ಶಿಕ್ಷಕ ಉತ್ತಮ ಶಿಕ್ಷಣ ನೀಡುವ ಸತ್ಯ ಸಂಕಲ್ಪ ಮಾಡಬೇಕು- ಶ್ರೀ ಶಿವಪ್ರಕಾಶನಂದ ಸ್ವಾಮಿ

ಕೊಪ್ಪಳ, ೧೭- ಮಕ್ಕಳಿಗೆ ಶಿಕ್ಷಕರು ಉತ್ತಮ ದಾರಿದೀಪ ವಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತಹ ಶಿಕ್ಷಣವನ್ನು ನೀಡಬೇಕು. ಪ್ರತಿ ಶಿಕ್ಷಕ ಉತ್ತಮ ಶಿಕ್ಷಣ ನೀಡುವ ಸತ್ಯ ಸಂಕಲ್ಪ ಮಾಡಬೇಕು ಎಂದು ಭಾಗ್ಯನಗರ ಶ್ರೀ ಶಿವಪ್ರಕಾಶನಂದ ಸ್ವಾಮಿಗಳು ಹೇಳಿದರು.
ಅವರು ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ತಾಲೂಕ ಅನುದಾ ನರಹಿತ ಶಾಲಾ ಆಡಳಿತ ಮಂ ಡಳಿಗಳ ಒಕ್ಕೂಟದ ವತಿಯಿಂದ ಡಾ, ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾ ಚರಣೆ ಹಾಗೂ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಶಿಕ್ಷಣದಲ್ಲಿ ಪ್ರಾಥಮಿಕ ಶಿಕ್ಷಣ ಮಗುವಿನ ಜೀವನದಲ್ಲಿ ಅತ್ಯಂತ ಮಹತ್ವದ್ದು. ಮಕ್ಕಳು ಉನ್ನತ ವ್ಯಾಸಂಗ ಮಾಡಿದರು ಸಹ ನೆನಪಿಟ್ಟುಕೊಳ್ಳುವುದು ಪ್ರಾಥಮಿಕ ಶಿಕ್ಷಕರನ್ನೆ ವ್ಯಕ್ತಿಯ ಪ್ರತಿ ಹೆಜ್ಜೆಗೆ ಆಸರೆಯಾಗುವುದು ಶಿಕ್ಷಣಸ ಜ್ಞಾನ ಮಾತ್ರ ಎಂದರು.
ಹೈದ್ರಾಬಾದ್ ಕರ್ನಾಟ ಕದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಅತ್ಯಂತ ದೊಡ್ಡ ಸೇವೆಯನ್ನು ಮಾಡುತ್ತಿವೆ. ಗ್ರಾಮಿಣ ಭಾಗದಲ್ಲಿಯು ಸಹ ಉತ್ತಮ ಶಿಕ್ಷಣ ನೀಡಿ ದಾನದಲ್ಲೆ ಶ್ರೇಷ್ಠ ದಾನ ಶಿಕ್ಷಣ ದಾನ ಮಾಡುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾ ಟಿಸಿದ ಬಿಜೆಪಿ ಮುಖಮಡ ಸಿ.ವಿ.ಚಂದ್ರಶೇಖರ ಮಾತನಾಡಿ ದೇಶದ ಅಭಿವೃದ್ಧಿಗೆ ರೈತ, ಸೈನಿ ಕರ ಕೊಡುಗೆಯು ಎಷ್ಟು ಮುಖ್ಯವೋ ಶಿಕ್ಷರ ಕೊಡುಗೆ ಯು ಅತ್ಯಂತ ಮಹತ್ವ ವಾದದ್ದು ಅತುತ್ತಮ ಶಿಕ್ಷಣ ನೀಡುವ ಮೂಲಕ ಸಾರ್ಥಕ ಸೇವೆಯ ನ್ನು ಖಾಸಗಿ ಶಿಕ್ಷಕರು ಮಾಡುತ್ತಾರೆ.
