ಡಿ. ೨೬ ರಿಂದ ಜಿಲ್ಲಾ ಹಾಗೂ ರಾಜ್ಯ ಕ್ರೀಡಾಶಾಲೆಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ


ಕೊಪ್ಪಳ ಡಿ. ೨೪   ಕೊಪ್ಪಳ ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ೨೦೧೯-೨೦ನೇ ಸಾಲಿಗೆ ಜಿಲ್ಲಾ ಹಾಗೂ ರಾಜ್ಯ ಕ್ರೀಡಾಶಾಲೆ/ ವಸತಿ ನಿಲಯಗಳಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯನ್ನು ಡಿ. ೨೬ ರಿಂದ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಆಯೋಜಿಸಲಾಗಿದೆ.
೨೦೧೯-೨೦ನೇ ಸಾಲಿಗೆ ಜಿಲ್ಲಾ ಹಾಗೂ ರಾಜ್ಯ ಕ್ರೀಡಾಶಾಲೆ/ ವಸತಿ ನಿಲಯಗಳಿಗೆ ಕೊಪ್ಪಳ ಜಿಲ್ಲೆಯಾದ್ಯಂತ ವಿವಿಧ ಕೇಂದ್ರಗಳಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತಿದ್ದು, ಪ್ರಸ್ತುತ ಸಾಲಿನಲ್ಲಿ ೪ನೇ ತರಗತಿ ಹಾಗೂ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕ/ ಬಾಲಕೀಯರು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ. ೪ನೇ ತರಗತಿಯ ಬಾಲಕ/ ಬಾಲಕೀಯರು ದಿನಾಂಕ ೦೧-೦೬-೨೦೧೯ಕ್ಕೆ ೧೧ ವರ್ಷದೊಳಗಿರಬೇಕು ಅದೇ ರೀತಿಯಾಗಿ ೭ನೇ ತರಗತಿಯವರು ದಿನಾಂಕ ೦೧-೦೬-೨೦೧೯ಕ್ಕೆ ೧೪ ವರ್ಷದೊಳಗಿರಬೇಕು.
ಆಯ್ಕೆ ಪ್ರಕ್ರಿಯೆ ವಿವರ : ಜಿಲ್ಲಾ ಹಾಗೂ ರಾಜ್ಯ ಕ್ರೀಡಾಶಾಲೆ/ ವಸತಿ ನಿಲಯಗಳಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಯುವ ದಿನ ಹಾಗೂ ಸ್ಥಳ ವಿವರ ಇಂತಿದೆ. ಡಿ. ೨೬ ರಂದು ಬೆಳಿಗ್ಗೆ ೧೦ ರಿಂದ (ಆಯ್ಕೆ ಮುಗಿಯುವವರೆಗೆ) ಗಂಗಾವತಿ ತಾಲೂಕ ಕ್ರೀಡಾಂಗಣದಲ್ಲಿ. ಡಿ. ೨೭ ರಂದು ಬೆಳಿಗ್ಗೆ ೧೦ ರಿಂದ ಕಾರಟಗಿ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ, ಡಿ. ೨೮ ರಂದು ಬೆಳಿಗ್ಗೆ ೧೦ ರಿಂದ ಕನಕಗಿರಿ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ, ಡಿ. ೨೯ ರಂದು ಬೆಳಿಗ್ಗೆ ೧೦ ರಿಂದ ಕುಷ್ಟಗಿ ತಾಲೂಕ ಕ್ರೀಡಾಂಗಣದಲ್ಲಿ, ಡಿ. ೩೧ ರಂದು ಬೆಳಿಗ್ಗೆ ೧೦ ರಿಂದ ಯಲಬುರ್ಗಾ ತಾಲೂಕು