ತಂತ್ರಜ್ಞಾನ ರಚನಾತ್ಮಕ ಕಾರ್ಯಕ್ಕೆ ಬಳಕೆಯಾಗಲಿ – ರಾಜಶೇಖರ ಅಂಗಡಿ

ಕೊಪ್ಪಳ   ಜ.10:  ಆಧುನಿಕ ತಂತ್ರಜ್ಞಾನ ಮತ್ತು ಮಾಹಿತಿ ಯುಗದಲ್ಲಿ ಯುವಕರಿಗೆ ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಗಳ ಮಾರ್ಗದರ್ಶನದ ಅಗತ್ಯವಿದೆ .ಅತ್ಯಾಧುನಿಕ ಜ್ಞಾನ ರಚನಾತ್ಮಕ ಕಾರ್ಯಗಳಿಗೆ ಬಳಕೆಯಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜಶೇಖರ ಅಂಗಡಿ ಹೇಳಿದರು.

ಆನೆಗೊಂದಿ ಉತ್ಸವದ ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ಇಂದು ಏರ್ಪಡಿಸಿದ್ದ ಯುವಗೋಷ್ಟಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಅತಿದೊಡ್ಡ ಪ್ರಮಾಣದಲ್ಲಿ ಯುವಶಕ್ತಿ ಹೊಂದಿರುವ ರಾಷ್ಟ್ರ ನಮ್ಮದಾಗಿದೆ.ಅವರನ್ನು ಸಮರ್ಥವಾಗಿ ಬಳಸಿಕೊಳ್ಳುವ ಕಾರ್ಯ ಆಗಬೇಕಾಗಿದೆ. ಯುವ ಸಮುದಾಯಕ್ಕೆ ಮಾದರಿಗಳನ್ನು ನಾವೆಲ್ಲ ನೀಡಬೇಕಾಗಿದೆ ಎಂದರು.

