ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತುವ ರೈತರ ಕ್ರಿಯಾ ಸಮಿತಿ

ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತುವ ಕ್ರಿಯಾ ಸಮಿತಿಯಿಂದ ತುಂಗಭದ್ರಾ ಜಲಾಶಯದಲ್ಲಿ  ಹೂಳೆತ್ತುವ ಸಲುವಾಗಿ ಶಿವಪೂರ ಗ್ರಾಮದಲ್ಲಿ ರೈತರ ಸಭೆ ಮಾಡಿ ಹೂಳೆತ್ತೆಲು ತಿರ್ಮಾನಿಸಲಾಗಿತ್ತು.

ಅದರಂತೆ ಜಿಲ್ಲಾಧಿಕಾರಿಗಳು ಕೊಪ್ಪಳ ಇವರ ಅಧ್ಯಕ್ಷತೆಯಲ್ಲಿ: ಜಿಲ್ಲಾಡಳಿತ ಭವನದಲ್ಲಿ ದಿ 29/05/2019
ರಂದು ತುಂಗಭದ್ರಾ ಬೋರ್ಡಿನ ಅಧಿಕಾರಿಗಳು, ನೀರಾವರಿ ಅಧಿಕಾರಿಗಳು ಹಾಗೂ ರೈತರು ಸಭೆ ಸೇರಿ ಕಾನೂನು ಬದ್ಧವಾಗಿ ಹೂಳೆತ್ತಲು ಸಭೆಯಲ್ಲಿ ನಿರ್ಣಹಿಸಿದ ಪ್ರಕಾರ ಶ್ರೀ ಶ್ರೀ ಶ್ರೀ ಕೊಪ್ಪಳ ಗವಿಸಿದ್ಧೇಶ್ವರ | ಮಹಾಸ್ವಾಮಿಗಳು ಇವರ ಕೃಪ ಆಶಿರ್ವಾದದಿಂದ ದಿನಾಂಕ 04/06/2019 ರಂದು ಬೆಳೆಗ್ಗೆ 11-30ಕ್ಕೆ ಕಾಸನಕಂಡಿ ರಸ್ತೆಯ ತುಂಗಭದ್ರಾ ಜಲಾಶಯದ ಇನ್ನೀರಿನಲ್ಲಿ ಹೂಳೆತ್ತುವ. ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದು. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ಹಿತೈಷಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಜನಾರ್ಧನ ಹುಲಿಗಿ ಸಂಚಾಲಕರು ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತುವ ರೈತರ ಕ್ರಿಯಾ ಸಮಿತಿ, ಕೊಪ್ಪಳ ವಿನಂತಿಸಲಾಗಿದೆ.

Please follow and like us:
error