಪಕ್ಷಿಗಳಿಗೆ ನೆಲೆಯಾಗಿದ್ದ ಪಂಪಾವನ ಜಲಾವೃತ್ತದಿಂದ ನೆಲೆ ಕಳೆದುಕೊಂಡು ಪರಿತಪಿಸುತ್ತಿವೆ. ರಾಷ್ಟ್ರೀಯ ಪಕ್ಷಿ ಹಲವಾರು ನವಿಲುಗಳಿಗೂ ಇದು ವಾಸಸ್ಥಳವಾಗಿತ್ತು.
೨) ಮುನಿರಾಬಾದ್ ನ ಮೂರು ಮುಖ್ಯ ರಸ್ತೆಗಳ ಅಡಿಯಲ್ಲಿ ಹರಿಯುವ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ನೀರು ಹರಿಯಲು ಗರಿಷ್ಠ ೫೦ ಕ್ಯೂಸೆಕ್ಸ್ ನೀರು ಹರಿಯುವಷ್ಟು ಪೈಪ್ ಲೆಟ್ಗಳನ್ನು ಅಳವಡಿಸಲಾಗಿತ್ತು. ಈಗ ಕಾಲುವೆಯಲ್ಲಿ ೨೫೦ ಕ್ಕೂ ಅಧಿಕ ಪ್ರಮಾಣದ ನೀರು ಬಂದಿದ್ದರಿಂದ ರಸ್ತೆಯ ಕೆಳಭಾಗದ ಪೈಪ್ ಔಟ್ಲೆಟ್ ನಲ್ಲಿ ಅಷ್ಟೂ ಪ್ರಮಾಣದ ನೀರು ಹೊರಹೋಗದೇ ರಿಟನ್ ಹೊಡೆದು ಪಂಪಾವನ ಜಲಾವೃತ್ತವಾಯಿತು.
೩) ಗೇಟ್ ಕಿತ್ತ ಸುಮಾರು ೨೪ ಗಂಟೆಗಳನಂತರ ಮುನೀರಾಬಾದ್ನ ವಿಜಯನಗರ ಕಾಲೇಜ್ ಮತ್ತು ಮೇನ್ ಬಜಾರ್ ರಸ್ತೆಗಳ ಅಡಿಯ ಪೈಪ್ ಔಟ್ ಮೇಲಿನ ಮಣ್ಣು ಮತ್ತು ಕಟ್ಟಡವನ್ನು ಕೀಳಲಾಗಿ ಅಪಾರ ಪ್ರಮಾಣದ ನೀರು ಮುನಿರಾಬಾದಿನ ಅಂಬೇಡ್ಕರ ನಗರ , ಚೆಲ್ಲಯ್ಯಕ್ಯಾಂಪ್ ಗಳಲ್ಲಿ ನೀರು ನುಗ್ಗಿ ಸುಮಾರು ೨೦೦ ಕುಟುಂಭಗಳು ನಿರಾಶ್ರಿತರಾಗಿದ್ದಾರೆ. ಅವರಿಗೆ ಗ್ರಾ.ಪಂ. ವತಿಯಿಂದ ಊಟದ ವ್ಯವಸ್ಥೆ ಹೊರತುಪಡಿಸಿ ಅವರಿಗೆ ಯಾವುದೇ ಮೂಲಭೂತ ಸೌಕರ್ಯ ಒದಗಿಸಿಲ್ಲ. ಅವರಿಗೆ ಕುಡಿಯುವ ನೀರು ಸಮೇತ ಒದಗಿಸಿಲ್ಲ. ಎಲ್ಲರೂ ಪಂಚಾಯತಿ, ಪಿ.ಲಿಂಗಯ್ಯ ಶಾಲೆ, ಇಂದಿರಾಭವನ ಅತಿಥಿಭವನ ಗಳಲ್ಲಿ ವಸತಿ ಇದ್ದಾರೆ. ಇಲ್ಲಿಯ ಅರಣ್ಯ ಇಲಾಖೆ ಅತಿಥಿ ಗೃಹದಲ್ಲಿ ವಸತಿ ಇರಲು ಹೋದ ನಿರಾಶ್ರೀತರನ್ನು ಇಲ್ಲಿಯ ವಲಯ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಿದಾಕ್ಷಿಣ್ಯವಾಗಿ ಹೊರಹಾಕಿದ್ದಾರೆ.