ಹೊಸ ಕಾಲದಲ್ಲಿ ಯುವ ಜನತೆ ಎಂಬ ವಿಷಯದ ಕುರಿತು ಮಾತನಾಡಿದ
ಶಂಕ್ರಯ್ಯ ಅಬ್ಬಿಗೇರಿಮಠ ಅವರು, ಹೊಸಕಾಲದ ಯುವಕರಿಗೆ ತಾವು ಸಾಗುತ್ತಿರುವ ಮಾರ್ಗ ವೈಯಕ್ತಿಕವಾಗಿ,ಸಾಮಾಜಿಕವಾಗಿ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಒಳ್ಳೆಯದಾಗಿದೆಯೇ ಎಂಬುದರ ಆತ್ಮಾವಲೋಕನ ನಡೆಯಬೇಕು.ದಾರಿ ತಪ್ಪಿದ ಯುವಜನತೆ, ಹಾದಿ ತಪ್ಪಿಸಿದ ಹಿರಿಯರು ಎಂದು ವರ್ತಮಾನವನ್ನು ವ್ಯಾಖ್ಯಾನಿಸಿದ ಅವರು,
ಬೌದ್ಧಿಕ, ಜ್ಞಾನ ಮತ್ತು ಮನೋವಲಯಗಳ ವೈಜ್ಞಾನಿಕ ವಿಕಾಸದ ಆಧಾರದಲ್ಲಿ ಯುವ ಸಮುದಾಯವನ್ನು ಕಟ್ಟಬೇಕಾಗಿದೆ.ಯುವಕರಿಗೆ ಪೂರ್ವಾಗ್ರಹಪೀಡಿತವಾದ ಕನ್ನಡಕದ ( ಚಾಳೀಸಿನ) ಮೂಲಕ ಸಮಾಜ ನೋಡುವಂತೆ ಮಾಡುವ ವ್ಯವಸ್ಥಿತ ಕಾರ್ಯಗಳು ನಡೆಯುತ್ತಿವೆ.ಅವರನ್ನು ಸ್ವತಂತ್ರವಾಗಿ ಆಲೋಚಿಸಲು ಬಿಡುತ್ತಿಲ್ಲ.ಅಂತಃಪ್ರಜ್ಞೆ, ಆತ್ಮವಿಶ್ವಾಸ ಇಲ್ಲದಂತ ಯುವ ಸಮುದಾಯವನ್ನು ನಾವು ನೋಡುತ್ತಿದ್ದೇವೆ.
ಸ್ವಾರ್ಥದ ಅಂಶಗಳು ಎಲ್ಲರಲ್ಲಿಯೂ ಇರುತ್ತದೆ. ಆದರೆ ಸಕಾರಾತ್ಮಕ ಬೆಳವಣಿಗೆಯ ಪ್ರಮಾಣ ಕಡಿಮೆಯಾಗುತ್ತಿರುವುದು ವಿಷಾದನೀಯ. ಭಾವನಾತ್ಮಕ ಅಸ್ಥಿರತೆ ಯುವಜನತೆಯನ್ನು ಹೆಚ್ಚು ಕಾಡುತ್ತಿದೆ.ಪ್ರಚಾರದ ಹುಚ್ಚು, ಬೇಗ ಪ್ರತಿಫಲ ನಿರೀಕ್ಷೆ ಮಾಡುವ ಮನಸ್ಥಿತಿಗಳು ಯುವಜನರನ್ನು ನಕಾರಾತ್ಮಕ ದಿಕ್ಕಿನಲ್ಲಿ ಕೊಂಡೊಯ್ಯುತ್ತಿರುವುದು ದುರಂತದ ಸಂಗತಿಯಾಗಿದೆ.ವಿಜ್ಞಾನ, ತಂತ್ರಜ್ಞಾನ ,ಸಿನೆಮಾ, ಮಾಧ್ಯಮ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಿರುವ ಯುವ ಸಮುದಾಯವೂ ಇದೆ.ಆದರೆ ಅವರ ಪ್ರಮಾಣ ಕಡಿಮೆಯಾಗಿದೆ. ಸೆಮಿಸ್ಟರ್ ಆಧಾರಿತ ಶಿಕ್ಷಣ ವಿದ್ಯಾರ್ಥಿಗಳನ್ನು ಉರುವಲು ಹೊಡೆಯುವ ಯಂತ್ರಗಳನ್ನಾಗಿಸಿದೆ, ಕೌಶಲ್ಯಗಳು ನಿರ್ಮಾಣವಾಗುವಂತ ಶಿಕ್ಷಣ ನಾವು ನೀಡುತ್ತಿಲ್ಲ.ನೈತಿಕ ಮೌಲ್ಯಗಳು ಮತ್ತು ಬಾಂಧವ್ಯದ ಕುಸಿತ ಹೊಸ ತಲೆಮಾರಿನ ಯುವಸಮುದಾಯಕ್ಕಷ್ಟೇ ಅಲ್ಲ ಒಟ್ಟು ಸಮಾಜದ ತಲ್ಲಣವಾಗಿದೆ. ಇದಕ್ಕೆ ಒಟ್ಟು ಪರಿಹಾರಗಳನ್ನು ಹುಡುಕುವ ಕಾರ್ಯಗಳು ಆಗಬೇಕಿದೆ ಎಂದರು‌.

