ತಂತ್ರಜ್ಞಾನದ ಸರಿಯಾದ ಬಳಕೆಯಿಂದ ಪಕ್ಷದ ಕಾರ್ಯ ಧನಾತ್ಮಕವಾಗಿ ಪ್ರಚುರಪಡಿಸಿ- ಸಚಿವ ಆರ್ ಶಂಕರ

| ಸಾಮಾಜಿಕ ಜಾಲತಾಣ ಕಾರ್ಯಾಗಾರದಲ್ಲಿ ಸಚಿವ ಆರ್ ಶಂಕರ ಅಭಿಮತ

ಕೊಪ್ಪಳ,ಮಾ.೦೨: ಸಾಮಾಜಿಕ ಜಾಲತಾಣದಿಂದ ಪ್ರಚಲಿತ ವಿದ್ಯಾಮಾನಗಳನ್ನು ಪ್ರಚಾರಪಡಿಸಲು ಸಹಕಾರಿಯಾಗಿದ್ದು, ಒಂದೆಡೆ ನಡೆಯುವ ಕಾರ್ಯಕ್ರಮಗಳನ್ನು ನೇರಪ್ರಸಾರದಲ್ಲಿ ವಿಕ್ಷಿಸಲು ಉಪಯುಕ್ತವಾಗಿದೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವರಾದ ಆರ್ ಶಂಕರ ಅವರು ಹೇಳಿದರು.

ಅವರು ನಗರದ ಭಾರತೀಯ ಜನತಾ ಪಾರ್ಟಿ ಕೊಪ್ಪಳ ಜಿಲ್ಲಾ ಕಾರ್ಯಾಲಯದಲ್ಲಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮ ಪಂಚಾಯತ ಸದಸ್ಯನಿಂದ ಹಿಡಿದು ದೇಶದ ಪ್ರಧಾನ ಮಂತ್ರಿಗಳು ಮಾಡುವ ಜನಪರ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಚಟುವಟಿಕೆಯು ನಡೆಯುತ್ತಿದೆ. ಪ್ರತಿಯೊಬ್ಬರು ಸ್ಮಾರ್ಟ ಪೋನ್ ಹೊಂದಿದ್ದು, ಅಂತರಜಾಲ ಬಳಕೆ ಹೆಚ್ಚಾಗಿದೆ. ಕೋವಿಡ್-೧೯ ಸಂಕಷ್ಟ ಪರಿಸ್ಥಿತಿಯಲ್ಲಿ ಎಷ್ಟೋ ಸಭೆ ಸಮಾರಂಭಗಳು, ವಿದ್ಯಾರ್ಥಿಗಳ ತರಗತಿಗಳು ಆನ್‌ಲೈನ್‌ನಲ್ಲಿ ನಡೆದಿದೆ. ಈ ತಂತ್ರಜ್ಞಾನದ ಬಳಕೆಯನ್ನು ಕಾರ್ಯಕರ್ತರು ಸರಿಯಾದ ರೀತಿ ಬಳಕೆ ಮಾಡಿ ಪಕ್ಷದ ಕಾರ್ಯಕ್ರಮಗಳನ್ನು ಧನಾತ್ಮಕವಾಗಿ ಪ್ರಚುರಪಡಿಸಿ ಎಂದು ಸಲಹೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರಗೌಡ ಪಾಟೀಲ ಹಲಗೇರಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಸಾಮಾಜಿಕ ಜಾಲತಾಣದ ರಾಜ್ಯ ಸಹ ಸಂಚಾಲಕ ಪ್ರಶಾಂತ ಜಾದವ, ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ನಾಗೂರು, ಜಿಲ್ಲಾ ಸಂಚಾಲಕ ಅಮೀತ ಜೋಷಿ, ಸಹ ಸಂಚಾಲಕ ಅನು ಶಿಲ್ಪಿ, ಜಿ.ಪಂ ಕೆಡಿಪಿ ಸದಸ್ಯ ಅಮರೇಶ ಕರಡಿ, ರಾಷ್ಟ್ರೀಯ ಪರಿಷತ ಸದಸ್ಯ ಸಿ.ವಿ ಚಂದ್ರಶೇಖರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ ಗುಳಗಣ್ಣವರ, ಜಿಲ್ಲಾ ಮಾದ್ಯಮ ಸಂಚಾಲಕ ಬಿ.ಗಿರೀಶಾನಂದ ಜ್ಞಾನಸುಂದರ, ಹಾಗೂ ಎಲ್ಲಾ ಮಂಡಲದ ಸಾಮಾಜಿಕ ಜಾಲತಾಣದ ಸಂಚಾಲಕ, ಸಹ ಸಂಚಾಲಕರು ಉಪಸ್ಥಿತರಿದ್ದರು.

Please follow and like us:
error