ಕ್ರೀಡಾಂಗಣದಲ್ಲಿ, ೨೦೧೯ರ ಜನವರಿ. ೦೧ ರಂದು ಬೆಳಿಗ್ಗೆ ೧೦ ರಿಂದ ಕುಕನೂರ ವಿದ್ಯಾನಂದ ಗುರುಕುಲ ಶಾಲಾ ಆವರಣದಲ್ಲಿ, ಜ. ೦೨ ರಂದು ಬೆಳಿಗ್ಗೆ ೧೦ ರಿಂದ ಕೊಪ್ಪಳ ತಾಲೂಕಿನ ಮುನಿರಾಬಾದ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ ಮತ್ತು ಜ. ೦೩ ರಂದು ಬೆಳಿಗ್ಗೆ ೧೦ ರಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ನಿಗದಿತ ದಿನಾಂಕಗಳಂದು ಆಸಕ್ತವುಳ್ಳ ಬಾಲಕ/ ಬಾಲಕೀಯರು ತಮ್ಮ ಶಾಲೆಯಿಂದ ಜನ್ಮ ದಿನಾಂಕ ಹಾಗೂ ವ್ಯಾಸಂಗ ಮಾಡುತ್ತಿರುವ ಧೃಡೀಕರಣ ಪತ್ರದೊಂದಿಗೆ ತಮ್ಮ ಪಾಲಕರ/ ಪೋಷಕರೊಂದಿಗೆ ಹಾಜರಿರಬೇಕು. ಭಾಗವಹಿಸುವ ಬಾಲಕ/ಬಾಲಕೀಯರಿಗೆ ಒಂದು ವೇಳೆ ತಮ್ಮ ಕೇಂದ್ರದಲ್ಲಿ ಭಾಗವಹಿಸಲು ಅವಕಾಶ ಸಿಗದೇ ಇದ್ದ ಪಕ್ಷದಲ್ಲಿ ಮತ್ತೊಂದು ಕೇಂದ್ರದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಈ ಕ್ರೀಡಾಶಾಲೆ /ವಸತಿ ನಿಲಯಗಳಿಗೆ ದೈಹಿಕ ಅರ್ಹತಾ ಪರಿಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಮುಂದಿನ ಹಂತಕ್ಕೆ ಅವಕಾಶವಿರುತ್ತದೆ. ಆಯ್ಕೆ ನಾರ್ಮ್ಸ್‌ನಲ್ಲಿ ಶೇ.೪೦ ಮೇಲ್ಪಟ್ಟ ಅಂಕಗಳಿಸಿದವರಿಗೆ ಮಾತ್ರ ಮುಂದಿನ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಮತ್ತು ಆಯ್ಕೆಗೆ ಬರುವವರಿಗೆ ಯಾವುದೇ ದಿನಭತ್ಯೆ ಮತ್ತು ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಮೊ.ಸಂ. ೯೪೮೦೮೮೬೪೭೫, ಖೋಖೋ ತರಬೇತುದಾರ ಎ.ಎನ್.ಯತಿರಾಜು ಮೊ.ಸಂ. ೯೪೪೮೬೩೩೧೪೬, ವಾಲಿಬಾಲ್ ತರಬೇತುದಾರ ಸುರೇಶ ಯಾದವ ಮೊ.ಸಂ. ೯೯೦೧೫೨೭೩೩೩, ಅಥ್ಲೆಟಿಕ್ಸ್ ತರಬೇತುದಾರ ತಿಪ್ಪಣ್ಣ ಮಾಳಿ ಮೊ.ಸಂ. ೮೭೪೬೯೩೩೯೨೧, ಕ್ರೀಡಾಶಾಲೆ ಸಹಾಯಕ ಹನುಮೇಶ ಪೂಜಾರ ಮೊ.ಸಂ. ೮೦೯೫೯೩೬೩೯೫, ಇವರನ್ನು ಸಂಪರ್ಕಿಸಬಹುದು. ಆಸಕ್ತ ಬಾಲಕ/ ಬಾಲಕೀಯರು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಸದುಪಯೋಗಡೆದುಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error