ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ – ಶಾಸಕ ಕೆ ರಾಘವೇಂದ್ರ ಹಿಟ್ನಾಳ

ಕೊಪ್ಪಳ : 21 ದದೆಗಲ್‍ ಗ್ರಾಮದ ಸರಕಾರಿ ಡಿಪ್ಲೋಮಾ ಕಾಲೇಜುನಲ್ಲಿ ಕಲ್ಯಾಣ ಕರ್ನಾಟಕ ಯೋಜನೆಯಡಿಯಲ್ಲಿ 03 ಕೋಟಿ 57 ಲಕ್ಷದ ಬಾಲಕ, ಬಾಲಕೀಯರ ವಸತಿ ನಿಲಯ, ಉಪಕರಣಗಳ ಶೇಖರಣಾ ಕೊಠಡಿ ಹಾಗೂ ತರಬೇತಿ ಕೇಂದ್ರದ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಬಳಿಕ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ತಾಂತ್ರಿಕ ಶಿಕ್ಷಣವು ದೈಹಿಕ ಯಂತ್ರಾಂಶ ಮತ್ತು ಶೈಕ್ಷಣಿಕ ಸಿದ್ದಾಂತದ ಬಳಿಕೆಯಾಗಿದೆ.  ಇಂದು ಕಂಪ್ಯೂಟರ್‍ ಆಧಾರಿತ ಆನ್‍ ಲೈನ್‍ ಕಲಿಕೆಗೆ ತಂತ್ರಾಜ್ಞಾನವನ್ನು ಹೆಚ್ಚು ಬಳಿಸಿಕೊಳ್ಳಲಾಗುತ್ತೀದೆ. ವಿದ್ಯಾರ್ಥಿಗಳು ಆಧುನಿಕ ಶಿಕ್ಷಣದ ಕಡೆಗೆ ಹೆಚ್ಚು ಒಲವುನ್ನು ತೋರಿಸಿ, ಸ್ಪರ್ದಾತ್ಮಕ ಜಗತ್ತಿನಲ್ಲಿ ಒಳ್ಳೆಯ ಅವಕಾಶಗಳನ್ನು ಕಲ್ಪಿಸಿ ಕೊಂಡು ತಮ್ಮ ಭವಿಷ್ಯವನ್ನು ನಿರೂಪಿಸಿಕೊಳ್ಳಬೇಕು, ಕೇವಲ ಸರಕಾರಿ ನೌಕರಿಗಳ ಮೇಲೆ ಅವಲಂಭಿತರಾಗದೆ ಸ್ವಯಂ ಉದ್ಯೋಗ- ಸ್ವಯಂ ಉತ್ಪಾದನ ಘಟಕಗಳನ್ನು ಪ್ರಾರಂಭಿಸುವ ಕೌಶಲ್ಯತೆ ತಾಂತ್ರಿಕ ಶಿಕ್ಷಣದಿಂದ ಹೆಚ್ಚು ಸಹಕಾರಿಯಾಗಲಿದೆ.  ಇಂತಹ ಸೌಲಭ್ಯಗಳ ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ನಿರುಪಿಕೊಳ್ಳುವ ಸಾಮರ್ಥವನ್ನು ಹೆಚ್ಚಿಸ ಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಸದಂರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ಎಸ್‍.ಬಿ ನಾಗರಳ್ಳಿ, ಟಿಎಪಿಎಮ್‍ಸಿ ಅಧ್ಯಕ್ಷ ಜುಲ್ಲುಖಾದರಿ, ನಗರಸಭಾ ಸದಸ್ಯರುಗಳಾದ ಬಸಯ್ಯ ಹೀರೆಮಠ, ವಿರುಪಾಕ್ಷ ಮೋರನಾಳ, ಮೈಹೆಬೂಬ್ ಅರಗಂಜಿ, ಅಜಿಮ್‍ ಅತ್ತಾರ, ಅಕ್ಬರ್‍ ಪಾಷ ಪಲ್ಟನ್‍, ಮುಖಡಂರುಗಳಾದ ಗಾಳೆಪ್ಪ ಪೂಜಾರ್‍, ಖಾಟನ್ ಪಾಷ, ಶಿವಕುಮಾರ ಪೌಲಿ ಶೆಟ್ಟರ್‍,ಹನುಮಂತ ಹಳ್ಳಿಕೇರಿ, ಪರಶುರಾಮ ಕೆರೆಹಳ್ಳಿ, ಸಲೀಂ ಅಳವಂಡಿ, ಅಂದಾನಸ್ವಾಮಿ, ಮುತ್ತುರಾಜ ಹಾಲವರ್ತಿ ಇನ್ನೂ ಅನೇಕರ ಮುಖಡಂರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಕಲಚೇತನರಿಗೆ ಶಾಸಕರಿಂದ ತ್ರಿ-ಚಕ್ರ ವಾಹನ ವಿತರಣೆ :  ಶಾಸಕ ಕಾರ್ಯಲಯದ ಆವರಣದಲ್ಲಿ ೨೦೧೮-೧೯ನೇ ಸಾಲಿನ ಶಾಸಕರ ಅನುದಾನದಡಿಯಲ್ಲಿ ಕ್ಷೇತ್ರದ ೧೦ ವಿಕಲಚೇತನ ಫಲಾನುಭವಿಗಳಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ತ್ರಿ-ಚಕ್ರ ವಾಹನ ವಿತರಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ಎಸ್.ಬಿ ನಾಗರಳ್ಳಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷ, ಕರಗೋಡ ರವಿ ಯಾದವ, ಮೌಲಾಹಿಸೇನ್ ಜಮದಾರ, ಹುಸೇನ ಫೀರ ಮುಜಾವರ ಹಾಗೂ ಜಿಲ್ಲಾ ಅಂಗ ವಿಕಲ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error