ಗ್ರಾಮೀಣ ಭಾಗದಲ್ಲಿಯೂ ಸಹ ಉತ್ತಮ ಶಿಕ್ಷಣ ನೀಡುವ ಸಂಸ್ಥೆಗಳ ಸೇವೆ ಮೆಚ್ಚುವಂತಹ ಗ್ರಾಮೀಣ ಬಡವರಿಗೂ ಸಹ ಉತ್ತಮ ಶಿಕ್ಷಣ ನೀಡುತ್ತಾ ಸರ್ಕಾರಕ್ಕಿಂತ ಉತ್ತಮ ಸೇವೆ ಮಾಡುತ್ತಿರುವ ಶಿಕ್ಷಣ ಸೇವೆ ಅವಿಸ್ಮರಣೀಯ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿ ತರಿದ್ದ ಜಿಲ್ಲಾ ಕಾರ್ಯದರ್ಶಿ ಪ್ರಲ್ಹಾದ ಅಗಳಿ ಮಾತನಾಡಿ ಖಾಸಗಿ ಶಿಕ್ಷಣ ಸಂಸ್ಥೆಯನ್ನು ಸ್ವತ್ಪವು ಸ್ಮರಿಸದ ಸರ್ಕಾರ ದಿನಕ್ಕೊಂದು ಅವೈಜ್ಞಾನಿಕ ನಿಯಮದ ಮೂಲಕ ನಿತ್ಯ ಕಿರುಕುಳ ನೀಡುತ್ತದೆ.
ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಖಾಸಗಿಶಿಕ್ಷಣ ಸಂಸ್ಥೆಗಳು ಶಿಕ್ಷಣ ಇಲಾಖೆಯ ದಿನ ನಿತ್ಯದ ಕಿರಿ-ಕಿರಿಯಿಂದ ಮಕ್ಕಳ ಶಿಕ್ಷಣಕ್ಕಿಂತ ಹೆಚ್ಚು ಸಮಯ ಇಲಾಖೆಗೆ ನೀಡು ವಂತಹ ಪರಿಸ್ಥಿತಿ ನಿರ್ಮಾ ಣವಾಗಿದ್ದು, ಅತಂಹ ಪರಿಸ್ಥಿತಿ ಯಲ್ಲೂ ಸಹ ಖಾಸಗಿ ಶಾಲೆಗಳು ಉತ್ತಮ ಶಿಕ್ಷಣ ಮತ್ತು ಉತ್ತಮ ಫಲಿತಾಂಶ ನೀಡುತ್ತೇವೆ ಎಂದರು.
ಜೆಡಿಎಸ್ ಮುಖಂಡ ವೀರೇಶ ಮಹಾಂತಯ್ಯನಮಠ ಮಾತನಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಲವಾರು ಸಮಸ್ಯೆ ಗಳನ್ನು ಎದುರಿಸುತ್ತಿದ್ದು ಮಕ್ಕಳ ಭವಿಷ್ಯದ ದೃಷ್ಠಿಯಿಂದ ಇಲಾ ಖೆ, ಸರ್ಕಾರ ಖಾಸಗಿ ಸಂಸ್ಥೆಗ ಳಿಗೆ ಪ್ರೋತ್ಸಾಹಿಸಬೇಕು ಎಂ ದರು.
ಈ ಸಂದರ್ಭದಲ್ಲಿ ಹೈಕ ಅಧ್ಯಕ್ಷ ರಾಘವೇಂದ್ರ ಪಾನಘ ಂಟಿ ಅಧ್ಯಕ್ಷತೆ ವಹಿಸಿದ್ದರು. ಯಲಬುರ್ಗಾ ತಾಲೂಕು ಅಧ್ಯಕ್ಷ ಸಿ.ಎಚ್.ಪಾಟೀಲ, ಶಿಕ್ಷಣ ಸಂಸ್ಥೆಗಳ ವೆಂಕನಗೌಡ್ರ ಹಿರೇಗೌಡ್ರ, ದಾನಪ್ಪ ಕವಲೂರ, ಮಲ್ಲಿಕಾರ್ಜುನ ಚೌಕಿಮಠ, ಮಾಜಿ ಸಚಿವ ವಿರುಪಾಕ್ಷಪ್ಪ ಅಂಗಡಿ, ತಾಲೂಕಾಧ್ಯಕ್ಷ ಶಿವಕುಮಾರ ಕುಕನೂರ ತಾ ಲೂಕಾ ಪ್ರಧಾನ ಕಾರ್ಯ ದರ್ಶಿ ನಿತೇಶ ಪುಲಸ್ಕರ್ ಇತರರು ಇದ್ದರು.

Please follow and like us:
error