ಡಿಸಿ ಪರ ಬ್ಯಾಟ್ ಬೀಸಿದ ಶಾಸಕ ರಾಘವೇಂದ್ರ ಹಿಟ್ನಾಳ 

koppal ಕೊಪ್ಪಳದ ಹುಲಿಕೆರೆಗೆ ಭಾಗೀನ ಅರ್ಪಿಸಿ ಮಾತನಾಡಿದ ಶಾಸಕರು  ಜಿಲ್ಲಾಧಿಕಾರಿಗಳ ವರ್ಗಾವಣೆಯ ಹುನ್ನಾರದ ವಿರುದ್ದ ಮಾತನಾಡಿ  ಜಿಲ್ಲಾಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ಧಾರೆ ಬಂದು ಕೇವಲ 3 ತಿಂಗಳಾಗಿವೆ. ಈ ಸಂದರ್ಭದಲ್ಲಿ ಅವರ ವರ್ಗಾವಣೆಗೆ ಆಗ್ರಹಿಸಿಸುವುದು ಸರಿಯಲ್ಲ. ಕೆಲವು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಹೇಳಿಕೊಂಡಿದ್ಧಾರೆ,  ಕೆಲಸ ಮಾಡುವಾಗ ಇಂತಹ ಸಮಸ್ಯೆಗಳು ಸಾಮಾನ್ಯ ಎಂದು  ಡಿಸಿ ಪರ ಬ್ಯಾಟ್ ಬೀಸಿದರು ಶಾಸಕ ರಾಘವೇಂದ್ರ ಹಿಟ್ನಾಳ .

ಕಾರಟಗಿಯಲ್ಲಿ ಬಾವಿಯನ್ನು ಅತಿಕ್ರಮಣ ಮಾಡಿ ಮನೆ ಕಟ್ಟಿರುವ ಪ್ರಕರಣದ ಬಗ್ಗೆ ನಿಮಗೆಲ್ಲಾ ಗೊತ್ತಿದೆ. ಶಾಸಕರಿಗೆ ಮರ್ಯಾದೆ ಕೊಡುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಆದರೆ ನಾವೇ ಜನರ ಮದ್ಯೆ ಕುಳಿತರೆ ಜಿಲ್ಲಾಧಿಕಾರಿಯಾದರೂ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಮಂತ್ರಿಮಂಡಲದ ವಿಸ್ತರಣೆಯ ಸಂದರ್ಭದಲ್ಲಿ ಜಿಲ್ಲೆಯನ್ನೂ ಪರಗಣಿಸುವಂತೆ ಆಗ್ರಹಿಸಿದ್ಧೇವೆ. ಜಿಲ್ಲೆಯಲ್ಲಿ ಇಬ್ಬರು ಶಾಸಕರಿದ್ದು ಯಾರಿಗೆ ನೀಡಿದರೂ ಸಂತೋಷ ಎಂದು ಹೈಕಮಾಂಡಿಗೆ ತಿಳಿಸಿದ್ಧೇವೆ , ಜಿಲ್ಲೆಗೆ ಮಂತ್ರಿ ಸ್ಥಾನವನ್ನು ನೀಡುವಂತೆ ಪಕ್ಷದ ಹಿರಿಯ ಮುಖಂಡರಿಗೆ ಆಗ್ರಹಿಸಲಾಗಿದ್ದು ಈ ಸಲ ಮಂತ್ರಿ ಮಂಡಲ ವಿಸ್ತರಣೆಯಾದರೆ ಖಂಡಿತವಾಗಿಯೂ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದರು

 

 

Please follow and like us:
error