೪)ಕಾಲುವೆ ಮತ್ತು ಊರಿನಲ್ಲಿ ಹರಿದ ನೀರು ಎಲ್ಲವೂ ಎಡದಂಡೆ ಮುಖ್ಯ ಕಾಲುವೆಯ ಅಂಡರ್ ಪಾಷ್ ನಲ್ಲಿ ಸೇರುವ ವ್ಯವಸ್ಥೆ ಇದ್ದುದ್ದರಿಂದ ಇಲ್ಲಿ ಅದರ ಸಾಮರ್ಥ್ಯಕ್ಕೂ ಅಧಿಕ ನೀರು ಹರಿದಿದ್ದರಿಂದ ಎಡದಂಡೆ ಮುಖ್ಯಕಾಲುವೆ ಭೊಂಗ ಬೀಳಲು ಕಾರಣವಾಯಿತು.
೫) ಎಡದಂಡೆ ಮುಖ್ಯಕಾಲುವೆಗೆ ಕಿ.ಮೀ. ೧ ಮತ್ತು ೨ ರಲ್ಲಿ ಎರಡು ಅಂಡರ್ ಪಾಸ್ಗಳು ಇರುವುದರಿಂದ ಇಂಜಿನೀಯರ್ ಗಳು ಇರಡಕ್ಕೂ ಎಡದಂಡೆ ಮೇಲ್ಮಟ್ಟದ ಕಾಲುವೆ ಎಸ್ಕೇಫ್ ಗಳ ಮೂಲಕ ಸಮಾನವಾಗಿ ಹರಿಸುವದರೊಂದಿಗೆ ಈ ಕಾಲುವೆಗೂ ಗರಿಷ್ಠ ನೀರನ್ನು ಯೋಜಿತವಾಗಿ ಹರಿಸಿದ್ದರೇ ಎಡದಂಡೆ ಮುಖ್ಯಕಾಲುವೆ ಒಡೆಯುವ ಸಂಭವನೀಯತೆ ಇರಲಿಲ್ಲ. ಅಧಿಕಾರಿಗಳ ನಿರ್ಲಕ್ಷ, ಅವೈ????ನತೆ, ಬೇಜವಾಬ್ದಾರಿತನವೇ ಇವೆಲ್ಲಾ ಅನಾಹುತಗಳಿಗೆ ಕಾರಣಗಳಾಗಿವೆ.
ಇದಕ್ಕೆ ಕಾರಣರಾದ ತುಂಗಭದ್ರಾ ಜಲಾಶಯದ ನಂ.೧ ವಿಭಾಗದ ಕಾರ್ಯಪಾಲಕ ಅಭಿಯಂತರ ಶ್ರೀ ನಾಗಭೂಷನ್ ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ ಅವರ ಮೇಲೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತುಂಗಭದ್ರಾ ಆಂದೋಲನ ಸಮಿತಿಯು ಒತ್ತಾಯಿಸುತ್ತದೆ.

ಉಪಾಧ್ಯಕ್ಷರು-ಡಿ.ಎಚ್.ಪೂಜಾರ್. ಕಾರ್ಯಕಾರಿ ಸದಸ್ಯರು-ಶಿವಪ್ರಸಾದ್ ಚಲಸಾನಿ, ವಿಶ್ವನಾಥ್ ರಾಜ್, ಆನಂದ್ ಭಂಡಾರಿ, ಚಂದ್ರಪ್ಪ, ವೀರಭದ್ರಯ್ಯ ಭೂಷನೂರ್ ಮಠ್, ಖಾಜಾವಲಿ , ಜನಾರ್ಧನ್, ಸುದರ್ಶನ್ ವರ್ಮಾ,ಎಚ್.ಎನ್.ಬಡಿಗೇರ್,

Please follow and like us:
error