ಡಿ.11ರಂದು ಖಾಸಗಿ ಶಾಲಾ ಒಕ್ಕೂಟದಿಂದ ಪ್ರತಿಭಟನೆ

Koppal ಕೊರೊನಾ ಸೋಂಕಿನಿಂದ ಸಾಕಷ್ಟು ಆರ್ಥಿಕ ಸಂಕಷ್ಟ ಹೊರತಾಗಿ ಶಾಲೆಗಳು ಓಪನ್ ಇಲ್ಲದೆ ಮಕ್ಕಳಿಗೆ ಮಾನಸಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳು ಎದುರಾಗಿವೆ. ಆದ್ರೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೊಂದಲಮಯ ಹೇಳಿಕೆಯನ್ನು ನೀಡುವ  ಮಲತಾಯಿ ಧೋರಣೆಯನ್ನು ತೋರುತ್ತಿದ್ದಾರೆ ಎಂದು  ಕೊಪ್ಪಳ ಜಿಲ್ಲೆಯ ಖಾಸಗಿ ಅನುದಾನರಹಿತ ಶಾಲ ಆಡಳಿತ ಮಂಡಳಿ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ.

ಕೊಪ್ಪಳ ಪತ್ರಿಕಾಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವ ಅಧ್ಯಕ್ಷ ರಾಘವೇಂದ್ರ ಪಾನಘಂಟಿ ಮಾತ್ನಾಡಿ, ಖಾಸಗಿ ಶಾಲೆಗಳ ಬಗ್ಗೆ ಸರ್ಕಾರಕ್ಕೆ ಚಿಂತನೆ ಇಲ್ಲ. ಅವರ ಸಮಸ್ಯೆಗಳಿಗೆ  ಪರಿಹಾರವಾಗಲಿ ಅಥವಾ ನೆರವಿಗೆ ಬಾರದೇ ಇರುವುದು ಶೋಚನೀಯ, ಹಾಗಾಗಿ ಡಿಸೆಂಬರ್ 11 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಮ್ಮ ವಿವಿಧ ಬೇಡಿಕೆಗೆ ಒತ್ತಾಯಿಸಲಿದ್ದೇವೆ. ಶಾಲಾ ನವೀಕರಣವನ್ನು ನಿರ್ಬಂಧವಿಲ್ಲದೆ ಮುಂದಿನ ಐದು ವರ್ಷಗಳಿಗೆ ನವೀಕರಣ ಮಾಡುವುದು, ಕಟ್ಟಡ ಹಾಗೂ ವಾಹನಗಳ ಸಾಲ ಮರುಪಾವತಿಗೆ ಒಂದು ವರ್ಷ ವಿನಾಯತಿ ನೀಡುವುದು,  ಖಾಸಗಿ ಶಿಕ್ಷಕರಿಗೆ ಸಿಬ್ಬಂದಿಗೆ  10000 ರೂ ಸಂಕಷ್ಟ ಪರಿಹಾರ, ಆರ್ ಟಿ ಇ ಶುಲ್ಕ ಮರುಪಾವತಿ, 25 ವರ್ಷಗಳಿಂದ ನಡೆಯುತ್ತಿರುವ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು, ಕಲ್ಯಾಣ ಕರ್ನಾಟಕಕ್ಕೆ ಒಳಪಡುವ ಎಲ್ಲಾ ಶಾಲೆಗಳಿಗೆ 371 ಜೆ ಅಡಿಯಲ್ಲಿ ಮೂಲಭೂತ ಸೌಕರ್ಯಗಳ‌ನ್ನು ಒದಗಿಸುವುದು, ರಾಜ್ಯದಲ್ಲಿ ಅಧಿಕೃತ ಶಾಲೆ ಆರಂಭವಾಗುವವರೆಗೆ ಸಾಲದ ಕಂತುಗಳು, ವಾಹನ ತೆರೆಗೆ, ಇನ್ಷುರೆನ್ಸ್ ಪಾವತಿಗೆ ವಿನಾಯಿತಿ ಇನ್ನಿತರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ  ಮನವಿ ಮಾಡಲಾಗುವುದು ಎಂದು ಹೇಳಿದರು.

 

ಈ ಸಂದರ್ಭದಲ್ಲಿ  ಖಾಸಗಿ ಶಾಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ಪ್ರಹ್ಲಾದ್ ಅಗಳಿ, ತಾಲೂಕ ಅಧ್ಯಕ್ಷ ಶಾಹೀದ್ ತಹಶೀಲ್ದಾರ್, ನಿರ್ದೇಶಕ ಎ ಹೆಚ್ ಆತ್ತನೂರು, ದಾನಪ್ಪ ಕವಲೂರು, ಅಲಿಮುದ್ದೀನ್  ಸೇರಿದಂತೆ ಇನ್ನಿತರರು ಇದ್ದರು

 

Please follow and like us:
error