ಕೊಪ್ಪಳ ಜಿಲ್ಲೆಯ ಯುವ ಸಂಘಟನೆ ವಿಷಯದ ಕುರಿತು ಮಾತನಾಡಿದ ಪತ್ರಕರ್ತ ಮಂಜುನಾಥ ಗೊಂಡಬಾಳ, ಶೇ .40 ಕ್ಕೂ ಅಧಿಕ ಪ್ರಮಾಣದಲ್ಲಿರುವ ಯುವ ಸಮುದಾಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಆಯವ್ಯಯದಲ್ಲಿ ಶೇ. 01 ರಷ್ಟು ಅನುದಾನ ಮಾತ್ರ ನೀಡುತ್ತಿವೆ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಕಾಯಕಲ್ಪ ನೀಡಿ ಹೆಚ್ಚು ಕ್ರಿಯಾಶೀಲಗೊಳಿಸಬೇಕಾಗಿದೆ. ಸ್ವಚ್ಛ ಭಾರತ, ಶೌಚಾಲಯ ನಿರ್ಮಾಣ, ಎನ್ ಆರ್ ಎಲ್ ಎಂ ಇಂತಹ ಯಾವ ಯೋಜನೆಗಳು ಇಲ್ಲದ ಕಾಲದಲ್ಲಿಯೇ ಯುವಸಂಘಟನೆಗಳು ಅಂತಹ ಆಶಯಗಳನ್ನಿಟ್ಟುಕೊಂಡು ಕಾರ್ಯನಿರ್ವಹಿಸಿವೆ. ಒಂದೆರಡು ದಶಕಗಳ ಹಿಂದೆ ಬಹುತೇಕ ಎಲ್ಲ ಗ್ರಾಮ,ಪಟ್ಟಣಗಳ ಪ್ರವೇಶದಲ್ಲಿ ಯುವಕ ಸಂಘಗಳ ಫಲಕಗಳು ಕಾಣಸಿಗುತ್ತಿದ್ದವು ಇಂದು ಆ ಜಾಗೆಯನ್ನು ಜಾತಿ ಸಂಘಟನೆಗಳು ಅತಿಕ್ರಮಣ ಮಾಡಿವೆ. ನಿದ್ರೆಗಳೇ ಇಲ್ಲದ ರಾತ್ರಿ ಕಳೆದು ಅವಿರತವಾಗಿ ದುಡಿದ ಸ್ವಾಮಿ ವಿವೇಕಾನಂದರ ಸಾಧನೆಯನ್ನು ಇನ್ನೂ ಸಾವಿರ ವರ್ಷಗಳ ಕಾಲ ಮನುಕುಲ ಅಧ್ಯಯನ ಮಾಡುವಷ್ಟು ವಿಶಾಲವಾಗಿದೆ. ದೈಹಿಕ ಶ್ರಮದ ಕೆಲಸ ಮಾಡುವವರು ಬೌದ್ಧಿಕವಾಗಿ,ಮಾನಸಿಕವಾಗಿ ಕುಗ್ಗುತ್ತ ಸಾಗುತ್ತಿದ್ದಾರೆ. ಬೌದ್ಧಿಕ ಶ್ರಮ ಇರುವ ಕಾರ್ಯಗಳನ್ನು ಮಾಡುವವರು ದೈಹಿಕವಾಗಿ ದುರ್ಬಲರಾಗಿರುವದು ವೈರುಧ್ಯದ ಸಂಗತಿಯಾಗಿದೆ .ಅಂಕಗಳಿಕೆ ಆಧಾರದ ಶಿಕ್ಷಣ ಪದ್ಧತಿಯಿಂದ ನಮ್ಮ ಮಕ್ಕಳನ್ನು ಹೊರತಂದು ಸರ್ವತೋಮುಖ ಜ್ಞಾನವಂತರನ್ನಾಗಿಸಬೇಕು ಎಂದಧಾವಂತದಲ್ಲಿದೆ ರ ಮಾಧ್ಯಮದಲ್ಲಿ ಯುವಶಕ್ತಿ ಎಂಬ ವಿಷಯದ ಕುರಿತು ಡಾ.ರಾಜಶೇಖರ ನಾರಿನಾಳ ಮಾತನಾಡಿ, ಇಂದಿನ ಯುವಜನತೆ ಕ್ಷಿಪ್ರ ಮತ್ತು ಪರಿಣಾಮಕಾರಿಯಾಗಿ ಎಲ್ಲವೂ ಸಂವಹನಗೊಳ್ಳಬೇಕು ಎಂಬ ಧಾವಂತದಲ್ಲಿದೆ .ಮೌಢ್ಯಗಳ ಹರಡುವಿಕೆ, ಭಯದ ವಾತಾವರಣ ವಿಸ್ತರಿಸಲು ಪ್ರಸಾರ ಮಾಧ್ಯಮಗಳು ಬಳಕೆಯಾಗಬಾರದು ಎಂದರು.ರಾಮಮೂರ್ತಿ ನವಲಿ, ಡಾ.ನಾಗರಾಜ ಹೀರಾ, ಜಿ.ಪವನಕುಮಾರ್ ಪ್ರತಿಕ್ರಿಯೆ ನೀಡಿದರು.ಕನಕಗಿರಿ ತಹಸೀಲ್ದಾರ ರವಿ ಅಂಗಡಿ ಸನ್ಮಾನಿಸಿದರು.ಮುರಳೀಧರ ನಾಡಿಗೇರ ನಿರೂಪಿಸಿದರು‌.

Please follow and like us:
error